ETV Bharat / business

ಕೋವಿಡ್​ ಪೀಡೆಯಿಂದ ಮುಕ್ತಿ, ಮುಂದಿನ ವರ್ಷ ನೇಮಕಾತಿಯ ಸುವರ್ಣ ಸುನಾಮಿ: ನೌಕ್ರಿ.ಕಾಮ್ ಸಮೀಕ್ಷೆ - 2021ರಲ್ಲಿ ಉದ್ಯೋಗ

2020ರಲ್ಲಿ ವೈದ್ಯಕೀಯ / ಆರೋಗ್ಯ, ಐಟಿ, ಬಿಪಿಓ / ಐಟಿಇಎಸ್ ಮುಂತಾದ ಕೈಗಾರಿಕೆಗಳು ಕಡಿಮೆ ಒತ್ತಡ ಅನುಭವಿಸಿದ್ದರೆ, ಚಿಲ್ಲರೆ ವ್ಯಾಪಾರ, ಆತಿಥ್ಯ ಮತ್ತು ಪ್ರಯಾಣದಂತಹ ಕೆಲವು ಉದ್ಯಮಗಳು ಸಂಕಷ್ಟ ನಿಭಾಯಿಸಲು ಹೆಣಗಾಡಿದವು.

Hiring
ನೇಮಕಾತಿ
author img

By

Published : Dec 28, 2020, 8:14 PM IST

ನವದೆಹಲಿ: ತ್ರೈಮಾಸಿಕದ ಆರಂಭದಿಂದಲೂ ಪ್ರಮುಖ ಕೈಗಾರಿಕೆಗಳನ್ನು ಬೆಂಬಿಡದಂತೆ ಕಾಡಿದ ಕೋವಿಡ್-19 ಸೋಂಕಿನಿಂದ ಉದ್ಯೋಗ ಕಡಿತ ಕ್ಷೀಣಿಸಿ, ಉದ್ಯೋಗ ನೀಡಿಕೆ ಚೇತರಿಸಿಕೊಳ್ಳುತ್ತಿದೆ. ಮುಂಬರುವ ವರ್ಷದಲ್ಲಿ ನೇಮಕಾತಿ ಚಟುವಟಿಕೆಗಳು ಮತ್ತೆ ಪುಟಿದೇಳಲಿವೆ ಎಂದು ನೌಕ್ರಿ ಡಾಟ್​ ಕಾಮ್ ಸಮೀಕ್ಷೆ ತಿಳಿಸಿದೆ.

ಶೇ. 26ರಷ್ಟು ನೇಮಕಾತಿದಾರರು ಮುಂದಿನ 3-6 ತಿಂಗಳಲ್ಲಿ ಕೋವಿಡ್ ಪೂರ್ವ ಹಂತಕ್ಕೆ ಮರಳುವ ಮುನ್ಸೂಚನೆ ಕಾಣುತ್ತಿದೆ ಎಂದಿದ್ದರೆ, 34 ಪ್ರತಿಶತದಷ್ಟು ಜನರು ಆರು ತಿಂಗಳಿಂದ ಒಂದು ವರ್ಷದ ತೆಗೆದುಕೊಳ್ಳುತ್ತದೆ ಎಂದಿದ್ದಾರೆ ಎಂಬುದು ಉದ್ಯೋಗ ಪೋರ್ಟಲ್‌ನ ಹೈರಿಂಗ್ ಔಟ್‌ಲುಕ್ ಸಮೀಕ್ಷೆಯಿಂದ ತಿಳಿದು ಬಂದಿದೆ.

ದೇಶಾದ್ಯಂತ 1,327 ನೇಮಕಾತಿದಾರರು ಮತ್ತು ಸಲಹೆಗಾರರನ್ನು ಒಳಗೊಂಡ ಈ ಸಮೀಕ್ಷೆಯು ಮುಂಬರುವ ವರ್ಷಕ್ಕೆ ಉದ್ಯೋಗಾಕಾಂಕ್ಷಿಗಳು ಆಶಾವಾದಿ ಆಗಿರಬೇಕು ಎಂದಿದೆ.

2020ರಲ್ಲಿ ವೈದ್ಯಕೀಯ / ಆರೋಗ್ಯ, ಐಟಿ, ಬಿಪಿಓ / ಐಟಿಇಎಸ್ ಮುಂತಾದ ಕೈಗಾರಿಕೆಗಳು ಕಡಿಮೆ ಒತ್ತಡ ಅನುಭವಿಸಿದ್ದರೆ, ಚಿಲ್ಲರೆ ವ್ಯಾಪಾರ, ಆತಿಥ್ಯ ಮತ್ತು ಪ್ರಯಾಣದಂತಹ ಕೆಲವು ಉದ್ಯಮಗಳು ಸಂಕಷ್ಟ ನಿಭಾಯಿಸಲು ಹೆಣಗಾಡಿದವು.

ಇದನ್ನೂ ಓದಿ: ಐರೋಪ್ಯ ಒಕ್ಕೂಟದಿಂದ 'ಬ್ರಿಟನ್' ಎಕ್ಸಿಟ್​: ಭಾರತದ ಮೇಲೆ 'ಬ್ರೆಕ್ಸಿಟ್' ಪರಿಣಾಮವೇನು?

ಒಟ್ಟಾರೆ ನೇಮಕಾತಿ ಮಾರುಕಟ್ಟೆ ಈ ವರ್ಷ ಸಕಾರಾತ್ಮಕ ಟಿಪ್ಪಣಿಯಿಂದ ಪ್ರಾರಂಭವಾಗಿದ್ದು, ವರ್ಷದ ಆರಂಭಿಕ ತಿಂಗಳಲ್ಲಿ ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಉದ್ಯೋಗದ ಪೋಸ್ಟಿಂಗ್‌ಗಳು ಹೆಚ್ಚಾಗಲಿವೆ.

ಸಾಂಕ್ರಾಮಿಕವು ಉದ್ಯೋಗ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವವರೆಗೂ ನೇಮಕದಲ್ಲಿನ ಒಲವು ಸ್ಥಿರವಾಗಿತ್ತು. ಕೋವಿಡ್-19 ಪ್ರಭಾವವು ಮಾರ್ಚ್‌ನಿಂದಲೇ ಗೋಚರಿಸಿತು ಎಂದಿದೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೇಮಕಾತಿ ವರ್ಷದಿಂದ ವರ್ಷಕ್ಕೆ ಶೇ. 60ರಷ್ಟು ಕುಸಿದಿದೆ. ಇದು ಅತ್ಯಂತ ಕಡಿಮೆ ಉದ್ಯೋಗ ನೀಡಿಕೆಯ ತಿಂಗಳಾಗಿದೆ. ಉದ್ಯೋಗ ಮಾರುಕಟ್ಟೆಯು ಜೂನ್‌ನಿಂದ ಪುನರುಜ್ಜೀವನಗೊಳ್ಳಲು ಪ್ರಾರಂಭಿಸಿತು ಎಂದು ನೌಕ್ರಿ ಡಾಟ್ ಕಾಮ್ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.