ನವದೆಹಲಿ: ಇಂದು ಸಂಜೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿವಾಸದಲ್ಲಿ ಕೇಂದ್ರ ಸಚಿವರ ಗುಂಪಿನ ಸಭೆ ನಡೆಯಲಿದೆ. ಆರು ದಿನಗಳಲ್ಲಿ ಇದು ಸಚಿವರುಗಳ ಎರಡನೇ ಸಭೆಯಾಗಿದ್ದು, ಕೊನೆಯ ಸಭೆ ಮೇ 18ರಂದು ನಡೆದಿತ್ತು.
ಸಭೆಯ ಕಾರ್ಯಸೂಚಿಯು ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಬಗ್ಗೆ ಅರಿಯುವುದು. ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರೈಲ್ವೆ ಸಚಿವ ಪಿಯೂಷ್ ಗೋಯಲ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸೇರಿದಂತೆ ಇತರ ಸಚಿವರು ಭಾಗವಹಿಸಿದ್ದಾರೆ.
ಲಾಕ್‌ಡೌನ್‌ನ ಪ್ರಭಾವದಿಂದ ತತ್ತರಿಸಿರುವ ಹಲವಾರು ಕ್ಷೇತ್ರಗಳ ಚೇತರಿಕೆಗಾಗಿ ಘೋಷಿಸಿದ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್‌ನ ಲಾಭವನ್ನು ವಿಸ್ತರಿಸಲು ಸಭೆ ಮಾರ್ಗಸೂಚಿಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.
ಆರ್ಥಿಕ ತೊಂದರೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲ ಸಚಿವರು ಮತ್ತು ಇತರ ಕ್ಷೇತ್ರಗಳಿಂದ ಪಡೆದ ಸಲಹೆಗಳನ್ನು ನೀಡುತ್ತಾರೆ. ಇವುಗಳ ಅಂತಿಮ ವರದಿಯನ್ನು ಪಿಎಂಒಗೆ ಕಳುಹಿಸಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಲಾಕ್ಡೌನ್ನಿಂದ ತೀವ್ರ ಒತ್ತಡ ಎದುರಿಸುತ್ತಿರುವ ಆರ್ಥಿಕತೆ ಪುನರುಜ್ಜೀವನಗೊಳಿಸಲು ಮೋದಿ ಸರ್ಕಾರ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದೆ. ಇದಲ್ಲದೇ ಕಲ್ಲಿದ್ದಲು, ಖನಿಜ, ರಕ್ಷಣಾ ಉತ್ಪಾದನೆ, ವಾಯುಪ್ರದೇಶ ನಿರ್ವಹಣೆ, ವಿಮಾನ ನಿಲ್ದಾಣ, ವಿದ್ಯುತ್ ವಿತರಣೆ, ಬಾಹ್ಯಾಕಾಶ ಮತ್ತು ಪರಮಾಣು ವಿದ್ಯುತ್ ಮುಂತಾದ ಎಂಟು ಕ್ಷೇತ್ರಗಳ ಖಾಸಗೀಕರಣವನ್ನೂ ಕೇಂದ್ರ ಸರ್ಕಾರ ಪ್ರಕಟಿಸಿದೆ.
ಸರ್ಕಾರದ ಮುಂದಿರುವ ಸವಾಲೆಂದರೇ ಈ ಕ್ರಮಗಳನ್ನು ಅನುಷ್ಠಾನಕ್ಕೆ ತರುವುದು. ರಾಜನಾಥ್ ಸಿಂಗ್ ನೇತೃತ್ವದ ಮಂತ್ರಿಗಳ ಗುಂಪು ಈ ಬಗ್ಗೆ ಚರ್ಚಿಸುತ್ತಿದೆ. ಮಾರ್ಗಸೂಚಿಯೊಂದಿಗೆ ಕಾರ್ಯ ವಿಧಾನಗಳ ಮೂಲಕ ಹೊರಬರಲಿದೆ.