ನವದೆಹಲಿ: ತಮ್ಮದೆಯಾದ ಸ್ವಂತ ಮನೆ ಹೊಂದಬೇಕೆಂಬ ಕನಸು ಹೊತ್ತ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. 10 ವರ್ಷ ವಾಯಿದೆಯ ಸರ್ಕಾರಿ ಸೆಕ್ಯುರಿಟಿ ಬಾಂಡ್ ಜೋಡಣೆಯ ಗೃಹ ನಿರ್ಮಾಣದ ಮುಂಗಡ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ.
ದೆಹಲಿಯಲ್ಲಿ ಪ್ರಸ್ತುತ ದೇಶದ ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಬಡಿ ಕಡಿತದಿಂದ ಮನೆ ನಿರ್ಮಿಸುವ ಸರ್ಕಾರಿ ನೌಕರರಿಗೆ ಆರ್ಥಿಕವಾಗಿ ನೆರವಾಗಲಿದೆ. ಈ ಮೂಲಕ ವಸತಿ ಬೇಡಿಕೆಯನ್ನು ಹೆಚ್ಚಳವಾಗಲಿದೆ ಎಂಬ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಇದು ಗೃಹ ನಿರ್ಮಾಣ ಕ್ಷೇತ್ರದ ಪುನಶ್ಚೇತನಕ್ಕೆ ಸರ್ಕಾರ ಘೋಷಿಸಿದ ಪ್ಯಾಕೇಜ್ನ ಒಂದು ಭಾಗವಾಗಿದೆ.
-
Government announces new measures to boost housing and facilitate home buyers
— PIB India (@PIB_India) September 14, 2019 " class="align-text-top noRightClick twitterSection" data="
External Commercial Borrowing guidelines to be relaxed
Encouraging Govt Servants to buy houses, Union Minister @nsitharaman announces lowering of Interest rate on House Building Advance shall be pic.twitter.com/04FvhlwnyN
">Government announces new measures to boost housing and facilitate home buyers
— PIB India (@PIB_India) September 14, 2019
External Commercial Borrowing guidelines to be relaxed
Encouraging Govt Servants to buy houses, Union Minister @nsitharaman announces lowering of Interest rate on House Building Advance shall be pic.twitter.com/04FvhlwnyNGovernment announces new measures to boost housing and facilitate home buyers
— PIB India (@PIB_India) September 14, 2019
External Commercial Borrowing guidelines to be relaxed
Encouraging Govt Servants to buy houses, Union Minister @nsitharaman announces lowering of Interest rate on House Building Advance shall be pic.twitter.com/04FvhlwnyN
ಪ್ರಸ್ತುತ ಆರ್‌ಬಿಐ ಅನ್ವಯ, 10 ವರ್ಷದ ಸರ್ಕಾರಿ ಬಾಂಡ್ ಶೇ 6.64ರಲ್ಲಿ ವಹಿವಾಟು ನಡೆಸುತ್ತಿದೆ. ಇದು 2017ರಿಂದ ಇತ್ತೀಚೆಗೆ ಅತ್ಯಂತ ಕಡಿಮೆ ಮಟ್ಟದಲ್ಲಿದೆ. 2017-18ರ ಆರ್ಥಿಕ ವರ್ಷದಿಂದ ವಸತಿ ಕಟ್ಟಡ ಮುಂಗಡದ ಮೇಲಿನ ಆಸಕ್ತಿಯು ಶೇ 8.50ರಷ್ಟಾಗಿದೆ. ಹಣಕಾಸು ಸಚಿವಾಲಯವು ಪ್ರತಿ ಮೂರು ವರ್ಷಗಳಿಗೊಮ್ಮೆ ಇದನ್ನು ಪರಿಷ್ಕರಿಸುತ್ತದೆ.
ಗೃಹ ನಿರ್ಮಾಣ ಮುಂಗಡ (ಎಚ್‌ಬಿಎ) ಎಂದರೇನು?
ತಮ್ಮ ಅಥವಾ ಸಂಗಾತಿಯ ಒಡೆತನದ ಜಾಗದಲ್ಲಿ ಜಂಟಿಯಾಗಿ ಹೊಸ ಮನೆ ನಿರ್ಮಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಎಚ್‌ಬಿಎ ಲಭ್ಯತೆ ಕಲ್ಪಿಸುತ್ತದೆ. ಹೊಸ ಮನೆ ಅಥವಾ ಫ್ಲಾಟ್ ಖರೀದಿಸಲು ಈ ಯೋಜನೆಯಡಿ ನೆರವನ್ನೂ ಸಹ ಪಡೆಯಬಹುದು.
-