ETV Bharat / business

ಬಜೆಟ್ ನಿರೀಕ್ಷೆ : ದೇಶಕ್ಕೆ ಮೃಷ್ಟಾನ್ನ ಕೊಡುವ ಅನ್ನದಾತನಿಗೆ ಕೈತುಂಬ ಹಣ ಕೊಡಿ- ತಜ್ಞರ ಸಲಹೆ

ಮುಂಬರುವ ಬಜೆಟ್​ನಲ್ಲಿ ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯಂತಹ ಸಬ್ಸಿಡಿ ನೀಡುವ ಬದಲು ರೈತರ ಬೆಂಬಲವನ್ನು ವ್ಯಾಪಕಗೊಳಿಸಬೇಕು ಎಂದು ಕೃಷಿ ತಜ್ಞರು ಪ್ರತಿಪಾದಿಸಿದ್ದಾರೆ..

author img

By

Published : Jan 12, 2021, 1:33 PM IST

agri sector
ಕೃಷಿ ಕ್ಷೇತ್ರ

ನವದೆಹಲಿ : ಕೃಷಿ ಕ್ಷೇತ್ರದ ಸಂಪೂರ್ಣ ಬೆಳವಣಿಗೆಗೆ ಸ್ಥಳೀಯ ಕೃಷಿ ಸಂಶೋಧನೆ, ಎಣ್ಣೆಕಾಳು ಉತ್ಪಾದನೆ, ಆಹಾರ ಸಂಸ್ಕರಣೆ ಮತ್ತು ಸಾವಯವ ಕೃಷಿ ಉತ್ತೇಜಿಸಲು ಸರ್ಕಾರ ಮುಂಬರುವ ತನ್ನ ಬಜೆಟ್‌ನಲ್ಲಿ ಹೆಚ್ಚುವರಿ ಹಣ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಉದ್ಯಮ ತಜ್ಞರು ಒತ್ತಾಯಿಸಿದ್ದಾರೆ. ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯನ್ನು ಸಬ್ಸಿಡಿ ನೀಡುವ ಬದಲು ರೈತರ ಬೆಂಬಲವನ್ನು ವ್ಯಾಪಕಗೊಳಿಸಬೇಕು ಎಂದು ಪ್ರತಿಪಾದಿಸಿದರು.

ಆಹಾರ ಸಂಸ್ಕರಣಾ ಉದ್ಯಮವು ರೈತನಿಗೆ ಉತ್ತಮ ಬೆಲೆ ಮತ್ತು ಮಧ್ಯವರ್ತಿಗಳ ವೆಚ್ಚ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬಡ್ಡಿ ಸಬ್ವೆನ್ಷನ್, ಕಡಿಮೆ ತೆರಿಗೆ, ತಂತ್ರಜ್ಞಾನದ ಪ್ರವೇಶದಂತಹ ಮುಂತಾದ ಪ್ರೋತ್ಸಾಹಕಗಳ ಮೂಲಕ ಆಹಾರ ಸಂಸ್ಕರಣೆಗೆ ಬಜೆಟ್ ವಿಶೇಷ ಪ್ರೋತ್ಸಾಹ ನೀಡಬೇಕು ಎಂದು ಡಿಸಿಎಂ ಶ್ರೀರಾಮ್ ಅಧ್ಯಕ್ಷ ಮತ್ತು ಎಂಡಿ ಅಜಯ್ ಶ್ರೀರಾಮ್ ಹೇಳಿದರು.

ಇದನ್ನೂ ಓದಿ: ಬಹುನಿರೀಕ್ಷಿತ 'KGF-2' ಟೀಸರ್​ನಂತೆ ಟಾಟಾ ಸಫಾರಿ ಹೊಸ ಕಾರಿನ ಫೋಟೋಗಳು ಲೀಕ್​

ರೈತರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕವಾಗಿ 6,000 ರೂ. ನೇರವಾಗಿ ಪಾವತಿಸುವ ಪಿಎಂ-ಕಿಸಾನ್ ಯೋಜನೆಯನ್ನು ಉಲ್ಲೇಖಿಸಿದ ಅವರು, ಡಿಬಿಟಿ ಕಾರ್ಯವಿಧಾನ ಉತ್ತಮವಾಗಿ ಹೊಂದಿಸಬೇಕು. ಕ್ರಮೇಣ ಇತರ ಸಬ್ಸಿಡಿಗಳಿಗೆ ಬದಲಾಗಿ ರೈತರನ್ನು ಬೆಂಬಲಿಸಲು ಬಳಸಿಕೊಳ್ಳಬೇಕು ಎಂದರು.

ಹಣವನ್ನು ಹೇಗೆ ಬಳಸಬೇಕೆಂಬುದನ್ನು ರೈತರು ನಿರ್ಧರಿಸಲಿ. ಡಿಬಿಟಿಯ ಲಾಭದೊಂದಿಗೆ ರೈತರು ಉತ್ತಮ ಬೀಜ ಖರೀದಿಸಬಹುದು. ಹೊಸ ಮಾದರಿಯ ಗೊಬ್ಬರಗಳನ್ನು ಬಳಸಬಹುದು. ನೀರಿನ ಬಳಕೆಯನ್ನು ಉತ್ತಮಗೊಳಿಸಬಹುದು ಎಂದು ಶ್ರೀರಾಮ್ ಸಲಹೆ ನೀಡಿದರು.

ಅನೇಕ ಭಾರತೀಯ ಉದ್ಯಮಗಳು ಕೃಷಿ-ತಂತ್ರಜ್ಞಾನ ಜಾಗದಲ್ಲಿ ಹೂಡಿಕೆ ಮಾಡಿವೆ. ಈ ಕಂಪನಿಗಳ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಇತ್ತೀಚಿನ ತಂತ್ರಗಳನ್ನು ಅಳವಡಿಸಿಕೊಳ್ಳುವ ನೀತಿ ಪ್ರತಿಪಾದಿಸಿದರು.

ಸ್ಥಳೀಯ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಯಿಂದ (ಆರ್&ಡಿ) ಇತ್ತೀಚಿನ ವರ್ಷಗಳಲ್ಲಿ ಯಾವುದೇ ಮಹತ್ವದ ಪ್ರಗತಿಯಾಗಿಲ್ಲ. ಇದು ಸಂಪನ್ಮೂಲ ಬಿಕ್ಕಟ್ಟಿನ ಕಾರಣದಿಂದಾಗಿರಬಹುದು.

ತಕ್ಷಣದ ಗಮನ ಹರಿಸಬೇಕಾದ ಎರಡು ಕ್ಷೇತ್ರಗಳಲ್ಲಿ ಮೊದಲನೆಯದ್ದು ಕೃಷಿ ಸಂಶೋಧನೆಯನ್ನು ಉದ್ಯಮದ ಅಗತ್ಯತೆಗಳೊಂದಿಗೆ ಜೋಡಿಸುವುದು, ಎರಡನೆಯದಾಗಿ ಜಿಎಂ ಬೆಳೆಗಳಂತಹ ಹೊಸ-ಯುಗದ ತಂತ್ರಜ್ಞಾನಗಳಿಗೆ ಸೈದ್ಧಾಂತಿಕ ಪ್ರತಿರೋಧ ತಪ್ಪಿಸುವುದು ಎಂದು ಹೇಳಿದರು.

ರೈತರ ಆದಾಯವನ್ನು ಹೆಚ್ಚಿಸಲು ಜಾನುವಾರು ಸಾಕಣೆ ಒಂದು ಪ್ರಮುಖ ಆಧಾರಸ್ತಂಭವಾಗಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಒಂದು ದೊಡ್ಡ ಅಡೆತಡೆ ಎಂದರೆ ಮರಣ, ಉತ್ಪಾದಕತೆ ಮತ್ತು ಒಟ್ಟಾರೆ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ವಿವಿಧ ರೋಗಗಳ ಹಬ್ಬುವಿಕೆ.

ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸಲು ಲಸಿಕೆಗಳ ಪೂರೈಕೆ ಸಮರ್ಪಕವಾಗಿಲ್ಲ. ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಅಗತ್ಯ ಮೂಲಸೌಕರ್ಯಗಳನ್ನು ರಚಿಸಲು ಈ ಬಜೆಟ್‌ನಲ್ಲಿ ಹಣದ ಅವಶ್ಯಕತೆಯಿದೆ ಎಂದು ಡೆಲಾಯ್ಟ್ ಹೇಳಿದರು.

ಇದನ್ನೂ ಓದಿ: ಡಿಡಿಸಿಯಲ್ಲಿ ಬಂಡಾಯ ಸ್ಪರ್ಧೆ.. ಎಡಿಜಿಪಿಯಲ್ಲಿ ಬಿರುಕು?

ಸಲಹಾ ಸಂಸ್ಥೆ ಡೆಲಾಯ್ಟ್ ಇಂಡಿಯಾ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಹಣ ವಿನಿಯೋಗಿಸುವುದರ ಜೊತೆಗೆ ಅಡುಗೆ ಎಣ್ಣೆಗಳ ಆಮದನ್ನು ಕಡಿಮೆ ಮಾಡಲು ತೈಲ ಬೀಜಗಳ ದೇಶೀಯ ಉತ್ಪಾದನೆ ಹೆಚ್ಚಿಸಲು ಸೂಚಿಸಿದೆ.

ಸಾವಯವ ಕೃಷಿ ಅಳವಡಿಸಿಕೊಳ್ಳಲು ಸರ್ಕಾರ ರೈತರನ್ನು ಪ್ರೋತ್ಸಾಹಿಸಬೇಕು ಎಂದು ಆರ್ಗನಿಸ್ಟ್ ಸಂಸ್ಥಾಪಕ ಚಿರಾಗ್ ಅರೋರಾ ಹೇಳಿದರು. ಈ ಡೊಮೇನ್‌ಗೆ ಪ್ರವೇಶಿಸುವ ಸ್ಟಾರ್ಟ್ಅಪ್‌ಗಳಿಗೆ ತೆರಿಗೆ ಪ್ರೋತ್ಸಾಹ ನೀಡುವ ಮೂಲಕ ಖಾಸಗಿ ವಲಯವನ್ನು ಪ್ರೋತ್ಸಾಹಿಸುವುದು ಅವಶ್ಯಕತೆಯಾಗಿದೆ.

ಕೋಲ್ಡ್-ಚೈನ್‌ಗಳ ರಚನೆಗೆ ಹೂಡಿಕೆ ಹೆಚ್ಚಿಸಲು ಮತ್ತು ಶೇಖರಣಾ ಸಾಮರ್ಥ್ಯ ಹೆಚ್ಚಿಸುವುದು ಅಗತ್ಯವಾಗಿದೆ ಎಂದರು. ಕಳೆದ ತಿಂಗಳು ಹಣಕಾಸು ಸಚಿವಾಲಯದ ವರ್ಚ್ಯುವಲ್​ ಬಜೆಟ್ ಪೂರ್ವ ಸಮಾಲೋಚನೆಯಲ್ಲಿ ಭಾರತ್ ಕೃಷಿಕ್ ಸಮಾಜ (ಬಿಕೆಎಸ್), ಯೂರಿಯಾ ಬೆಲೆ ಹೆಚ್ಚಿಸುವ ಮೂಲಕ ಮತ್ತು ರಂಜಕಗಳ ಸಮತೋಲಿತ ಬಳಕೆ ಪ್ರೋತ್ಸಾಹಿಸಬೇಕು. ಫಾಸ್ಫಟಿಕ್ ಮತ್ತು ಪೊಟ್ಯಾಸಿಕ್ (ಪಿ & ಕೆ) ಪೋಷಕಾಂಶಗಳ ದರ ಕಡಿಮೆ ಮಾಡಿ ಎಂದರು.

ಬಿಕೆಎಸ್ ಅಧ್ಯಕ್ಷ ಅಜಯ್ ವೀರ್ ಜಖರ್ ಅವರು ಡೀಸೆಲ್ ಮೇಲಿನ ತೆರಿಗೆ ಕಡಿತ ಮತ್ತು ಹಣ್ಣು ಮತ್ತು ತರಕಾರಿಗಳ ಮೇಲಿನ ಸಾರಿಗೆ ಸಬ್ಸಿಡಿ ಕಡಿತಗೊಳಿಸಲು ಕೋರಿದ್ದರು. ಆದರೆ, ಅನಾರೋಗ್ಯಕರ ಆಹಾರಗಳ ಮೇಲೆ ತೆರಿಗೆ ವಿಧಿಸಬೇಕೆಂದು ಒತ್ತಾಯಿಸಿದ್ದರು.

ಪ್ರತ್ಯೇಕ ರೈತರಿಗೆ ಸೂಕ್ಷ್ಮ ನೀರಾವರಿ ಮತ್ತು ಸೌರ ಪಂಪ್‌ಗಳಿಗೆ ಮೂರು ಪಟ್ಟು ಹೂಡಿಕೆ ಮಾಡುವುದರ ಜೊತೆಗೆ ಮಣ್ಣಿನ ತೇವಾಂಶ ಅಳತೆ ಸಂವೇದಕಗಳ ವಿತರಣೆಗೆ ಹಣ ಹೂಡಿಕೆ ಮಾಡಬೇಕು. ಮೂಲಸೌಕರ್ಯಕ್ಕಿಂತ ಮಾನವ ಸಂಪನ್ಮೂಲದಲ್ಲಿ ಹೂಡಿಕೆಗೆ ಆದ್ಯತೆ ನೀಡಿ. ಭಾರತದಾದ್ಯಂತ ಕೃಷಿ ಸಂಶೋಧನಾ ಸಂಸ್ಥೆಗಳಲ್ಲಿ ಸುಮಾರು 50 ಪ್ರತಿಶತದಷ್ಟು ಖಾಲಿ ಹುದ್ದೆಗಳಿವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.