ETV Bharat / business

ಲಾಕ್​ಡೌನ್ ನಡುವೆ ವ್ಯಾಪಾರಿಗಳಿಗೆ ಜಿಎಸ್​ಟಿ ಶಾಕ್​..!

author img

By

Published : Apr 17, 2020, 3:57 PM IST

ಲಕ್ಷಾಂತರ ಜಿಎಸ್‌ಟಿ ಪಾವತಿದಾರರನ್ನು ಹೂಡುವಳಿ ತೆರಿಗೆ (ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌- ಐಟಿಸಿ) ಮರುಪಾವತಿ ಪಡೆಯಲು ಜಿಎಸ್‌ಟಿಆರ್‌- 2 ಎ ಫಾರ್ಮ್​ ರೂಪದಲ್ಲಿ ಹೆಚ್ಚುವರಿ ವಿವರಗಳನ್ನು ಒದಗಿಸುವಂತೆ ಕೇಂದ್ರ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿ ಕೋರಿದೆ.

GST Shocker
ಜಿಎಸ್​ಟಿ

ನವದೆಹಲಿ: ರಾಷ್ಟ್ರವ್ಯಾಪಿ ಲಾಕ್‌ಡೌನ್ ವೇಳೆ ವರ್ತಕ ಸಮುದಾಯದ ಮೇಲಿನ ಹೊರೆ ಸರಾಗಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ವಿರುದ್ಧವಾಗಿ ಕೇಂದ್ರ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ನಿರ್ಧಾರವೊಂದು ತೆಗೆದುಕೊಂಡಿದೆ.

ಲಕ್ಷಾಂತರ ಜಿಎಸ್‌ಟಿ ಪಾವತಿದಾರರನ್ನು ಹೂಡುವಳಿ ತೆರಿಗೆ (ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌- ಐಟಿಸಿ) ಮರುಪಾವತಿ ಪಡೆಯಲು ಜಿಎಸ್‌ಟಿಆರ್‌- 2 ಎ ಫಾರ್ಮ್​ ರೂಪದಲ್ಲಿ ಹೆಚ್ಚುವರಿ ವಿವರಗಳನ್ನು ಒದಗಿಸಲು ಕೋರಿದೆ.

ಮಾರ್ಚ್ 24ರಂದು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಲಾಯಿತು. ಒಂದು ವಾರದ ನಂತರ ಸಿಬಿಸಿ ಐಟಿಸಿ ಮರುಪಾವತಿಯನ್ನು ಪಡೆಯಲು ಎಚ್‌ಎಸ್‌ಎನ್ ಮತ್ತು ಎಸ್‌ಎಸಿ ಸಂಖ್ಯೆಯನ್ನು ಒದಗಿಸಲು ಈ ಹೊಸ ಅವಶ್ಯಕತೆ ಸೃಷ್ಟಿಸಿದೆ ಎಂದು ಉದ್ಯಮದ ಮೂಲವೊಂದು ತಿಳಿಸಿದೆ.

ಹಾರ್ಮೋನೈಸ್ಡ್ ಸಿಸ್ಟಮ್ ಆಫ್ ನಾಮಕ್ಲೇಚರ್ (ಎಚ್‌ಎಸ್‌ಎನ್) ಸಂಖ್ಯೆ ಮತ್ತು ಸೇವಾ ಲೆಕ್ಕಪತ್ರ ಕೋಡ್ (ಎಸ್‌ಎಸಿ) ಮಾರಾಟಗಾರರಿಂದ ಒದಗಿಸಲಾದ ಸರಕು ಮತ್ತು ಸೇವೆಗಳ ನಿಖರವಾದ ವರ್ಗ ಸೂಚಿಸುತ್ತದೆ. ಈ ಸಂಖ್ಯೆಗಳನ್ನು ವಿಶ್ವಾದ್ಯಂತ ತೆರಿಗೆ ಉದ್ದೇಶಗಳಿಗಾಗಿ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಎಚ್‌ಎಸ್‌ಎನ್ ಅಥವಾ ಎಸ್‌ಎಸಿ ಸಂಖ್ಯೆಯನ್ನು ಇನ್‌ವಾಯ್ಸ್‌ನಲ್ಲಿ ನಮೂದಿಸುವುದು ಕಡ್ಡಾಯವಾಗಿದೆ. ಆದರೆ, ಜಿಎಸ್‌ಟಿಎನ್ ಪೋರ್ಟಲ್‌ನಲ್ಲಿ ಸರಬರಾಜುದಾರರು ಅಪ್‌ಲೋಡ್ ಮಾಡಿದ ಜಿಎಸ್‌ಟಿಆರ್ -1 ರೂಪದಲ್ಲಿ ಅವುಗಳನ್ನು ಎಂದಿಗೂ ನೀಡಿಲ್ಲ. ಸರಬರಾಜುದಾರರು ಜಿಎಸ್‌ಟಿಆರ್ -1 ರೂಪದಲ್ಲಿ ಸಂಕ್ಷಿಪ್ತ ಎಚ್‌ಎಸ್‌ಎನ್, ಎಸ್‌ಎಸಿ ಡೇಟಾ ನೀಡುತ್ತಾರೆ. ಆದರೆ ಅದನ್ನು ಸರ್ಕಾರದೊಂದಿಗೆ ಮಾತ್ರ ಹಂಚಿಕೊಳ್ಳಲಾಗುತ್ತದೆ. ಸ್ವೀಕರಿಸುವವರು ಅಥವಾ ಖರೀದಿದಾರರೊಂದಿಗೆ ಹಂಚಿಕೊಳ್ಳುವುದಿಲ್ಲ.

ಸರಬರಾಜುದಾರರಿಂದ ಅಪ್ಲೋಡ್​​ ಮಾಡಲಾದ ಜಿಎಸ್‌ಟಿಆರ್ -1 ಫಾರ್ಮ್ ಜಿಎಸ್‌ಟಿಎನ್ ಪೋರ್ಟಲ್‌ನಲ್ಲಿ ಸ್ವೀಕರಿಸುವವರ ಜಿಎಸ್‌ಟಿಆರ್ -2 ಎ ಫಾರ್ಮ್ ಅನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡಲಾಗುತ್ತದೆ. ಆದರೆ, ಮಾರ್ಚ್ 31ರಂದು ಸುತ್ತೋಲೆಯ ಮೂಲಕ ಮಂಡಳಿಯು ಕೇಳಿದ ಈ ಎರಡು ಸಂಖ್ಯೆಗಳನ್ನು ಸ್ವೀಕರಿಸುವುದಿಲ್ಲ.

ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವಂಚನೆಗಳನ್ನು ತಡೆಗಟ್ಟಲು ಸಿಬಿಐಸಿ ಕಳೆದ ವರ್ಷ ನವೆಂಬರ್​ನಲ್ಲಿ ಕಠಿಣ ಮಾರ್ಗಸೂಚಿಗಳನ್ನು ನೀಡಿತ್ತು. ಆಗಲೂ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಈ ವಿವರಗಳನ್ನು ಒದಗಿಸುವಂತೆ ಕಂಪನಿಗಳನ್ನು ಕೋರಿರಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.