ETV Bharat / business

1.75 ಕೋಟಿ ರೂ. ಬಳಿಕ ಮತ್ತೊಂದು ಲಕ್ಷ ಕೋಟಿ ರೂ. ಪ್ಯಾಕೇಜ್.. ಏನಿರಲಿದೆ ಇದರಲ್ಲಿ? - ‘ಕೋವಿಡ್ 19 ಬಿಕ್ಕಟ್ಟು

ಒಂದು ವರ್ಷದವರೆಗೆ ಸಣ್ಣ ಉದ್ಯಮಗಳ ಬಾಕಿ ಇರುವ ಎಲ್ಲಾ ಸಾಲಗಳ ಮೇಲೆ ಶೇ.2ರಷ್ಟು ಸಬ್ಸಿಡಿ ನೀಡುವಂತಹ ಬೇಡಿಕೆ ಇದೆ. ಇದರ ಜಾರಿಗೆ ಮುಂದಾಗಬಹುದು. ಇದು ಜಿಡಿಪಿಯಲ್ಲಿ ಶೇ.0.1ರಷ್ಟು ವೆಚ್ಚವಾಗಲಿದೆ. ಬೇಡಿಕೆಯನ್ನು ಪುನಶ್ಚೇತನಗೊಳಿಸಲು ಗೃಹ ಸಾಲಗಳಿಗೆ ಬಡ್ಡಿಯ ಸಬ್​ಡಿವಿಷನ್ ಪಡೆಯಲು ಆದಾಯ ಮಿತಿ ಐದು ಪಟ್ಟು ಹೆಚ್ಚಿಸಬಹುದು.

package
ಆರ್ಥಿಕ ಪ್ಯಾಕೇಜ್
author img

By

Published : Apr 9, 2020, 4:45 PM IST

ನವದೆಹಲಿ : ಕಳೆದ ತಿಂಗಳು ಘೋಷಿಸಿದ 1.75 ಲಕ್ಷ ಕೋಟಿ ರೂ. ಉತ್ತೇಜನವನ್ನೇ ಹೋಲುವ ಮತ್ತೊಂದು ಹಣಕಾಸಿನ ಪ್ಯಾಕೇಜ್‌ನ ಕೇಂದ್ರ ಸರ್ಕಾರ ಶೀಘ್ರದಲ್ಲೇ ಪ್ರಕಟಿಸಬಹುದು ಎಂದು ವರದಿಯೊಂದು ತಿಳಿಸಿದೆ. ಹೊಸ ಪ್ಯಾಕೇಜ್​ನಲ್ಲಿ ಮಧ್ಯಮ ವ್ಯವಹಾರಗಳಿಗೆ ಬಡ್ಡಿದರ ಇಳಿಕೆ, ತೊಂದರೆಗೆ ಸಿಲುಕಿರುವ ರಿಯಾಲ್ಟಿ ವಲಯಕ್ಕೆ ನೆರವು ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳ ಮರು ಬಂಡವಾಳೀಕರಣ ಬಗ್ಗೆ ಇರಲಿದೆ ಎಂದು ಬ್ಯಾಂಕ್ ಆಫ್ ಅಮೆರಿಕಾ ಸೆಕ್ಯುರಿಟೀಸ್ ಹೇಳಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಡೆ ವ್ಯಕ್ತಿ ಮತ್ತು ದುರ್ಬಲ ವರ್ಗಗಳ ಮೇಲೆ ಬೀಳದಂತೆ ತಡೆಯಲು ಕಳೆದ ತಿಂಗಳು ಕೇಂದ್ರ, ಕೋವಿಡ್-​19 ಆರ್ಥಿಕ ಪ್ಯಾಕೇಜ್​ ಘೋಷಿಸಿತ್ತು. ಇದಕ್ಕೆ 'ಸುಧಾರಿತ ಕ್ರಮಗಳ ಪ್ಯಾಕೇಜ್ ಅಲ್ಲ'ವೆಂಬ ಟೀಕೆಗಳು ಕೇಳಿ ಬಂದಿದ್ದವು. ಘೋಷಣೆ ಮಾಡಿದ ಕೋವಿಡ್-19 ಉತ್ತೇಜನ ಪ್ಯಾಕೇಜ್​ನಲ್ಲಿ ಹಿಂದಿನ ಬಜೆಟ್​ನಲ್ಲಿ ಮಂಡಿಸಿದ್ದ ಅಂಶಗಳಿವೆ. ಹೊಸದಾಗಿ 70,000 ಕೋಟಿ ರೂ. ಅಷ್ಟೇ ಸೇರಿಸಲಾಗಿದೆ ಎಂದು ಎಸ್‌ಬಿಐನ ಅರ್ಥಶಾಸ್ತ್ರಜ್ಞರು ಹೇಳಿದ್ದರು.

0.35ರಷ್ಟು ಪೂರ್ಣಗೊಂಡ ಜಿಡಿಪಿಯಲ್ಲಿ ಶೇ. 0.3ರಷ್ಟು ಆದರೂ 2ನೇ ಆರ್ಥಿಕ ಉತ್ತೇಜನವನ್ನು ಹಣಕಾಸು ಸಚಿವಾಲಯ ಪ್ರಕಟಿಸುತ್ತದೆ ಎಂಬುದನ್ನು ನಾವು ನಿರೀಕ್ಷಿಸುತ್ತೇವೆ ಎಂದು ಬೋಫಾ ಸೆಕ್ಯುರಿಟೀಸ್ ಅರ್ಥಶಾಸ್ತ್ರಜ್ಞರು ತಿಳಿಸಿದ್ದಾರೆ. ಹಣಕಾಸಿನ ಕೊರತೆ ಮತ್ತು ಹಣದುಬ್ಬರದ ಬಗ್ಗೆ ಆತಂಕಗಳು ಮಿತಿಮೀರಿದೆ. ಈವರೆಗೆ ನರೇಂದ್ರ ಮೋದಿ ಸರ್ಕಾರ ಈ ಕಡೆ ವಿವೇಕತನದ ನಡೆ ಪ್ರದರ್ಶಿಸಿದೆ. ಮುಂದೆಯೂ ಅಂತಹದೇ ನಡೆ ತೋರಬಹುದು ಎಂದಿದ್ದಾರೆ.

ಪ್ರಸ್ತುತ ಸನ್ನಿವೇಶ ಗಮನದಲ್ಲಿರಿಸಿಕೊಂಡು ಚೇತರಿಕೆಗೆ ನೆರವಾಗುವ ಹಣಕಾಸಿನ ಉತ್ತೇಜನ ಮತ್ತು ಕುಸಿತದ ಬೆಳವಣಿಗೆಯ ಮೇಲೆ ಅತ್ಯಧಿಕ ನಗದು ಕೊರತೆಯ ಮಧ್ಯೆ ಇರುತ್ತದೆ ಎಂದು ದಲ್ಲಾಳಿ ಸ್ಪಷ್ಟಪಡಿಸಿದ್ದಾರೆ. ಒಂದು ವರ್ಷದವರೆಗೆ ಸಣ್ಣ ಉದ್ಯಮಗಳ ಬಾಕಿ ಇರುವ ಎಲ್ಲಾ ಸಾಲಗಳ ಮೇಲೆ ಶೇ.2ರಷ್ಟು ಸಬ್ಸಿಡಿ ನೀಡುವಂತಹ ಬೇಡಿಕೆ ಇದೆ. ಇದರ ಜಾರಿಗೆ ಮುಂದಾಗಬಹುದು. ಇದು ಜಿಡಿಪಿಯಲ್ಲಿ ಶೇ.0.1ರಷ್ಟು ವೆಚ್ಚವಾಗಲಿದೆ. ಬೇಡಿಕೆಯನ್ನು ಪುನಶ್ಚೇತನಗೊಳಿಸಲು ಗೃಹ ಸಾಲಗಳಿಗೆ ಬಡ್ಡಿಯ ಸಬ್​ಡಿವಿಷನ್ ಪಡೆಯಲು ಆದಾಯ ಮಿತಿ ಐದು ಪಟ್ಟು ಹೆಚ್ಚಿಸಬಹುದು.

ಕಳೆದ ತಿಂಗಳು ಆರ್​ಬಿಐ ಘೋಷಿಸಿದ ಶೇ. 0.75 ಬಡ್ಡಿದರ ಕಡಿತದ ಮೇಲೆ ಜೂನ್ ಮತ್ತು ಅಕ್ಟೋಬರ್‌ನಲ್ಲಿನ ಬಡ್ಡಿದರಗಳನ್ನು ಶೇ. 0.25ರಷ್ಟು ಕಡಿತಗೊಳಿಸುವ ನಿರೀಕ್ಷೆಯಿದೆ. ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಶೇ.2.5ರಷ್ಟು ಕುಸಿಯುತ್ತದೆ ಎಂದು ಬ್ರೋಕ್ರೇಜ್ ಅಂದಾಜಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.