ಮುಂಬೈ : ಆರ್ಥಿಕತೆಯ ನಿರಂತರ ಪುನರುಜ್ಜೀವನಕ್ಕೆ ಮತ್ತು ಕೋವಿಡ್ ಪೂರ್ವದ ಪಥಕ್ಕೆ ಶೀಘ್ರವಾಗಿ ಮರಳಲು ಬೆಳವಣಿಗೆಯ ಆವೇಗವನ್ನು ಬಲಪಡಿಸುವ ಅಗತ್ಯವಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಭಿಪ್ರಾಯಪಟ್ಟರು.
ಫೆಬ್ರವರಿ 3 ರಂದು ಪ್ರಾರಂಭವಾದ ಮೂರು ದಿನಗಳ ಎಂಪಿಸಿ ಸಭೆಯಲ್ಲಿ ಎಲ್ಲಾ ಆರು ಸದಸ್ಯರು ರೆಪೊ ದರವನ್ನು ಶೇ.4ರಂತೆ ಬದಲಾಯಿಸದೆ ಯಥಾವತ್ತಾಗಿ ಉಳಿಸಿಕೊಳ್ಳಲು ಮತ ಚಲಾಯಿಸಿದ್ದರು.
ಇದನ್ನೂ ಓದಿ: ಬೆಂಗಳೂರಲ್ಲಿ ಬಾಡಿಗೆ ಬೈಕ್ ಪಡೆದು ಚಾಲಕನ ಜತೆ 6 ಗಂಟೆ ತನಕ ನಗರ ಸುತ್ತಾಡಿ!
ಪ್ರಸ್ತುತ ಬೆಳವಣಿಗೆ ಅಸಮರ್ಪಕವಾಗಿದ್ದರೂ ಚೇತರಿಸಿಕೊಳ್ಳುತ್ತಿದೆ. ದೇಶದಲ್ಲಿ ಲಸಿಕೆ ಕಾರ್ಯಕ್ರಮ ಪ್ರಗತಿಯಲ್ಲಿರುವುದರಿಂದ ಈಗಿನ ಆರ್ಥಿಕ ದೃಷ್ಟಿಕೋನದಲ್ಲಿ ಗಮನಾರ್ಹ ಸುಧಾರಣೆ ಕಂಡು ಬರುತ್ತಿದೆ ಎಂದರು.
ಆದರೂ ಬೆಳವಣಿಗೆಯ ಆವೇಗವು ಆರ್ಥಿಕತೆಯ ನಿರಂತರ ಪುನರುಜ್ಜೀವನಕ್ಕಾಗಿ ಮತ್ತು ಕೋವಿಡ್ ಪೂರ್ವ ಪಥಕ್ಕೆ ಉತ್ಪಾದನೆಯ ಮಟ್ಟವನ್ನು ತ್ವರಿತವಾಗಿ ಹಿಂದಿರುಗಿಸಲು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದರು.