ETV Bharat / business

ಫಾಸ್ಟ್​ಟ್ಯಾಗ್ ಕಡ್ಡಾಯಕ್ಕೆ ಬಂತು ಡೆಡ್​ಲೈನ್​: ಟ್ಯಾಗ್​ ತಪ್ಪಿದರೆ ದುಪ್ಪಟ್ಟು ದಂಡ! - ಫಾಸ್ಟ್​ಟ್ಯಾಗ್​ ಕಡ್ಡಾಯ

ಈ ಹಿಂದೆ ದೇಶದಲ್ಲಿ 2017ರ ಡಿಸೆಂಬರ್​ನಿಂದ ಮಾರಾಟವಾಗುವ ಎಲ್ಲಾ ನಾಲ್ಕು ಚಕ್ರ ವಾಹನಗಳ ನೋಂದಣಿಗೆ ಫಾಸ್ಟ್​ಟ್ಯಾಗ್​ ಅನ್ನು ಸರ್ಕಾರ ಕಡ್ಡಾಯಗೊಳಿಸಿತ್ತು. ಟೋಲ್ ಶುಲ್ಕವನ್ನು ಸ್ವಯಂಚಾಲಿತವಾಗಿ ಕಡಿತವಾಗುವಂತೆ ಫಾಸ್ಟ್‌ಟ್ಯಾಗ್‌ ಅಳವಡಿಸಲಾಗಿದೆ. ಫಾಸ್ಟ್‌ಟ್ಯಾಗ್ ಇರದ ವಾಹನಗಳಿಗೆ ಟೋಲ್ ಮೊತ್ತದ ಎರಡು ಪಟ್ಟು ದಂಡ ಶುಲ್ಕ ಪಾವತಿಸಬೇಕಾಗುತ್ತದೆ.

FASTag
ಫಾಸ್ಟ್​ಟ್ಯಾಗ್
author img

By

Published : Nov 7, 2020, 8:07 PM IST

ನವದೆಹಲಿ: ಎಲೆಕ್ಟ್ರಾನಿಕ್ ಟೋಲ್ ಸಂಗ್ರಹವನ್ನು ವೇಗವಾಗಿ ಅಳವಡಿಸಿಕೊಳ್ಳುವ ಪ್ರಯತ್ನದ ಭಾಗವಾಗಿ 2021ರ ಜನವರಿ 1ರಿಂದ ಎಲ್ಲಾ ನಾಲ್ಕು ಚಕ್ರಗಳ ವಾಹನಗಳಿಗೆ ಫಾಸ್ಟ್ಯಾಗ್ ಬಳಕೆ ಕಡ್ಡಾಯವಾಗಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

ಸೆಂಟ್ರಲ್ ಮೋಟಾರ್ ವೆಹಿಕಲ್ಸ್ ರೂಲ್ಸ್, 1989ರ ಪ್ರಕಾರ, 2017ರಿಂದ ಹೊಸ ನಾಲ್ಕು ಚಕ್ರಗಳ ವಾಹನಗಳ ಎಲ್ಲಾ ನೋಂದಣಿಗೆ ಫಾಸ್ಟ್​ಟ್ಯಾಗ್​ ಅನ್ನು ಕಡ್ಡಾಯಗೊಳಿಸಲಾಗಿದೆ. ವಾಹನ ತಯಾರಕರು ಮತ್ತು ವಿತರಕರು ಟ್ಯಾಗ್ ಅನ್ನು ಪೂರೈಸುತ್ತಿದ್ದಾರೆ.

ಸಾರಿಗೆ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಸಿದ ನಂತರವೇ ಫಿಟ್‌ನೆಸ್ ಪ್ರಮಾಣಪತ್ರ ನವೀಕರಿಸಲಾಗುವುದು ಎಂದು ಆದೇಶಿಸಲಾಗಿದೆ,

ಈ ಹಿಂದೆ ದೇಶದಲ್ಲಿ 2017ರ ಡಿಸೆಂಬರ್​ನಿಂದ ಮಾರಾಟವಾಗುವ ಎಲ್ಲಾ ನಾಲ್ಕು ಚಕ್ರ ವಾಹನಗಳ ನೋಂದಣಿಗೆ ಫಾಸ್ಟ್​ಟ್ಯಾಗ್​ ಅನ್ನು ಸರ್ಕಾರ ಕಡ್ಡಾಯಗೊಳಿಸಿತ್ತು. ಟೋಲ್ ಶುಲ್ಕವನ್ನು ಸ್ವಯಂಚಾಲಿತವಾಗಿ ಕಡಿತವಾಗುವಂತೆ ಫಾಸ್ಟ್‌ಟ್ಯಾಗ್‌ ಅಳವಡಿಸಲಾಗಿದೆ. ಫಾಸ್ಟ್‌ಟ್ಯಾಗ್ ಇರದ ವಾಹನಗಳಿಗೆ ಟೋಲ್ ಮೊತ್ತದ ಎರಡು ಪಟ್ಟು ದಂಡ ಶುಲ್ಕ ಪಾವತಿಸಬೇಕಾಗುತ್ತದೆ.

ರಾಷ್ಟ್ರೀಯ ಪರವಾನಗಿ ವಾಹನಗಳಿಗೆ ಸಂಬಂಧ, 2019ರ ಅಕ್ಟೋಬರ್ 1ರಿಂದ ಫಾಸ್ಟ್‌ಟ್ಯಾಗ್‌ನ ಅಳವಡಿಕೆ ಕಡ್ಡಾಯವಾಗಿದೆ ಎಂದು ಸಚಿವಾಲಯ ತಿಳಿಸಿದೆ. 2021ರ ಏಪ್ರಿಲ್ 1ರಿಂದ ಹೊಸ ತೃತೀಯ ವಾಹನ ವಿಮೆಯನ್ನು ಪಡೆಯಲು ಸಾರಿಗೆ ಸಚಿವಾಲಯವು ಫಾಸ್ಟ್ಯಾಗ್ ಬಳಕೆಯನ್ನು ಕಡ್ಡಾಯಗೊಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.