ನವದೆಹಲಿ: ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವುದರ ನಡುವೆಯೂ ಉದ್ಯೋಗ ನೇಮಕಾತಿ ಚಟುವಟಿಕೆಗಳು ಮೇ ತಿಂಗಳಿಗಿಂತ ಜೂನ್‌ನಲ್ಲಿ ಏರಿಕೆ ಕಂಡುಬಂದಿದೆ ಎಂದು ನೌಕ್ರಿ ಡಾಟ್ ಕಾಮ್ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
ಜೂನ್ ತಿಂಗಳಲ್ಲಿ ನೇಮಕಾತಿ ಚಟುವಟಿಕೆಗಳು ಶೇ 33 ರಷ್ಟು ಸುಧಾರಣೆಯಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 44ರಷ್ಟು ಇಳಿಕೆಯಾಗಿದೆ. ಪ್ರಮುಖ ಕ್ಷೇತ್ರಗಳಾದ ಎಫ್‌ಎಂಸಿಜಿ (ಶೇ 58ರಷ್ಟು), ಅಕೌಂಟಿಂಗ್ (ಶೇ 53ರಷ್ಟು), ಬಿಪಿಒ / ಐಟಿಇಎಸ್ (ಶೇ 48ರಷ್ಟು), ಐಟಿ-ಹಾರ್ಡ್‌ವೇರ್ (ಶೇ 37ರಷ್ಟು) ಮತ್ತು ಐಟಿ-ಸಾಫ್ಟ್‌ವೇರ್ (ಶೇ 19ರಷ್ಟು) ಜೂನ್‌ನಲ್ಲಿ ಏರಿಕೆ ಕಂಡಿದೆ.
ಇದಲ್ಲದೆ ಶಿಕ್ಷಣ/ ಬೋಧನೆ (ಶೇ 49ರಷ್ಟು), ಫಾರ್ಮಾ / ಬಯೋಟೆಕ್ (ಶೇ 36ರಷ್ಟು) ಮತ್ತು ಮಾರಾಟ / ವ್ಯವಹಾರ ಅಭಿವೃದ್ಧಿಯಲ್ಲಿ (ಶೇ 33ರಷ್ಟು) ಹೆಚ್ಚಳ ಕಂಡುಬಂದಿದೆ. ಮೇ ತಿಂಗಳಲ್ಲಿನ ಅನುಭವಿ ಮಟ್ಟದ ನೇಮಕಾತಿ ಕೂಡ ಜೂನ್‌ನಲ್ಲಿ 28 ಪ್ರತಿಶತದಷ್ಟು ಹೆಚ್ಚಾಗಿದೆ.
ಭಾರತದಲ್ಲಿ ಅನ್ಲಾಕ್ 1.0 ಘೋಷಣೆಯ ತಿಂಗಳಲ್ಲಿ ನೇಮಕಾತಿಯು ಪ್ರಗತಿಯ ಬೆಳವಣಿಗೆಗೆ ತೋರುತ್ತಿದೆ. ಪ್ರತಿ ಮಾಸಿಕ ಕಳೆಯುತ್ತಿದ್ದಂತೆ ಆರ್ಥಿಕ ಚಟುವಟಿಕೆಗಳ ಚೇತರಿಕೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ಸುಧಾರಣೆ ಕಾಣಬಹುದು ಎಂಬುದನ್ನು ಎದುರು ನೋಡುತ್ತಿದ್ದೇವೆ ಎನ್ನುತ್ತಾರೆ ನೌಕ್ರಿ.ಕಾಮ್ನ ಮುಖ್ಯಾಧಿಕಾರಿ ಪವನ್ ಗೋಯಲ್.