ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 41ನೇ ಸಭೆಯು ನಾಳೆ (ಗುರುವಾರ) ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ.
ಕೇಂದ್ರದ ಬಿಡುಗಡೆಯ ವಿಳಂಬದಿಂದ ಪೀಡಿತ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರದ ಒಂದೇ ಕಾರ್ಯಸೂಚಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೂನ್‌ನಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನಡೆದ ಮೊದಲ ಜಿಎಸ್‌ಟಿ ಕೌನ್ಸಿಲ್ ಸಭೆಯ ನಂತರ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದಂತೆ ಈ ಸಭೆಯನ್ನು ಜುಲೈನಲ್ಲಿ ಪ್ರಸ್ತಾಪಿಸಲಾಗಿತ್ತು.
ಪರಿಹಾರದ ಸೆಸ್ ಬಗ್ಗೆ ಚರ್ಚಿಸಲು ಜಿಎಸ್‌ಟಿ ಮಂಡಳಿ ನಾಳೆ ಒಂದೇ ಹಂತದ ಕಾರ್ಯಸೂಚಿ ಅಜಂಡಾ ಬಗ್ಗೆ ಸಭೆ ಸೇರಲಿದೆ. ಜಿಎಸ್‌ಟಿ ದರಗಳು ಅಥವಾ ಸೆಸ್ ರಚನೆಯಲ್ಲಿನ ಯಾವುದೇ ಬದಲಾವಣೆಗಳು ರಾಜ್ಯಗಳಿಗೆ ಸಮಯೋಚಿತ ಪರಿಹಾರವನ್ನು ಹೇಗೆ ಬಿಡುಗಡೆ ಮಾಡುತ್ತವೆ ಎಂಬುದನ್ನು ಚರ್ಚಿಸಲಿದೆ ಎಂದು ಅಧಿಕಾರಿ ಹೇಳಿದರು.
ರಾಷ್ಟ್ರವ್ಯಾಪಿ ಲಾಕ್‌ಡೌನ್ ಮತ್ತು ದೇಶಾದ್ಯಂತ ಆರ್ಥಿಕ ಚಟುವಟಿಕೆಗಳಲ್ಲಿನ ಅಡೆತಡೆಗಳಿಂದಾಗಿ ಜಿಎಸ್‌ಟಿ ಸಂಗ್ರಹದಲ್ಲಿ ತೀವ್ರ ಕುಸಿತ ಎದುರಿಸುತ್ತಿರುವ ಕೇಂದ್ರವು ತನ್ನ ಸಾಲಗಳ ಒಂದು ಭಾಗ ಬಳಸಿಕೊಂಡು ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಪಾವತಿಸುವುದು ಕೇಂದ್ರದ ಮುಂದಿರುವ ಆಯ್ಕೆಯಾಗಿದೆ.