ನವದೆಹಲಿ: ಕಳೆದ ಬಜೆಟ್ನಲ್ಲಿ ಅನಾವರಣಗೊಂಡಿದ್ದ ಸೇವಾ ತೆರಿಗೆ ಪಾವತಿದಾರರ ಮತ್ತು ಅಬಕಾರಿ ತೆರಿಗೆಗಳ ಪರಿಹಾರ ಯೋಜನೆ 'ಸಬ್ ಕಾ ವಿಶ್ವಾಸ್'ನ ವಿತ್ತ ಸಚಿವಾಲಯ ಜನವರಿ 15ರವರಗೆ ವಿಸ್ತರಿಸಿದೆ.
ಇಂದೊಂದು ಬಾರಿ ಮತ್ತು ಅಂತಿಮ ತೆರಿಗೆ ಸ್ಕೀಮ್ ಆಗಿದ್ದು, ಈ ಯೋಜನೆಯನ್ನು ತೆರಿಗೆ ಪಾವತಿದಾರರ ಪ್ರತಿಕ್ರಿಯೆಯನ್ನು ಆಧರಿಸಿ ಅವಧಿ ವಿಸ್ತರಿಸಲಾಗಿದೆ. ಇದೇ ಪ್ರಥಮ ಬಾರಿಗೆ ಈ ಯೋಜನೆಯಡಿ ಅವಧಿಯನ್ನು ಮುಂದೂಡಲಾಗುತ್ತಿದೆ ಎಂದು ಹಣಕಾಸು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಯೋಜನೆಯಡಿ ಬರುವ ತೆರಿಗೆದಾರರು ಬಾಕಿ ತೆರಿಗೆಯಾದ 30,627 ಕೋಟಿ ರೂ. ತೆರಿಗೆಯನ್ನು ಜನವರಿ 15ರೊಳಗೆ ಪಾವತಿಸಬೇಕಾಗುತ್ತದೆ. 2019-20ರ ಮುಂಗಡ ಪತ್ರ ಮಂಡನೆ ವೇಳೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 'ಸಬ್ ಕಾ ವಿಶ್ವಾಸ್' ಯೋಜನೆ ಘೋಷಿಸಿದ್ದರು.