ETV Bharat / business

ಸರ್ಕಾರಿ ಒಡೆತನ ವಿಮಾ ಕಂಪನಿಗೆ ವರ್ಷದ ಮೊದಲ ತ್ರೈಮಾಸಿಕದಲ್ಲಿ 497 ಕೋಟಿ ರೂ. ನಷ್ಟ! - ಮೊದಲ ತ್ರೈಮಾಸಿಕ

ಕೇಂದ್ರ ಸರ್ಕಾರದ ಜನರಲ್‌ ಇನ್ಸೂರೆನ್ಸ್ ಕಾರ್ಪೋರೇಷನ್‌ ಆಫ್‌ ಇಂಡಿಯಾ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ 497 ಕೋಟಿ ರೂಪಾಯಿಗಳ ನಷ್ಟ ಹೊಂದಿಗೆ ಎಂದು ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.

gic-re-reports-q1-net-loss-of-rs-497-cr-as-premiums-decline
ಸರ್ಕಾರಿ ಒಡೆತನ ವಿಮಾ ಕಂಪನಿಗೆ ವರ್ಷದ ಮೊದಲ ತ್ರೈಮಾಸಿಕದಲ್ಲಿ 497 ಕೋಟಿ ರೂ.ನಷ್ಟ
author img

By

Published : Sep 8, 2020, 12:40 PM IST

ಮುಂಬೈ(ಮಹಾರಾಷ್ಟ್ರ): ಸರ್ಕಾರಿ ಒಡೆತನದ ಜನರಲ್‌ ಇನ್ಸೂರೆನ್ಸ್ ಕಾರ್ಪೋರೇಷನ್‌ ಆಫ್‌ ಇಂಡಿಯಾ (GIC Re)ಗೆ 2020ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 497 ಕೋಟಿ ರೂಪಾಯಿ ಕ್ರೋಢೀಕರಣದ ನಿವ್ವಳ ನಷ್ಟವಾಗಿದೆ. ಆದರೆ 192 ಕೋಟಿ ರೂಪಾಯಿ ಲಾಭವಾಗಿದೆ ಎಂದು ಸಂಸ್ಥೆ ಹೇಳಿದೆ.

ದೇಶದಲ್ಲಿ ನೇರವಾಗಿ ವಿಮಾ ಕಂತಿನ ಹಣ ಪಾವತಿಯನ್ನು ಕಡಿಮೆ ಮಾಡಿರುವ ಪರಿಣಾಮವಾಗಿ ಈ ನಷ್ಟ ಸಂಭವಿಸಿದೆ. 2021ರ ಹಣಕಾಸು ವರ್ಷದ ಪೂರ್ವ ತೆರಿಗೆ 783 ಕೋಟಿ ರೂ. ನಷ್ಟವಾಗಿದೆ. ಆದರೆ 2020ರ ಮೊದಲ ತ್ರೈಮಾಸಿಕದಲ್ಲಿ 159 ಕೋಟಿ ರೂಪಾಯಿಗಳ ಪೂರ್ವ ತೆರಿಗೆ ಆದಾಯ ಗಳಿಸಿರುವುದಾಗಿ ಮಾಹಿತಿ ನೀಡಿದೆ.

ಕೋವಿಡ್‌-19ನಿಂದಾಗಿ ಜಾಗತಿಕ ಮಟ್ಟದಲ್ಲಿ ವಿಮಾ ವಲಯ ಕುಸಿತ ಕಂಡಿದೆ. ಮುಂದಿನ ದಿನಗಳಲ್ಲಿ ಈ ವ್ಯವಹಾರ ವೃದ್ಧಿಯಾಗುವ ವಿಶ್ವಾಸವಿದೆ ಎಂದು ಜಿಕ್‌ ರೇ ವಿಶ್ವಾಸ ವ್ಯಕ್ತಪಡಿಸಿದೆ. ಕಳೆದ ವರ್ಷದ ಜೂನ್‌ ಅಂತ್ಯದ ತ್ರೈಮಾಸಿಕದಲ್ಲಿ 21,110 ಕೋಟಿ ರೂಪಾಯಿ ಪ್ರೀಮಿಯಂನಿಂದ ಬಂದ ಆದಾಯವಾಗಿತ್ತು. ಈ ಬಾರಿ ಅದು 15,983ಕ್ಕೆ ಕುಸಿದಿರುವುದಾಗಿ ಹೇಳಿಕೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.