ETV Bharat / business

ಜಾಗತಿಕ ಸಾಲ GDPಯ ಶೇ 98ಕ್ಕೆ ಏರಿಕೆ: ಪ್ರತಿ ಭಾರತೀಯನ ಮೇಲೂ 12 ಲಕ್ಷಕ್ಕೂ ಅಧಿಕ ಸಾಲ - ಜಾಗತಿಕ ಸಾಲದ ಐಎಂಎಫ್​ ವರದಿ

ಐಎಂಎಫ್​ನ ಹಣಕಾಸಿನ ಮಾನಿಟರ್ ವರದಿಯ ಪ್ರಕಾರ, ಭಾರತದ ಸರ್ಕಾರದ ಸಾಲವು ಜಿಡಿಪಿಯ ಶೇ 83ರಷ್ಟಿದೆ ಎಂದು ನಿರೀಕ್ಷಿಸಲಾಗಿದೆ. ಹಣಕಾಸು ವಾತಾವರಣದಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ವಿಶ್ವಾಸಾರ್ಹವಾದ ಮಧ್ಯಮ ಅವಧಿಯ ಹಣಕಾಸಿನ ಚೌಕಟ್ಟಿನ ಅಗತ್ಯ ಇದೆ ಎಂಬುದನ್ನು ವರದಿ ಎತ್ತಿ ತೋರಿಸುತ್ತದೆ.

Global public debt
Global public debt
author img

By

Published : Jan 28, 2021, 8:27 PM IST

ವಾಷಿಂಗ್ಟನ್: ಜಾಗತಿಕ ಸಾರ್ವಜನಿಕ ಸಾಲವು 2020ರ ಅಂತ್ಯದ ವೇಳೆಗೆ ಜಿಡಿಪಿಯ ಶೇ 98ನ್ನು ಮುಟ್ಟಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ತನ್ನ ಇತ್ತೀಚಿನ ಹಣಕಾಸಿನ ಮಾನಿಟರ್ ಪರಿಷ್ಕೃತ ವರದಿಯಲ್ಲಿ ತಿಳಿಸಿದೆ.

ಐಎಂಎಫ್​ ಅಂದಾಜಿನ ಪ್ರಕಾರ, ಭಾರತದ ಸರ್ಕಾರದ ಸಾಲವು ಜಿಡಿಪಿಯ ಶೇ 83ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದಿದೆ. ಕೋವಿಡ್​ನಿಂದ ಏರಿಕೆಯಾದ ಸರ್ಕಾರದ ವೆಚ್ಚದಿಂದಾಗಿ ಭಾರತದ ಒಟ್ಟು ಸಾಲದ ಪ್ರಮಾಣವು ಮುಂದಿನ ವರ್ಷದ ವೇಳೆಗೆ 170 ಲಕ್ಷ ಕೋಟಿ ರೂ. ಮುಟ್ಟುವ ಸಾಧ್ಯತೆಯಿದೆ. ಇದು ಒಟ್ಟಾರೆ ಜಿಡಿಪಿಯ ಶೇ 87.6ರಷ್ಟು ಇರಲಿದೆ ಎಂದು ಎಸ್‌ಬಿಐ ಇಕೋವ್ರಾಪ್ ಜುಲೈನಲ್ಲಿ ಅಂದಾಜಿಸಿತ್ತು.

ಐಎಂಎಫ್​ನ ಅಂದಾಜು ಎಸ್​ಬಿಐಗಿಂತ ತುಸು ಕಡಿಮೆಯಾಗಿದೆ. 2019-20ರ ಹಣಕಾಸು ವರ್ಷದಲ್ಲಿ ಭಾರತದ ಸಾಲವು 146.9 ಲಕ್ಷ ಕೋಟಿ ರೂ. ಮೂಲಕ ಜಿಡಿಪಿಯ ಶೇ.72.2ರಷ್ಟಿದೆ. 2012ರ ಹಣಕಾಸು ವರ್ಷದಲ್ಲಿನ 58.8 ಲಕ್ಷ ಕೋಟಿ ರೂ.ಗಳಿಂದ ಏರಿಕೆ ಆಗುತ್ತಲೇ ಸಾಗಿ ಈಗ ಶೇ 80ರ ಗಡಿದಾಟಿದ. ಭಾರತದ ಜನಸಂಖ್ಯೆ ಅಂದಾಜು 136 ಕೋಟಿ ಇದೆ, ಎಂದರೆ ಭಾರತದ ಪ್ರತಿಯೊಬ್ಬ ಪ್ರಜೆಯ ಮೇಲೆ ಸುಮಾರು ಸುಮಾರು 12 ಲಕ್ಷ ರೂ.ಗೂ ಅಧಿಕ ಸಾಲದ ಹೊರೆಯಾಗಲಿದೆ.

ಕೋವಿಡ್-19 ಸಾಂಕ್ರಾಮಿಕವು ಸಾರ್ವಜನಿಕ ಹಣಕಾಸಿನ ಖರ್ಚುಗಳಿಗೆ ತೀವ್ರ ಸವಾಲೊಡ್ಡಿದೆ. ತುರ್ತಾಗಿ ಜೀವಗಳನ್ನು ರಕ್ಷಿಸುವುದರ ಜೊತೆಗೆ ಉತ್ಪಾದನೆಯಲ್ಲಿನ ಸಂಕೋಚನ ಮತ್ತು ಆದಾಯದ ಕುಸಿತವು ಸರ್ಕಾರದ ನಗದು ಕೊರತೆ ಮತ್ತು ಸಾಲ ಪ್ರಮಾಣ ಹೆಚ್ಚಿಸಿದೆ ಎಂದು ವರದಿ ತಿಳಿಸಿದೆ.

ಸರ್ಕಾರದ ಆದಾಯವು ಎಲ್ಲೆಡೆ ಕುಸಿದಿದೆ. ಸಾರ್ವಜನಿಕ ಸಾಲವು ಶೇ 98ಕ್ಕೆ ಏರಿದೆ. ಕೋವಿಡ್​ಗಿಂತ ಮುಂಚಿತ ಅವಧಿಗೆ ಹೋಲಿಸಿದರೆ ಶೇ 84ರಿಂದ ಹೆಚ್ಚಳವಾಗಿದೆ ಎಂದು ಐಎಂಎಫ್‌ನ ಹಣಕಾಸು ವ್ಯವಹಾರಗಳ ವಿಭಾಗದ ನಿರ್ದೇಶಕ ವಿಟರ್ ಗ್ಯಾಸ್‌ಪರ್ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಹೈದರಾಬಾದ್​ನಲ್ಲಿ ಏರ್​ಟೆಲ್ 5ಜಿ ನೆಟ್​​ವರ್ಕ್​ ಪ್ರಯೋಗ ಯಶಸ್ವಿ: ಶೀಘ್ರವೇ ಸೇವೆಗೆ ಲಭ್ಯ

2021ರಿಂದ ಸಾಲವು ಉನ್ನತ ಮಟ್ಟದಲ್ಲಿ ಸ್ಥಿರಗೊಳ್ಳುತ್ತದೆ. ಮುನ್ಸೂಚನೆಯ ಅಂತ್ಯದವರೆಗೆ ಕೋವಿಡ್​-19 ಪೂರ್ವ ಮಟ್ಟಕ್ಕಿಂತಲೂ ಉನ್ನತ ಮಟ್ಟದಲ್ಲಿದೆ ಎಂದರು.

ಹಣಕಾಸಿನ ಮಾನಿಟರ್ ವರದಿಯ ಪ್ರಕಾರ, ಭಾರತದ ಸರ್ಕಾರದ ಸಾಲವು ಜಿಡಿಪಿಯ ಶೇ 83ರಷ್ಟಿದೆ ಎಂದು ನಿರೀಕ್ಷಿಸಲಾಗಿದೆ. ಹಣಕಾಸು ವಾತಾವರಣದಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ವಿಶ್ವಾಸಾರ್ಹವಾದ ಮಧ್ಯಮ ಅವಧಿಯ ಹಣಕಾಸಿನ ಚೌಕಟ್ಟಿನ ಅಗತ್ಯ ಇದೆ ಎಂಬುದು ಎತ್ತಿ ತೋರಿಸುತ್ತದೆ. ಪರಿಷ್ಕೃತ ಹಣಕಾಸಿನ ಉದ್ದೇಶಗಳು ಮತ್ತು ಆದಾಯ ಕ್ರೋಢೀಕರಣದತ್ತ ಗಮನಹರಿಸಬೇಕಿದೆ.

ಜಾಗತಿಕ ಸಾರ್ವಜನಿಕ ಸಾಲವು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. 2020ರಲ್ಲಿ ಜಿಡಿಪಿಯ ಶೇ 98ರಿಂದ 2021 ರಲ್ಲಿ ಜಿಡಿಪಿಯ ಸುಮಾರು 100 ಪ್ರತಿಶತದವರೆಗೆ ಮುಂದುವರಿದು ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳಿಂದ ಪ್ರೇರಿತವಾಗಿದೆ ಎಂದು ಐಎಂಎಫ್​​ನ ಹಣಕಾಸು ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಪಾವೊಲೊ ಮೌರೊ ಹೇಳಿದರು.

ಸಾಂಕ್ರಾಮಿಕ ರೋಗವು ಈಗಲೂ ನಿಯಂತ್ರಣದಲ್ಲಿಲ್ಲ. ಆರ್ಥಿಕತೆಗಳು ಸಂಭಾವ್ಯತೆಗಿಂತ ಕಡಿಮೆ ಆಗುತ್ತಿರುವುದರಿಂದ ಜೀವನೋಪಾಯ ರಕ್ಷಿಸಲು 2021ರಲ್ಲಿ ಹೆಚ್ಚುವರಿ ಹಣಕಾಸಿನ ಬೆಂಬಲ ಅಗತ್ಯವಿರುತ್ತದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.