ಚಂಡೀಗಢ: ಕೋವಿಡ್ 19 ಬಿಕ್ಕಟ್ಟಿನ ಸಂದರ್ಭದಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು ಮತ್ತು ಸರ್ಕಾರಿ ನೌಕರರಿಗೆ ತಲಾ 10 ಲಕ್ಷ ರೂ. ಜೀವ ವಿಮೆ ಒದಗಿಸಲಾಗುವುದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಘೋಷಿಸಿದ್ದಾರೆ.
ಹರಿಯಾಣ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಿಕ್ಕಟ್ಟಿನ ಸಮಯದಲ್ಲಿ ವರದಿ ಮಾಡುತ್ತಿರುವ ಮಾಧ್ಯಮಗಳ ಶ್ರಮವನ್ನು ಶ್ಲಾಘಿಸಿದರು.
ಎಲ್ಲಾ ಮಾಧ್ಯಮ ವ್ಯಕ್ತಿಗಳಿಗೆ ಈ ವಿಮೆ ಮಾನ್ಯವಾಗಿರುತ್ತದೆ. ಮಾನ್ಯತೆ (ಅಕ್ರಿಡೇಷನ್) ಪಡೆದಿರಲಿ ಅಥವಾ ಪಡೆಯದಿದ್ದವರಿಗೂ ಜೂನ್ 30ರವರೆಗೆ ಕೋವಿಡ್-19 ವಿರುದ್ಧ ಶ್ರಮಿಸುತ್ತಿವವರಿಗೆ 10 ಲಕ್ಷ ರೂ. ಜೀವ ವಿಮಾ ರಕ್ಷಣೆಯ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕೆಲಸಗಾರರು, ಪೊಲೀಸ್ ಸಿಬ್ಬಂದಿ ಮತ್ತು ನೈರ್ಮಲ್ಯ ಕಾರ್ಮಿಕರು ಸೇರಿದಂತೆ ಕಂಟೇನ್ಮೆಂಟ್ ವಲಯಗಳಲ್ಲಿ ಕೆಲಸ ಮಾಡುವ ಎಲ್ಲ ಸರ್ಕಾರಿ ನೌಕರರಿಗೂ ಸಹ ಈ ವಿಮಾ ಅನ್ವಯಿಸುತ್ತದೆ ಎಂದರು.
ವೈದ್ಯರು, ನರ್ಸ್, ಗ್ರೂಪ್ 'ಸಿ' ಮತ್ತು ಗ್ರೂಪ್ 'ಡಿ' ಸೇರಿದಂಡೆ ಕೋವಿಡ್ 19 ವಾರ್ಡ್ನಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಸಿಬ್ಬಂದಿಗೆ 50 ಲಕ್ಷ ರೂ. ಕೇಂದ್ರದ ವಿಮೆ ಸಹ ದೊರೆಯಲಿದೆ ಎಂದು ಹೇಳಿದರು.