ನವದೆಹಲಿ: 2019ರ ಅಕ್ಟೋಬರ್ - ಡಿಸೆಂಬರ್ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯು ಶೇ 4.5 ರಷ್ಟಿದೆ ಎಂದು ಎಸ್‌ಬಿಐನ ಅರ್ಥಶಾಸ್ತ್ರಜ್ಞರು ಅಧಿಕೃತ ಅಂಕಿ-ಅಂಶಗಳ ಬಿಡುಗಡೆಗೆ ಎರಡು ದಿನಗಳ ಮುನ್ನ ಹೇಳಿಕೆ ನೀಡಿದ್ದಾರೆ.
ವಿವಿಧ ಸರಕುಗಳಿಗೆ ಚೀನಾದ ಆಮದಿನ ಮೇಲೆ ಹೆಚ್ಚು ಅವಲಂಬನೆ ಇರುವುದರಿಂದ ಭಾರತದ ಆರ್ಥಿಕತೆಯು ಕೊರೊನಾ ಸೋಂಕಿನ ಪ್ರಭಾವಿತದ ಅಪಾಯವನ್ನು ಎದುರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
2019-20ರಲ್ಲಿನ ಜಿಡಿಪಿಯ ಶೇ 5ರಷ್ಟು ಬೆಳವಣಿಗೆಯು ದಶಕದ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ದೇಶಿಯ ಉಪಭೋಗದ ಬಳಕೆಯ ಕುಸಿತ ಮತ್ತು ನಿಧಾನಗತಿಯ ವಿಶ್ವ ಮಾರುಕಟ್ಟೆಗಳು ಭಾರತೀಯ ರಫ್ತಿನ ಮೇಲೆ ಪರಿಣಾಮ ಬೀರಿವೆ.
ಬೆಳವಣಿಗೆಯ ವೇಗದಲ್ಲಿನ ಕುಸಿತವು ನೀತಿ ನಿರೂಪಣೆಯ ಹಲವು ಉಪಕ್ರಮಗಳಿಗೆ ಕಾರಣವಾಗಿದೆ. 2019ರಲ್ಲಿ ರಿಸರ್ವ್ ಬ್ಯಾಂಕ್ ಶೇ 1.35 ಸಂಚಿತ ದರ ಕಡಿತ ಮತ್ತು ಕಾರ್ಪೊರೇಟ್ ನೇರ ತೆರಿಗೆ ಇಳಿಕೆಗೂ ಕಾರಣವಾಗಿತ್ತು. ಎಸ್‌ಬಿಐ ಅರ್ಥಶಾಸ್ತ್ರಜ್ಞರು, 2019-20ರ ವಿತ್ತೀಯ ವರ್ಷದ ಬೆಳವಣಿಗೆಯ ಅಂದಾಜನ್ನು ಹಿಂದಿನ ಅಂದಾಜು ಶೇ 4.6ರ ಬದಲಾಗಿ ಶೇ 4.7ಕ್ಕೆ ಪರಿಷ್ಕರಿಸಿದ್ದಾರೆ.
2018-19ರ ಹಣಕಾಸು ವರ್ಷದ ಬೆಳವಣಿಗೆಯು ಸರ್ಕಾರದ ತೀರಾ ಕೆಳಹಂತದ ಪರಿಷ್ಕರಣೆಯಿಂದಾಗಿ 2018ರ ಏಪ್ರಿಲ್ ತಿಂಗಳಿಂದಲೇ ನಿಧಾನಗತಿಯ ಆರ್ಥಿಕತೆಗೆ ಸಜ್ಜಾಗಿದೆ ಎಂಬುದನ್ನ ಸೂಚಿಸುತ್ತದೆ ಎಂದು ಎಸ್‌ಬಿಐ ಅರ್ಥಶಾಸ್ತ್ರಜ್ಞರು ಹೇಳಿಕೊಂಡಿದ್ದಾರೆ.