ನವದೆಹಲಿ: ಇ-ಕಾಮರ್ಸ್ ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ 'ಮೂಲ ದೇಶ'ದ ಮಾಹಿತಿ ಪ್ರದರ್ಶಿಸುವುದು ಕಡ್ಡಾಯ ಸೇರಿದಂತೆ ಇತರೆ ಹೊಸ ನಿಯಮಗಳನ್ನು ಸರ್ಕಾರ ಸೂಚಿಸಿದೆ. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ ಎಂದು ಹೇಳಿದೆ.
'ಗ್ರಾಹಕ ಸಂರಕ್ಷಣೆ (ಇ-ಕಾಮರ್ಸ್) ನಿಯಮಗಳು 2020' ಅಡಿ ಸೂಚಿಸಲಾಗಿದೆ. ಹೊಸ ನಿಯಮಗಳು ಭಾರತದಲ್ಲಿ ಅಥವಾ ವಿದೇಶದಲ್ಲಿ ನೋಂದಣಿಯಾಗಿ ಭಾರತೀಯ ಗ್ರಾಹಕರಿಗೆ ಸರಕು ಮತ್ತು ಸೇವೆಗಳನ್ನು ನೀಡುತ್ತಿರುವ ಎಲ್ಲಾ ಎಲೆಕ್ಟ್ರಾನಿಕ್ ಚಿಲ್ಲರೆ ವ್ಯಾಪಾರಿಗಳಿಗೆ (ಇ-ಟೈಲರ್) ಅನ್ವಯವಾಗುತ್ತದೆ. ನಿಯಮಗಳ ಉಲ್ಲಂಘನೆಯು 2019ರ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ದಂಡ ಹೇರಲಾಗುತ್ತದೆ ಎಂದು ತಿಳಿಸಿದೆ.
ಹೊಸ ನಿಯಮಗಳ ಪ್ರಕಾರ, ಇ-ಕಾಮರ್ಸ್ ಉದ್ಯಮಿಗಳು ಇತರ ಶುಲ್ಕಗಳ ಜೊತೆಗೆ ಮಾರಾಟಕ್ಕೆ ಇರಿಸಿರುವ ಸರಕು ಮತ್ತು ಸೇವೆಗಳ ಒಟ್ಟು ಬೆಲೆ ಪ್ರದರ್ಶಿಸಬೇಕಾಗುತ್ತದೆ.
ಖರೀದಿಗೂ ಮುನ್ನ ಗ್ರಾಹಕರಿಗೆ ವಸ್ತುವಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಅನುವು ಮಾಡಿಕೊಡುವ ಅಗತ್ಯವಿರುತ್ತದೆ. ಮಾರಾಟ ಮತ್ತು ಸರಕುಗಳ 'ಮುಕ್ತಾಯದ ದಿನಾಂಕ' ಮತ್ತು ಸರಕು ಮತ್ತು ಸೇವೆಗಳ 'ಮೂಲ ದೇಶ'ದ ಮಾಹಿತಿಯನ್ನ ನಮೂದಿಸಬೇಕಾಗುತ್ತದೆ.
ಇ-ಕಾಮರ್ಸ್ ಉದ್ಯಮಿಗಳು ರಿಟರ್ನ್, ಮರುಪಾವತಿ, ವಿನಿಮಯ, ಖಾತರಿ ಮತ್ತು ವಾಯ್ದೆ, ವಿತರಣೆ ಮತ್ತು ಸಾಗಣೆಯಂತಹ ಅರಿವಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಗ್ರಾಹಕರಿಗೆ ಅಗತ್ಯವಿರುವ ಯಾವುದೇ ಮಾಹಿತಿ ಬಗೆಗಿನ ವಿವರಗಳನ್ನು ಪ್ರದರ್ಶಿಸಬೇಕು ಎಂದಿದೆ.