ನವದೆಹಲಿ: ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಪ್ರಾವಿಡೆಂಟ್ ಫಂಡ್ (ಪಿಎಫ್) ಮೇಲಿನ ಬಡ್ಡಿ ಮೇಲಿನ ತೆರಿಗೆ ಕಡಿತದ ಮಿತಿಯನ್ನು ಗರಿಷ್ಠ 5 ಲಕ್ಷ ರೂ.ಗೆ ಹೆಚ್ಚಿಸಲು ಕೇಂದ್ರ ನಿರ್ಧರಿಸಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಇತ್ತೀಚಿನ ಬಜೆಟ್ ಭಾಷಣದಲ್ಲಿ ಪಿಎಫ್ ಖಾತೆಗೆ ಗಳಿಸಿದ ಬಡ್ಡಿಗೆ ವರ್ಷಕ್ಕೆ 2.50 ಲಕ್ಷ ರೂ. ಮೀರಿದರೆ ತೆರಿಗೆ ವಿಧಿಸಲಾಗುವುದು ಎಂದು ತಿಳಿಸಿದ್ದರು.
ಇದು ಮುಂದಿನ ತಿಂಗಳು ಒಂದನೇ ತಾರಿಖಿನಿಂದ ಜಾರಿಗೆ ಬರಲಿದೆ. ಪಿಎಫ್ ಮಿತಿಯನ್ನು ಉಲ್ಲೇಖಿಸಿ ಹಣಕಾಸು ಮಸೂದೆ ಕುರಿತು ಮಂಗಳವಾರ ಲೋಕಸಭೆಯಲ್ಲಿ ನಡೆದ ಚರ್ಚೆಗೆ ನಿರ್ಮಲಾ ಪ್ರತಿಕ್ರಿಯಿಸಿದರು. ಕಾನೂನಿನ ಪ್ರಕಾರ, ಉದ್ಯೋಗದಾತನು ಪಿಎಫ್‌ನಲ್ಲಿ ತನ್ನ ಪಾಲಿನಂತೆ ನೌಕರಿಯ ಮೂಲ ವೇತನದ ಶೇ 12ರವರೆಗೆ ಕೊಡುಗೆ ನೀಡುತ್ತಾನೆ. ಮಾಲೀಕರು ಈ ಮೊತ್ತಕ್ಕಿಂತ ಹೆಚ್ಚಿನದನ್ನು ಪಿಎಫ್‌ನಲ್ಲಿ ಠೇವಣಿ ಇಟ್ಟರೆ, ಆ ಮೊತ್ತವನ್ನು ಇತ್ತೀಚಿನ ಮಿತಿಯ 5 ಲಕ್ಷ ರೂ.ಗೆ ಘೋಷಿಸಲಾಗುತ್ತೆ. ಅಂದರೆ, ಮಾಲೀಕರು ತಮ್ಮ ಪಾಲುಗಿಂತ ಹೆಚ್ಚಿನದನ್ನು ಚಂದಾದಾರರ ಪಿಎಫ್ ಖಾತೆಗೆ ಜಮಾ ಮಾಡದ ಹೊರತು ನಾವು ಪಿಎಫ್ ಠೇವಣಿಗಳ ಮೇಲಿನ ಬಡ್ಡಿ ಮೇಲಿನ ತೆರಿಗೆಯನ್ನು ವರ್ಷಕ್ಕೆ 5 ಲಕ್ಷ ರೂ.ಗಳವರೆಗೆ ಕಡಿತಗೊಳಿಸುತ್ತೇವೆ. ಪಿಎಫ್ ಅನ್ನು ವಾರ್ಷಿಕ 2.50 ಲಕ್ಷ ರೂ.ಗಿಂತ ಕಡಿಮೆ ಠೇವಣಿ ಇಡುವವರು ಶೇ 92-93ರಷ್ಟರವರೆಗೆ ಲಭ್ಯವಾಗಿ, ತೆರಿಗೆ ಮುಕ್ತ ಬಡ್ಡಿ ಪಡೆಯುತ್ತಾರೆ ಎಂದರು.
ಇದನ್ನೂ ಓದಿ: ಲಾಕ್‌ಡೌನ್‌ಗೆ ವರ್ಷ: ನಿರುದ್ಯೋಗ ವಿಷವರ್ತುಲದಿಂದ ಹೊರ ಬರದ ಭಾರತ
2.5 ಲಕ್ಷ ರೂ.ಗಿಂತ ಹೆಚ್ಚಿನ ಕೊಡುಗೆಗಳ ಮೇಲೆ ಗಳಿಸಿದ ಬಡ್ಡಿಗೆ ಟಿಡಿಎಸ್ ಹೇಗೆ ಅನ್ವಯವಾಗುತ್ತದೆ0 ಎಂಬುದರ ಕುರಿತು ತೆರಿಗೆ ಇಲಾಖೆ ಅಥವಾ ಸರ್ಕಾರವು ಈವರೆಗೆ ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ. ವ್ಯಕ್ತಿಯ ವಾರ್ಷಿಕ ಮೂಲ ವೇತನವು 21 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ, ಇಪಿಎಫ್ ತೆರಿಗೆ ನಿವ್ವಳ ಅಡಿಯಲ್ಲಿ ಬರುತ್ತದೆ.
ಉದಾ: ವ್ಯಕ್ತಿಯ ವಾರ್ಷಿಕ ಮೂಲ ವೇತನ 22 ಲಕ್ಷ ರೂ.ಗಳಾಗಿದ್ದರೆ, ಆತ ಇಪಿಎಫ್‌ಗೆ 2.64 ಲಕ್ಷ ರೂ. (ಶೇ 12 ರಷ್ಟು) ಕೊಡುಗೆ ನೀಡುತ್ತಾನೆ. ವಾರ್ಷಿಕ 2.5 ಲಕ್ಷ ತೆರಿಗೆ ವಿನಾಯಿತಿ ಮಿತಿಗಿಂತ 14,000 ರೂ. ಶೇ 8.5ರಷ್ಟು ಪಾವತಿ ಎಂದು ಊಹಿಸಿ. ಇದು ಇಪಿಎಫ್ ಮೇಲಿನ ಬಡ್ಡಿದರ 14,000 ರೂ.ಗಿಂತ ಹೆಚ್ಚಿನ ಆದಾಯ 1,190 ರೂ. ಆಗುತ್ತದೆ. ಶೇ 30ರಷ್ಟು ತೆರಿಗೆ ವ್ಯಾಪ್ತಿಯಲ್ಲಿ ಬರುವವರಿಗೆ 371 ರೂ. (ಶೇ 30ರಷ್ಟು ತೆರಿಗೆ ಮತ್ತು ಶೇ 4ರಷ್ಟು ಸೆಸ್) ಸಹ ಪಾವತಿಸಬೇಕಾಗುತ್ತದೆ.