ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ದರ ಇಳಿಕೆಯಾಗಿದ್ದು, ಪ್ರತಿ 10 ಗ್ರಾಂಗೆ ಇಂದು 31 ರೂ. ಕಡಿಮೆಯಾಗಿ 46,891ಕ್ಕೆ ಮಾರಾಟವಾಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ದುರ್ಬಲ ಪ್ರವೃತ್ತಿಗಳು ಮತ್ತು ರೂಪಾಯಿ ಮೌಲ್ಯವರ್ಧನೆಗೆ ಅನುಗುಣವಾಗಿ ದೇಶದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ.
HDFC ಸೆಕ್ಯುರಿಟೀಸ್ ಪ್ರಕಾರ, ಹಿಂದಿನ ವಹಿವಾಟಿನಲ್ಲಿ ಬೆಲೆಬಾಳುವ ಲೋಹವು 10 ಗ್ರಾಂಗೆ 46,922 ರೂ. ಅದೇ ರೀತಿ ಬೆಳ್ಳಿ ಪ್ರತಿ ಕೆಜಿಗೆ 372 ರೂಪಾಯಿ ಇಳಿಕೆ ಕಂಡು 66,444 ರೂ. ರಿಂದ 66,072 ಕ್ಕೆ ಕುಸಿದಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ರೂಪಾಯಿ 4 ಪೈಸೆ ಹೆಚ್ಚಾಗಿದೆ ಮತ್ತು ಯುಎಸ್ ಡಾಲರ್ ಎದುರು 74.30 ಕ್ಕೆ ತಲುಪಿದೆ.
ಇದನ್ನೂ ಓದಿ Gold price: ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಚಿನ್ನ, ಬೆಳ್ಳಿ ದರ ಇಳಿಕೆ; ಇಲ್ಲಿದೆ ಇಂದಿನ ಬೆಲೆ
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಪ್ರಕಾರ, ಕಾಮೆಕ್ಸ್ (ನ್ಯೂಯಾರ್ಕ್ ಮೂಲದ ಸರಕು ವಿನಿಮಯ) ದುರ್ಬಲ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಗಳು ಮೌಲ್ಯವರ್ಧನೆಗೆ ಅನುಗುಣವಾಗಿ 31 ರೂಪಾಯಿಗಳಷ್ಟು ಕಡಿಮೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ ಚಿನ್ನವು 1,810 ಡಾಲರ್‌ಗಳಷ್ಟು ಕಡಿಮೆಯಾಗಿದ್ದರೆ, ಬೆಳ್ಳಿ ಪ್ರತಿ ಔನ್ಸ್‌ಗೆ 25.34 ಡಾಲರ್‌ಗಳಷ್ಟು ವಹಿವಾಟು ನಡೆಸುತ್ತಿದೆ.