ETV Bharat / business

ಸರ್ಕಾರಿ ಸ್ವಾಮ್ಯದ ಉದ್ಯಮಗಳ ಖಾಸಗೀಕರಣಕ್ಕೆ ಬದ್ಧ: ಪ್ರಧಾನಿ ಮೋದಿ - privatising PSU

ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಖಾಸಗೀಕರಣದ ಕುರಿತು ವೆಬ್‌ನಾರ್‌ನಲ್ಲಿ ಮಾತನಾಡಿದ ಮೋದಿ, ಉದ್ಯಮ ಮತ್ತು ವ್ಯವಹಾರಗಳನ್ನು ಬೆಂಬಲಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ, ಸರ್ಕಾರ ಉದ್ಯಮಗಳನ್ನು ಹೊಂದಿರಬೇಕು ಮತ್ತು ನಡೆಸಬೇಕು ಎಂಬುದು ಅನಿವಾರ್ಯವಲ್ಲ. ಸರ್ಕಾರಕ್ಕೆ ವ್ಯವಹಾರದಲ್ಲಿ ಯಾವುದೇ ಕೆಲಸವಿಲ್ಲ ಎಂಬ ಉದ್ದೇಶದಿಂದ ಸಾರ್ವಜನಿಕ ವಲಯದ ಉದ್ಯಮಗಳನ್ನು ಆಧುನೀಕರಿಸುವುದು ಕೇಂದ್ರದ ನೀತಿಯಾಗಿದೆ ಎಂದರು.

Modi
Modi
author img

By

Published : Feb 24, 2021, 9:55 PM IST

ನವದೆಹಲಿ: ಸರ್ಕಾರಕ್ಕೆ ವ್ಯವಹಾರದಲ್ಲಿ ಯಾವುದೇ ವಹಿವಾಟು ಇಲ್ಲ. ನಾಲ್ಕು ಆಯಕಟ್ಟಿನ ಕ್ಷೇತ್ರಗಳಲ್ಲಿ ಕನಿಷ್ಠ ಪ್ರಮಾಣ ಹೊರತುಪಡಿಸಿ ಎಲ್ಲಾ ಪಿಎಸ್​​ಯು (ಸರ್ಕಾರಿ ಸ್ವಾಮ್ಯದ ಉದ್ಯಮ)ಗಳನ್ನು ಖಾಸಗೀಕರಣಗೊಳಿಸಲು ತಮ್ಮ ಆಡಳಿತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉದ್ಯಮ ಮತ್ತು ವ್ಯವಹಾರಗಳನ್ನು ಬೆಂಬಲಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ, ಸರ್ಕಾರ ಉದ್ಯಮಗಳನ್ನು ಹೊಂದಿರಬೇಕು ಮತ್ತು ನಡೆಸಬೇಕು ಎಂಬುದು ಅನಿವಾರ್ಯವಲ್ಲ. ಸರ್ಕಾರಕ್ಕೆ ವ್ಯವಹಾರದಲ್ಲಿ ಯಾವುದೇ ಕೆಲಸವಿಲ್ಲ ಎಂಬ ಉದ್ದೇಶದಿಂದ ಸಾರ್ವಜನಿಕ ವಲಯದ ಉದ್ಯಮಗಳನ್ನು ಆಧುನೀಕರಿಸುವುದು ಕೇಂದ್ರದ ನೀತಿಯಾಗಿದೆ ಎಂದರು.

ಇದನ್ನೂ ಓದಿ: ಔಷಧ ಕ್ಷೇತ್ರದಲ್ಲಿ 15,000 ಕೋಟಿ ರೂ. ಪಿಎಲ್​​ಐ ಯೋಜನೆಗೆ ಕ್ಯಾಬಿನೆಟ್​ ಅನುಮೋದನೆ

ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಖಾಸಗೀಕರಣದ ಕುರಿತು ವೆಬ್‌ನಾರ್‌ನಲ್ಲಿ ಮಾತನಾಡಿದ ಮೋದಿ, ಭಾರತವನ್ನು ಹೆಚ್ಚಿನ ಬೆಳವಣಿಗೆಯ ಮಾರ್ಗದತ್ತ ಕೊಂಡೊಯ್ಯಲು ಬಜೆಟ್ ಸ್ಪಷ್ಟ ಮಾರ್ಗಸೂಚಿ ನೀಡಿದೆ ಎಂದರು.

ಅನಾರೋಗ್ಯದ ಪಿಎಸ್​ಯುಗಳಿಗೆ ಹಣಕಾಸಿನ ಬೆಂಬಲವು ಆರ್ಥಿಕತೆಯ ಮೇಲೆ ಹೊರೆಯಾಗಿದೆ. ಸಾರ್ವಜನಿಕ ವಲಯದ ಘಟಕಗಳನ್ನು ಕೇವಲ ಪರಂಪರೆಯ ಕಾರಣದಿಂದಾಗಿ ನಡೆಸಬಾರದು. ಅನೇಕ ಪಿಎಸ್​ಯುಗಳು ನಷ್ಟವನ್ನುಂಟುಮಾಡುತ್ತವೆ ಮತ್ತು ತೆರಿಗೆದಾರರ ಹಣದಿಂದ ಬೆಂಬಲಿತವಾಗಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.