ನವದೆಹಲಿ: ಕೇಂದ್ರ ಸರ್ಕಾರವು ಕೃಷಿ ಯಾಂತ್ರೀಕರಣದತ್ತ ಗಮನ ಹರಿಸುತ್ತಿದ್ದು, ರೈತರ ಆದಾಯವ ಹೆಚ್ಚಿಸಲು ಕಡಿಮೆ ಭೂಸ್ವಾಧೀನ ಹೊಂದಿರುವ ಕೃಷಿಕರಿಗೆ ಸಣ್ಣ ಯಂತ್ರಗಳು ಮತ್ತು ಉಪಕರಣಗಳನ್ನು ಒದಗಿಸುವಂತೆ ಉದ್ಯಮಗಳಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿದರು.
ಟ್ರ್ಯಾಕ್ಟರ್ ಮತ್ತು ಯಾಂತ್ರಿಕೀಕರಣ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸಚಿವರು, 10 ವರ್ಷಗಳಲ್ಲಿ ಹೆಕ್ಟೇರ್‌ಗೆ ಕೃಷಿ ಯಾಂತ್ರೀಕರಣ ದ್ವಿಗುಣಗೊಳಿಸುವ ಗುರಿ ಕೇಂದ್ರ ಇರಿಸಿಕೊಂಡಿದೆ. ಇದಕ್ಕೆ ಉದ್ಯಮ ಬೆಂಬಲ ನೀಡಿದರೆ ಮಾತ್ರವೇ ಕಾರ್ಯ ಸಾಧ್ಯವಾಗುತ್ತದೆ ಎಂದಿದ್ದಾರೆ.
ಪೆಟ್ರೋಲ್ಗೆ ಶೇ 20ರಷ್ಟು ಎಥೆನಾಲ್ ಮಿಶ್ರಣ: ನಿಗದಿತ ಗುರಿಗೂ ಮುನ್ನ ಅನುಷ್ಠಾನಕ್ಕೆ ಕೇಂದ್ರ ಚಿಂತನೆ
ವಿಶಾಲವಾದ ಜಮೀನು ಹೊಂದಿರುವ ರೈತರಿಗೆ ದೊಡ್ಡ ಸುಧಾರಿತ ಕೃಷಿ ಉಪಕರಣಗಳನ್ನು ಒದಗಿಸಲು ಒತ್ತು ನೀಡಲಾಗಿದೆ. ಸಣ್ಣ ಎಕರೆ ರೈತರಿಗೆ ಸಣ್ಣ ಉಪಯುಕ್ತ ಯಂತ್ರಗಳನ್ನು ಒದಗಿಸಬೇಕು. ಇದರಿಂದಾಗಿ ಶೇ 86ರಷ್ಟು ರೈತರು ಯಂತ್ರಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು ಮತ್ತು ಅವರ ಆದಾಯ ಹೆಚ್ಚಾಗುತ್ತದೆ ಎಂದು ಸಂಘದ ಸದಸ್ಯರಿಗೆ ಮನವರಿಕೆ ಮಾಡಿದರು.