ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಮಾರ್ಚ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, ಏಕರೂಪದ ತೆರಿಗೆ ಪದ್ಧತಿ ಅನುಷ್ಠಾನದ ಬಳಿಕೆ ಇದೇ ಮೊದಲ ಬಾರಿಗೆ ಐತಿಹಾಸಿಕ ಮಟ್ಟದಲ್ಲಿ ಸಂಗ್ರಹವಾಗಿದೆ.
2021ರ ಮಾರ್ಚ್ನಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯವು 1,23,902 ಕೋಟಿ ರೂ.ಗಳಾಗಿದೆ. ಅದರಲ್ಲಿ ಸಿಜಿಎಸ್‌ಟಿ 22,973 ಕೋಟಿ ರೂ., ಎಸ್‌ಜಿಎಸ್‌ಟಿ 29,329 ಕೋಟಿ ರೂ., ಐಜಿಎಸ್‌ಟಿ 62,842 ಕೋಟಿ ರೂ. (ಸರಕು ಆಮದಿನ ಸಂಗ್ರಹ 31,097 ಕೋಟಿ ರೂ. ಸೇರಿ) ಮತ್ತು ಸೆಸ್ 8,757 ಕೋಟಿ ರೂ.ಯಷ್ಟಿದೆ (ಸರಕುಗಳ ಆಮದಿನ ಮೇಲೆ ಸಂಗ್ರಹ 35 935 ಕೋಟಿ ಸೇರಿ) ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಜಿಎಸ್‌ಟಿ ಜಾರಿಗೆ ಬಂದ ನಂತರ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ತೆರಿಗೆ ಹರಿದು ಬಂದಿದೆ. ಜಿಎಸ್‌ಟಿ ಸಂಗ್ರಹವು ಕಳೆದ ಆರು ತಿಂಗಳು 1 ಲಕ್ಷ ಕೋಟಿ ರೂ. ದಾಟಿದ್ದು ಹೊಸ ದಾಖಲೆ ನಿರ್ಮಿಸಿದೆ. ಕರ್ನಾಟಕ ರಾಜ್ಯದಿಂದ 7,914 ಕೋಟಿ ರೂ.ಯಷ್ಟು ತೆರಿಗೆ ಸಂಗ್ರಹವಾಗಿದೆ.
ಇದನ್ನೂ ಓದಿ: ಬಡ್ಡಿ ದರ ಕಡಿತ ಹಿಂತೆಗೆತ: ಚುನಾವಣೆ ದೃಷ್ಟಿಯ ಪಶ್ಚಾತ್ತಾಪವಾ? ನಿರ್ಮಲಾಗೆ ಪ್ರಿಯಾಂಕಾ ಪ್ರಶ್ನೆ