ETV Bharat / business

GST ಪರಿಹಾರದಲ್ಲಿ ನಂ.1ನ್ನು ಆಯ್ದುಕೊಂಡ ಬಿಎಸ್​ವೈ.. ₹25,508 ಕೋಟಿ ಬಿಟ್ಟು 18,289 ರೂ. ಆರಿಸಿದ್ದೇಕೆ? - ಜಿಎಸ್​ಡಿಪಿ

ಆಯ್ಕೆ 1ರ ಅಡಿಯಲ್ಲಿ ಕರ್ನಾಟಕವು ಒಟ್ಟು 18,289 ಕೋಟಿ ರೂ. ಪರಿಹಾರಕ್ಕೆ ಅರ್ಹವಾಗಲಿದೆ. ಅದರಲ್ಲಿ 6,965 ಕೋಟಿ ರೂ. ಸೆಸ್​ ಮೂಲಕ ಬರಲಿದೆ. ಬಾಕಿ ಇರುವ 11,324 ಕೋಟಿ ರೂ.ಗಳಿಗೆ, ರಾಜ್ಯವು ವಿಶೇಷ ಗವಾಕ್ಷಿ ಮೂಲಕ ಸಾಲ ಪಡೆಯಲು ಸಾಧ್ಯವಾಗುತ್ತದೆ. ಭವಿಷ್ಯದಲ್ಲಿ ಪರಿಹಾರ ಸೆಸ್ ನಿಧಿಯಿಂದ ಅಸಲು ಮತ್ತು ಬಡ್ಡಿ ಮರುಪಾವತಿಯ ಸಂಪೂರ್ಣ ಹೊರೆಯನ್ನು ಪೂರೈಸಲಾಗುತ್ತದೆ..

BSY- Nirmala Sitharaman
ಬಿಎಸ್​ವೈ- ನಿರ್ಮಲಾ ಸೀತಾರಾಮನ್
author img

By

Published : Sep 2, 2020, 8:58 PM IST

ಬೆಂಗಳೂರು : ಜಿಎಸ್‌ಟಿ ಆದಾಯ ಕೊರತೆ ನೀಗಿಸಲು ಕೇಂದ್ರವು ಎರವಲು ಪಡೆಯುವ ಎರಡು ಆಯ್ಕೆಗಳಲ್ಲಿ ಮೊದಲನೆಯದನ್ನು ಆಯ್ಕೆ ಮಾಡಲು ನಿರ್ಧರಿಸಿದೆ ಎಂದು ರಾಜ್ಯ ಬಿಜೆಪಿ ಸರ್ಕಾರ ತಿಳಿಸಿದೆ. ಮೊದಲನೆ ಆಯ್ಕೆ ಅಡಿಯಲ್ಲಿ ರಾಜ್ಯವು ಒಟ್ಟು 18,289 ಕೋಟಿ ರೂ. ಪರಿಹಾರ ಪಡೆಯಬಹುದಾಗಿದೆ.

ಈ ಕುರಿತು ಸಿಎಂ ಬಿ ಎಸ್ ಯಡಿಯುರಪ್ಪ ಅವರು ಟ್ವೀಟ್ ಮಾಡಿದ್ದು, ಜಿಎಸ್​ಟಿ ಪರಿಹಾರದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡಿದ ಎರಡು ಆಯ್ಕೆಗಳ ಮೌಲ್ಯಮಾಪನದ ನಂತರ ರಾಜ್ಯ ಸರ್ಕಾರವು ಆಯ್ಕೆ 1ರ ಅಡಿಯಲ್ಲಿ ಒಟ್ಟು 18,289 ಕೋಟಿ ರೂ. ಪರಿಹಾರ ಪಡೆಯುವ ಆಯ್ಕೆಯನ್ನು ಕರ್ನಾಟಕ ತನ್ನ ಆದ್ಯತೆಯನ್ನಾಗಿ ತೀರ್ಮಾನಿಸಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಆದಾಯ ಹೆಚ್ಚಳಕ್ಕೆ ಇದು ಸಹಕಾರಿಯಾಗಲಿದೆ ಎಂದು ಬರೆದುಕೊಂಡಿದ್ದಾರೆ.

  • GST ಪರಿಹಾರದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡಿದ ಎರಡು ಆಯ್ಕೆಗಳ ಮೌಲ್ಯಮಾಪನದ ನಂತರ ರಾಜ್ಯ ಸರ್ಕಾರವು ಆಯ್ಕೆ 1ರ ಅಡಿಯಲ್ಲಿ ಒಟ್ಟು 18,289 ಕೋಟಿ ರೂ. ಪರಿಹಾರ ಪಡೆಯುವ ಆಯ್ಕೆಯನ್ನು ಕರ್ನಾಟಕ ತನ್ನ ಆದ್ಯತೆಯನ್ನಾಗಿ ತೀರ್ಮಾನಿಸಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಆದಾಯ ಹೆಚ್ಚಳಕ್ಕೆ ಇದು ಸಹಕಾರಿಯಾಗಲಿದೆ.@PMOIndia @FinMinIndia pic.twitter.com/pn83QrLjhV

    — CM of Karnataka (@CMofKarnataka) September 2, 2020 " class="align-text-top noRightClick twitterSection" data=" ">

ಹಣಕಾಸು ಖಾತೆ ಹೊಂದಿರುವ ಯಡಿಯೂರಪ್ಪ ಅವರು ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಎರಡೂ ಆಯ್ಕೆಗಳ ಮೌಲ್ಯಮಾಪನದ ನಂತರ ಆಯ್ಕೆ 1 ರಾಜ್ಯದ ಹಣಕಾಸುಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಭಾವಿಸಲಾಗಿದೆ. ಆದ್ದರಿಂದ ಕರ್ನಾಟಕ ಸರ್ಕಾರವು ಆಯ್ಕೆ 1ಕ್ಕೆ ಆದ್ಯತೆ ನೀಡುವ ಭಾರತ ಸರ್ಕಾರಕ್ಕೆ ತಿಳಿಸಲು ನಿರ್ಧರಿಸಿದೆ ಪ್ರಕಟಣೆ ತಿಳಿಸಿದ್ದಾರೆ.

ಆಯ್ಕೆ 1ರ ಅಡಿಯಲ್ಲಿ ಕರ್ನಾಟಕವು ಒಟ್ಟು 18,289 ಕೋಟಿ ರೂ. ಪರಿಹಾರಕ್ಕೆ ಅರ್ಹವಾಗಲಿದೆ. ಅದರಲ್ಲಿ 6,965 ಕೋಟಿ ರೂ. ಸೆಸ್​ ಮೂಲಕ ಬರಲಿದೆ. ಬಾಕಿ ಇರುವ 11,324 ಕೋಟಿ ರೂ.ಗಳಿಗೆ, ರಾಜ್ಯವು ವಿಶೇಷ ಗವಾಕ್ಷಿ ಮೂಲಕ ಸಾಲ ಪಡೆಯಲು ಸಾಧ್ಯವಾಗುತ್ತದೆ. ಭವಿಷ್ಯದಲ್ಲಿ ಪರಿಹಾರ ಸೆಸ್ ನಿಧಿಯಿಂದ ಅಸಲು ಮತ್ತು ಬಡ್ಡಿ ಮರುಪಾವತಿಯ ಸಂಪೂರ್ಣ ಹೊರೆಯನ್ನು ಪೂರೈಸಲಾಗುತ್ತದೆ ಎಂದು ಹೇಳಿದೆ.

ಜಿಎಸ್​​ಡಿಪಿಯ ಶೇ1ರಷ್ಟು (18,036 ಕೋಟಿ ರೂ.) ಹೆಚ್ಚುವರಿ ಸಾಲ ಬೇಷರತ್ತಾಗಿ ಲಭ್ಯವಿರುತ್ತದೆ. ಈ ಹಿಂದೆ ಕೇಂದ್ರ ಸರ್ಕಾರವು ಸೂಚಿಸಿದಂತೆ ಇನ್ನೂ ಶೇ 1ರಷ್ಟು ಸಾಲವನ್ನು ಕೆಲವು ಸುಧಾರಣೆಗಳ ಜೊತೆಗೆ ಹೊಂದಿಸಿಕೊಳ್ಳಬಹುದು. ಅಗತ್ಯವಿದ್ದರೆ ಈ ಹೆಚ್ಚುವರಿ ಸಾಲ ಮುಂದಿನ ಹಣಕಾಸು ವರ್ಷಕ್ಕೂ ಮುಂದುವರಿಸಬಹುದು. ಐದು ವರ್ಷಗಳ ಅವಧಿಗೆ ಸೆಸ್ ಸಂಗ್ರಹದ ಮೂಲಕ ಮರುಪಾವತಿಗೆ ಅವಕಾಶ ಇರುತ್ತದೆ.

ಆಯ್ಕೆ 2ರ ಅಡಿಯಲ್ಲಿ ಕರ್ನಾಟಕವು ಒಟ್ಟು 25,508 ಕೋಟಿ ರೂ. ಪರಿಹಾರಕ್ಕೆ ಅರ್ಹವಾಗಲಿದೆ. ಅದರಲ್ಲಿ 6,965 ಕೋಟಿ ರೂ. ಸೆಸ್​ ಸಂಗ್ರಹದಿಂದ ಬರುತ್ತದೆ. ಉಳಿದ 18,543 ಕೋಟಿ ರೂ. ಮಾರುಕಟ್ಟೆ ಸಾಲದ ಮೂಲಕ ಸಾಲ ಪಡೆಯಲು ಅನುಮತಿಸಲಾಗುತ್ತದೆ. ಒಟ್ಟಾರೆ ಜಿಎಸ್​​ಟಿ ಪರಿಹಾರ ಕೊರತೆಯಾದ 2.35 ಲಕ್ಷ ಕೋಟಿ ರೂ. ಮೊತ್ತವನ್ನು ಆರ್​ಬಿಐ ಜತೆಗೆ ಚರ್ಚೆ ನಡೆಸಿ, ಸಾಲ ಪಡೆಯುವ ಮೂಲಕ ರಾಜ್ಯಗಳೇ ಅದನ್ನು ತುಂಬಿಕೊಳ್ಳುವ ಅವಕಾಶ ನೀಡಲಾಗಿದೆ.

ಈ ಆಯ್ಕೆಯಲ್ಲಿ ಜಿಎಸ್‌ಡಿಪಿಯ ಶೇ.1ರಷ್ಟು (18,036 ಕೋಟಿ ರೂ.) ಬೇಷರತ್ತಾಗಿ ಸಾಲ ಪಡೆಯುವುದು ರಾಜ್ಯಕ್ಕೆ ಪ್ರತ್ಯೇಕವಾಗಿ ಲಭ್ಯವಿರುವುದಿಲ್ಲ. ಇದರ ಪರಿಣಾಮವಾಗಿ ನಿವ್ವಳ ಸಾಲವು ಗಣನೀಯವಾಗಿ 10,817 ಕೋಟಿ ರೂ.ಗಳಷ್ಟು ಕಡಿಮೆ ಆಗುತ್ತದೆ ಎಂದು ವಿವರಿಸಿದೆ.

ಆಯ್ಕೆ-1: ರಾಜ್ಯಗಳಿಗೆ ವಿಶೇಷ ಗವಾಕ್ಷಿ ಒದಗಿಸಲು, ಆರ್‌ಬಿಐಯೊಂದಿಗೆ ಸಮಾಲೋಚಿಸಿ 97,000 ಕೋಟಿ ರೂ. ಸಮಂಜಸ ಬಡ್ಡಿದರದಲ್ಲಿ ಸಾಲ ಒದಗಿಸಲಿದೆ. ಈ ಹಣವನ್ನು ಸೆಸ್ ಸಂಗ್ರಹದಿಂದ 5 ವರ್ಷಗಳ ನಂತರ ಮರು ಪಾವತಿಸಬಹುದು.

ಆಯ್ಕೆ- 2: ರಾಜ್ಯಗಳಿಗೆ ಈ ವರ್ಷದ 2,35,000 ಕೋಟಿ ರೂ. ಸಂಪೂರ್ಣ ಜಿಎಸ್​​ಟಿ ಪರಿಹಾರದ ಅಂತರವನ್ನು ರಾಜ್ಯಗಳು ಆರ್‌ಬಿಐಯೊಂದಿಗೆ ಸಮಾಲೋಚಿಸಿ ಪೂರೈಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.