ETV Bharat / business

ಪಾತಾಳಕ್ಕೆ ಕುಸಿದಿರೋ ಆರ್ಥಿಕತೆ ಮೇಲೆತ್ತಲು ಬರಲಿದೆ ದೊಡ್ಡ ಮೊತ್ತದ ಮತ್ತೊಂದು ಪ್ಯಾಕೇಜ್​!? - second stimulus package

ಮೇ ತಿಂಗಳಲ್ಲಿ ದೇಶವ್ಯಾಪಿ 3ನೇ ಹಂತದ ಲಾಕ್​ಡೌನ್ ಅಂತ್ಯಕ್ಕೆ ಕೆಲ ದಿನಗಳು ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿ, ಆತ್ಮನಿರ್ಭರ ಭಾರತದಡಿ ಒಟ್ಟು ಜಿಡಿಪಿಯ ಶೇ 10ರಷ್ಟು ಅಂದಾಜು 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು. ಈ ಬಳಿಕ ಕ್ಷೇತ್ರವಾರು ಹಂಚಿಕೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಪ್ರಕಟಿಸಿದ್ದರು.

Modi- FM
ಮೋದಿ- ಸೀತಾರಾಮನ್
author img

By

Published : Nov 11, 2020, 11:37 PM IST

ನವದೆಹಲಿ: ಕುಗ್ಗಿದ ಆರ್ಥಿಕತೆಯನ್ನು ಮೇಲೆತಲು ಕೇಂದ್ರ ಸರ್ಕಾರವು ಈ ವಾರದಲ್ಲಿ ಸುಮಾರು 20 ಬಿಲಿಯನ್ ಡಾಲರ್ (₹ 1.5 ಲಕ್ಷ ಕೋಟಿ) ಮತ್ತೊಂದು ಸುತ್ತಿನ ಉತ್ತೇಜಕ ಪ್ಯಾಕೇಜ್​ ಘೋಷಿಸಲು ಯೋಜಿಸುತ್ತಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗುತ್ತಿದೆ.

ಮೇ ತಿಂಗಳಲ್ಲಿ ದೇಶವ್ಯಾಪಿ 3ನೇ ಹಂತದ ಲಾಕ್​ಡೌನ್ ಅಂತ್ಯಕ್ಕೆ ಕೆಲ ದಿನಗಳು ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿ, ಆತ್ಮನಿರ್ಭರ ಭಾರತದಡಿ ಒಟ್ಟು ಜಿಡಿಪಿಯ ಶೇ 10ರಷ್ಟು ಅಂದಾಜು 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು. ಈ ಬಳಿಕ ಕ್ಷೇತ್ರವಾರು ಹಂಚಿಕೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಪ್ರಕಟಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಸಚಿವಾಲಯದ ಇತರ ಉನ್ನತ ಅಧಿಕಾರಿಗಳು ಈ ವಾರದಲ್ಲಿ ಯೋಜನೆಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಆಯ್ದ 10 ಕ್ಷೇತ್ರಗಳಲ್ಲಿ ಮುಂದಿನ ಐದು ವರ್ಷಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು 27 ಬಿಲಿಯನ್ ಡಾಲರ್​ (2 ಲಕ್ಷ ಕೋಟಿ ರೂ.) ಹೂಡಿಕೆಗೆ ಕೇಂದ್ರ ಸಚಿವ ಸಂಪುಟ ಬುಧವಾರವಷ್ಟೆ ಅನುಮೋದನೆ ನೀಡಿದೆ. ಈ ಉತ್ಪಾದನಾ ಸಂಬಂಧಿತ ಘೋಷಣೆಯಂತೆ ಈ ಪ್ಯಾಕೇಜ್ ಅನುಸರಿಸುತ್ತದೆ.

ಉದ್ಯೋಗ ಸೃಷ್ಟಿಯತ್ತು ಗಮನ ಇಟ್ಟುಕೊಂಡು, ತೀವ್ರ ಒತ್ತಡಕ್ಕೆ ಒಳಗಾದ ಕ್ಷೇತ್ರಗಳತ್ತ ಆದ್ಯತೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಹೆಚ್ಚಿನ ವಿವರಗಳನ್ನು ಪ್ಯಾಕೇಜ್‌ನ ಬಗ್ಗೆ ನೀಡಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.