ETV Bharat / business

ಟ್ರಕ್​ ಮಾಲೀಕರಿಗೆ ಸಿಹಿ ಸುದ್ದಿ: ಇ-ವೇ ಬಿಲ್​ ಅವಧಿ ಮತ್ತೆ ವಿಸ್ತರಣೆ

author img

By

Published : Jun 10, 2020, 11:59 PM IST

ಮಾರ್ಚ್‌ 24ರಂದು ಅಥವಾ ಅದಕ್ಕಿಂತಲೂ ಮುಂಚೆ ಸೃಷ್ಟಿಸಿರುವ ಇ-ವೇ ಬಿಲ್‌ಗಳ ಸಿಂಧುತ್ವ ಅವಧಿಯು ಜೂನ್‌ 30ರವರೆಗೆ ವಿಸ್ತರಣೆಯಾಗಲಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಐಸಿ) ಪ್ರಕಟಣೆಯಲ್ಲಿ ತಿಳಿಸಿದೆ.

e-way bills
ಇ-ವೇ ಬಿಲ್​

ನವದೆಹಲಿ: ಮಾರ್ಚ್ 24ರಂದು ಅಥವಾ ಅದಕ್ಕೂ ಮೊದಲು ಉತ್ಪತ್ತಿಯಾಗುವ ಇ-ವೇ ಬಿಲ್‌ಗಳ ಸಿಂಧುತ್ವ ಅವಧಿಯನ್ನು ಕೇಂದ್ರ ಸರ್ಕಾರ ಮೂರನೇ ಬಾರಿಗೆ ವಿಸ್ತರಿಸಿದೆ.

ಈ ಹಿಂದೆ ಮಾರ್ಚ್‌ 20 ಮತ್ತು ಏಪ್ರಿಲ್‌ 15ಕ್ಕೆ ಅಂತ್ಯವಾಗುತ್ತಿದ್ದ ಇ-ವೇ ಬಿಲ್‌ಗಳ ಅವಧಿಯನ್ನು ಏಪ್ರಿಲ್‌ 30ರವರೆಗೆ ಬಳಿಕ ಮೇ 31ರವರೆಗೂ ವಿಸ್ತರಣೆ ಮಾಡಿತ್ತು. ಸಡಿಲಿಕೆಯ ಲಾಕ್​ಡೌನ್​ ಇರುವುದರಿಂದ ಕೇಂದ್ರ ಸರ್ಕಾರ ಮತ್ತೆ ಮೂರನೇ ಬಾರಿಗೆ ಅವಧಿ ಮುಂದೂಡಿದೆ.

50,000 ರೂ.ಗಿಂತ ಅಧಿಕ ಮೊತ್ತದ ಸರಕುಗಳನ್ನು ರಾಜ್ಯದ ಒಳಗೆ ಹಾಗೂ ಹೊರ ರಾಜ್ಯಗಳಿಗೆ ಸಾಗಿಸಲು ಇ-ವೇ ಬಿಲ್​ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಈ ಇ-ವೇ ಬಿಲ್​ಗಳು ಸಿಂಧುತ್ವವು ವಹಿವಾಟುದಾರರು ನಮೂದಿಸುವ ಅಂತರವನ್ನು ಅವಲಂಬಿಸಿರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.