ETV Bharat / business

ಜೂ.12ರಂದು ಜಿಎಸ್​ಟಿ ಮಂಡಳಿ ಸಭೆ: ಚರ್ಚಿಸಲಿರುವ ವಿಷಯಗಳಿವು..! - ವಾಣಿಜ್ಯ ಸುದ್ದಿ

ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಮತ್ತು ವಿವಿಧ ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡ ಜಿಎಸ್​ಟಿ ಕೌನ್ಸಿಲ್​​ನ 40ನೇ ಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ.

GST Council
ಜಿಎಸ್​ಟಿ ಮಂಡಳಿ
author img

By

Published : Jun 5, 2020, 7:07 PM IST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿಯು ಜೂನ್​ 12ರಂದು ಸಭೆ ಸೇರಲಿದ್ದು, ತೆರಿಗೆ ಆದಾಯದ ಮೇಲೆ ಕೋವಿಡ್​ -19 ಸಾಂಕ್ರಾಮಿಕ ಬೀರಿದ ಪರಿಣಾಮದ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಮತ್ತು ರಾಜ್ಯಗಳ ಆದಾಯದ ಮೇಲೆ ಸಾಂಕ್ರಾಮಿಕ ರೋಗದ ಪರಿಣಾಮ ಮತ್ತು ಆದಾಯದ ಅಂತರ ನಿವಾರಿಸುವ ಮಾರ್ಗಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ಹೇಳಿವೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನದಿಂದಾಗಿ ರಾಜ್ಯಗಳಿಗೆ ಆದಾಯ ನಷ್ಟ ಸರಿದೂಗಿಸಲು ಹಣ ಸಂಗ್ರಹಿಸುವ ಮಾರ್ಗಗಳ ಬಗ್ಗೆಯೂ ಕೌನ್ಸಿಲ್​ನಲ್ಲಿ ಪ್ರಸ್ತಾಪ ಆಗಲಿದೆ.

ಪರಿಹಾರಕ್ಕೆ ಬೇಕಾದ ಅವಶ್ಯಕತೆಗಳನ್ನು ಪೂರೈಸಲು ಮಾರುಕಟ್ಟೆಯಿಂದ ಸಾಲ ಪಡೆಯುವ ಕಾನೂನುಬದ್ಧತೆಯನ್ನು ಕೇಂದ್ರ ಪರಿಶೀಲಿಸುತ್ತದೆ ಎಂದು 2020ರ ಮಾರ್ಚ್ 14ರಂದು ನಡೆದ ಹಿಂದಿನ ಕೌನ್ಸಿಲ್ ಸಭೆಯಲ್ಲಿ ಸೀತಾರಾಮನ್ ಹೇಳಿದ್ದರು.

2017ರ ಆಗಸ್ಟ್​ನಿಂದ 2020ರ ಜನವರಿವರೆಗೆ ಜಿಎಸ್​ಟಿ ರಿಟರ್ನ್ಸ್ ಸಲ್ಲಿಸದಿದ್ದಕ್ಕೆ ವಿಳಂಬ ಶುಲ್ಕ ಮನ್ನಾ ಮಾಡುವ ಬಗ್ಗೆ ಕೌನ್ಸಿಲ್ ಚರ್ಚಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.