ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತ ಹೆಚ್ಚು ದುರ್ಬಲವಾಗಲಿದೆ ಎಂದು ಅಂತಾರಾಷ್ಟ್ರೀಯ ರೇಟಿಂಗ್ ಏಜನ್ಸಿ ಐಸಿಆರ್ಎ ಭವಿಷ್ಯ ನುಡಿದಿದೆ.
ಕೈಗಾರಿಕಾ ವಲಯದ ಉತ್ಪಾದನೆ ಕುಸಿಯುತ್ತಿರುವುದು ಸೇರಿದಂತೆ ಆರ್ಥಿಕ ವ್ಯವಸ್ಥೆಯ ವಿವಿಧ ವಲಯಗಳಲ್ಲಿನ ಅನಿಶ್ಚಿತತೆಯಿಂದಾಗಿ ಭವಿಷ್ಯದ ಆರ್ಥಿಕ ಬೆಳವಣಿಗೆ ದರ ನಿರೀಕ್ಷೆಗಿಂತ ಕಡಿಮೆಯಾಗಲಿದೆ. 2020ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಬೆಳವಣಿಗೆ ದರ ಶೇ 4.7ರಷ್ಟು ಇರಲಿದೆ ಎಂದು ಅಂದಾಜಿಸಿದೆ.
ರೇಟಿಂಗ್ಸ್ ಏಜೆನ್ಸಿಯು ಭಾರತದ ಜಿಡಿಪಿ ಬೆಳವಣಿಗೆಯ ದರ ಮತ್ತು ಒಟ್ಟಾರೆ ಮೌಲ್ಯ ಸೇರ್ಪಡೆ (ಜಿವಿಎ) ಮತ್ತಷ್ಟು ಕುಸಿತ ಕಾಣಲಿದೆ ಎಂದು ನಿರೀಕ್ಷಿಸಿದೆ. 2020ರ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಮೂಲ ಬೆಲೆಗಳು ವರ್ಷದಿಂದ ವರ್ಷಕ್ಕೆ (ಇಯರ್ ಆನ್ ಇಯರ್) ಕ್ರಮವಾಗಿ ಶೇ 4.7ರಷ್ಟು ಮತ್ತು 4.5ರಷ್ಟು ಇರಲಿದೆ. 2020ರ ಎಫ್‌ವೈನ ಮೊದಲ ತ್ರೈಮಾಸಿಕದಲ್ಲಿ ಶೇ 5 ಮತ್ತು ಶೇ 4.9ರಷ್ಟು ಇರಲಿದೆ. ಆದರೂ ಕೃಷಿ ಮತ್ತು ಸೇವೆಗಳಂತಹ ಕ್ಷೇತ್ರಗಳು 2020ರ ಎಫ್‌ವೈನ ಮೊದಲ ತ್ರೈಮಾಸಿಕದಲ್ಲಿ ಬೆಳವಣಿಗೆಯ ದರ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದಿದೆ.
ದೇಶಿಯ ಆಂತರಿಕ ಬೇಡಿಕೆ, ಹೂಡಿಕೆ ಚಟುವಟಿಕೆ ಮತ್ತು ತೈಲೇತರ ಸರಕುಗಳ ರಫ್ತುಗಳ ಜೊತೆಗೆ ಉತ್ಪಾದನಾ ಬೆಳವಣಿಗೆಯು 2020ರ ಎಫ್‌ವೈನ ಮೊದಲ ತ್ರೈಮಾಸಿಕದಲ್ಲಿ ಕನಿಷ್ಠ ಶೇ 0.6ರಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಐಸಿಆರ್‌ಎನ ಪ್ರಧಾನ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಹೇಳಿದ್ದಾರೆ.