ನವದೆಹಲಿ: ಇ-ಆಡಳಿತ ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಕೇಂದ್ರ ಸರ್ಕಾರವು ಅಮೆಜಾನ್‌ನ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್‌ನಂತಹ ಧ್ವನಿ ಸಹಾಯಕ ಪ್ಲಾಟ್ಫಾರ್ಮ್ಗಳನ್ನು ಅಭಿವೃದ್ಧಿಪಡಿಸಲು ಬಿಡ್‌ಗಳನ್ನು ಆಹ್ವಾನಿಸಿದೆ.
ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಎಐ ಆಧಾರಿತ ಪ್ಲಾಟ್ಫಾರ್ಮ್ಗಳು ಸಾರ್ವಜನಿಕರೊಂದಿಗೆ ಅನೇಕ ಭಾಷೆಗಳಲ್ಲಿ ಸಂವಹನ ನಡೆಸಲಿವೆ. ಬಳಕೆದಾರರಿಗೆ ವೈಯಕ್ತಿಕ ಸೇವೆಗಳನ್ನು ನೀಡಲು ಅವರ ಭಾವನೆಗಳನ್ನು ವಿಶ್ಲೇಷಿಸುವುದು ಮತ್ತು ಡೇಟಾವನ್ನು ಸಂಗ್ರಹಿಸುವಂತಹ ಸಾಧನ ಇದರಲ್ಲಿ ಒಳಗೊಂಡಿದೆ. ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳು ಕಲಿಕಾ ಸಾಮರ್ಥ್ಯಗಳನ್ನು ಹೊಂದಿರಬೇಕು. ಅಪ್ಲಿಕೇಷನ್‌ಗಳ ಬಳಕೆದಾರರಿಗೆ ಅರ್ಹವಾದ ಯೋಜನೆಗಳು ಮತ್ತು ಸೇವೆಗಳ ಆವಿಷ್ಕಾರಕ್ಕೆ ಯೋಗ್ಯವಾಗಿ ಇರಬೇಕು ಎಂದು ಆಹ್ವಾನಿತರಿಗೆ ಸೂಚಿಸಲಾಗಿದೆ.
ಪಿಟಿಐ ವರದಿಯ ಪ್ರಕಾರ, ಎಐ ಆಧಾರಿತ ಪ್ಲಾಟ್ಫಾರ್ಮ್ಗಳ ಸಾರ್ವಜನಿಕರೊಂದಿಗೆ ಅನೇಕ ಭಾಷೆಗಳಲ್ಲಿ ಸಂವಹನ ನಡೆಸಲಿವೆ. ಬಳಕೆದಾರರಿಗೆ ಸೇವೆಗಳನ್ನು ನೀಡಲು ಅವರ ಭಾವನೆಗಳನ್ನು ವಿಶ್ಲೇಷಿಸುತ್ತವೆ ಮತ್ತು ಡೇಟಾ ಸಂಗ್ರಹಿಸಿ ಇರಿಸಿಕೊಳ್ಳಲಿವೆ ಎಂಬ ನಿರೀಕ್ಷೆಗಳಿವೆ. ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯದ ರಾಷ್ಟ್ರೀಯ ಇ-ಆಡಳಿತ ವಿಭಾಗವು ಉಮಾಂಗ್ ಪ್ಲಾಟ್‌ಫಾರ್ಮ್‌ನಲ್ಲಿ ನಿಯೋಜಿಸಬಹುದಾದ ಸಂಭಾಷಣಾ ಪ್ಲಾಟ್ಫಾರ್ಮ್ ನಿರ್ಮಿಸಲು ಪ್ರಸ್ತಾಪವನೆಗೆ ಆಹ್ವಾನಿಸಿದೆ. ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ಒದಗಿಸುವ ವಿವಿಧ ಅಪ್ಲಿಕೇಷನ್‌ಗಳನ್ನು ನಿಯೋಜನೆ ಮಾಡಲಾಗುತ್ತದೆ.
ಓದಿ: ಡಿಸೆಂಬರ್‌ನಲ್ಲಿ ಟಿವಿಎಸ್ ಮೋಟಾರ್ ಮಾರಾಟ ಶೇ.17.5ರಷ್ಟು ಏರಿಕೆ
ಸರ್ಕಾರದ ಸೇವೆಗಳನ್ನು ಒಳಗೊಂಡಂತೆ ನೋಂದಣಿ, ಲಾಗಿನ್, ಪಾಸ್‌ವರ್ಡ್ ಮರುಹೊಂದಾಣಿಕೆ, ಇಲಾಖೆ ಸೇವಾ ಸಂಬಂಧ ಮಾಹಿತಿ, ಈವೆಂಟ್ ಫೀಚರ್ಗಳನ್ನು ಪ್ರಸ್ತಾಪಿಸಲಾಗಿದೆ. ಚಾಟ್‌ಬಾಟ್ ಸಂಭಾಷಣೆಯ ಪಠ್ಯವನ್ನು ಇನ್ಪುಟ್ ಆಗಿ ಮತ್ತು ಪಠ್ಯವನ್ನು ಭಾಷಣವಾಗಿ ಪರಿವರ್ತಿಸುವ ನಿರೀಕ್ಷೆಯಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.
ಚಾಟ್‌ಬಾಟ್ ಪ್ಲ್ಯಾಟ್‌ಫಾರ್ಮ್‌ಗಳು ಇತರೆ ಕಲಿಕೆಯ ಸಾಮರ್ಥ್ಯಗಳನ್ನು ಸಹ ಹೊಂದಿರಬೇಕು. ಚಾಟ್‌ಬಾಟ್/ ಅಪ್ಲಿಕೇಷನ್‌ಗಳ ಬಳಕೆದಾರರಿಗೆ ಅರ್ಹವಾದ ಯೋಜನೆ ಮತ್ತು ಸೇವೆಗಳ ಆವಿಷ್ಕಾರ ಮತ್ತು ಶಿಫಾರಸುಗಾಗಿ ಬಳಸಬಹುದು. ಸರ್ಕಾರಿ ಡೊಮೇನ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ಯೋಜನೆಗಳು ಮತ್ತು ಸೇವೆಗಳನ್ನು ಶಿಫಾರಸು ಮಾಡಬೇಕು. ಇಂತಹ ಮಹತ್ವಾಕಾಂಕ್ಷ ಯೋಜನೆ ಪೂರ್ಣಗೊಳ್ಳಲು ನಾಲ್ಕು ವರ್ಷಗಳು ಬೇಕಾಗಬಹುದು.