ETV Bharat / business

ಖಾಸಗಿಯತ್ತ 6 ಏರ್​​​​ಪೋರ್ಟ್​​​​: ಲೋಡ್​ ಶೆಡ್ಡಿಂಗ್​​ಗಾಗಿ ವಿದ್ಯುತ್​ ವಿತರಕರಿಗೆ ದಂಡ- ವಿತ್ತ ಸಚಿವೆ ಘೋಷಣೆ - ಎಫ್‌ಎಂ ಸೀತಾರಾಮನ್ ಘೋಷಣೆಗಳು ಇಂದು

ಸ್ವಾವಲಂಬಿ ಭಾರತಕ್ಕೆ ಈ ಪ್ಯಾಕೇಜ್ ನೆರವಾಗಲಿದೆ. ಹಲವು ವಲಯಗ ನೀತಿಗಳನ್ನು ಮಾರ್ಪಡಿಸುವ ಅಗತ್ಯವಿದೆ. ಜಾಗತಿಕ ಪೂರೈಕೆ ಸರಪಳಿಯ ಸವಾಲುಗಳನ್ನು ಎದುರಿಸಲು ನಾವು ಸ್ವಾವಲಂಬಿಗಳಾಗಿರಬೇಕು ಮತ್ತು ದೃಢವಾಗಿರಬೇಕು. ಅನೇಕ ಕ್ಷೇತ್ರಗಳಿಗೆ ನೀತಿ ಸರಳೀಕರಣದ ಅಗತ್ಯವಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್​​ ಹೇಳಿದ್ದಾರೆ.

Nirmala Sitharaman
ನಿರ್ಮಲಾ ಸೀತಾರಾಮನ್
author img

By

Published : May 16, 2020, 4:40 PM IST

Updated : May 16, 2020, 6:11 PM IST

ನವದೆಹಲಿ: ದೇಶವನ್ನು ದುಃಸ್ಥಿತಿಗೆ ದೂಡಿರುವ ಕೊರೊನಾ ಪ್ರೇರೇಪಿತ ಲಾಕ್‌ಡೌನ್ ಪರಿಸ್ಥಿತಿಗಳನ್ನು ನಿರ್ವಹಿಸಲು ಪ್ರಧಾನಿ ಮೋದಿ ಘೋಷಿಸಿದ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜಿನ ಬಗ್ಗೆ ಕಳೆದ ಮೂರು ದಿನಗಳಿಂದ ಹಂತ ಹಂತವಾಗಿ ವಿವರಣೆ ನೀಡುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕೂಡ ಮತ್ತೊಂದಿಷ್ಟು ಪ್ರಕಟಣೆಗಳನ್ನು ಹೊರಡಿಸಿದರು.

ಸ್ವಾವಲಂಬಿ ಭಾರತಕ್ಕೆ ಈ ಪ್ಯಾಕೇಜ್ ನೆರವಾಗಲಿದೆ. ಹಲವು ವಲಯಗಳ ನೀತಿಗಳನ್ನು ಮಾರ್ಪಡಿಸುವ ಅಗತ್ಯವಿದೆ. ಜಾಗತಿಕ ಪೂರೈಕೆ ಸರಪಳಿಯ ಸವಾಲುಗಳನ್ನು ಎದುರಿಸಲು ನಾವು ಸ್ವಾವಲಂಬಿಗಳಾಗಿರಬೇಕು ಮತ್ತು ದೃಢವಾಗಿರಬೇಕು. ಅನೇಕ ಕ್ಷೇತ್ರಗಳಿಗೆ ನೀತಿ ಸರಳೀಕರಣದ ಅಗತ್ಯವಿದೆ ಎಂದರು.

ನೇರ ತೆರಿಗೆ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ತರಲಾಗಿದೆ. ಉದ್ಯಮ ಸರಳೀಕರಣಕ್ಕೆ ಭಾರತದ ಹಲವು ಉತ್ತೇಜಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಾಂಸ್ಥಿಕ ಸುಧಾರಣೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದು, ಅದಕ್ಕಾಗಿ ಇಂದು ಆದ್ಯತೆ ನೀಡುತ್ತಿದ್ದೇನೆ. ಕಾರ್ಪೊರೇಟ್ ಸುಧಾರಣೆಗಳನ್ನು ಘೋಷಿಸುವ ಮೂಲಕ ಭಾರತದಲ್ಲಿ ಹೂಡಿಕೆ ಉತ್ತೇಜಿಸಲಾಗುವುದು ಎಂದರು.

ನೇರ ಲಾಭ ವರ್ಗಾವಣೆ, ಸರಕು ಮತ್ತು ಸೇವಾ ತೆರಿಗೆ, ದಿವಾಳಿತನ ಮತ್ತು ದಿವಾಳಿತನ ಸಂಹಿತೆ, ಸುಲಭ ವ್ಯಾಪಾರಕ್ಕೆ ಕ್ರಮಗಳು, ನೇರ ತೆರಿಗೆ ದಾಖಲೆಗಳು ಹಾಗೂ ವಿದ್ಯುತ್ ವಲಯದ ಸುಧಾರಣೆಗಳಿಗೆ ಮಹತ್ವ ನೀಡಲಾಗಿದೆ ಎಂದು ಹೇಳಿದರು.

ತ್ವರಿತ ಹೂಡಿಕೆಗೆ ನೀತಿ ಸುಧಾರಣೆಗಳನ್ನು ಸರ್ಕಾರ ಪ್ರಕಟಿಸುತ್ತಿದೆ. ಸಶಕ್ತ ಗುಂಪುಗಳ ಮೂಲಕ ಫಾಸ್ಟ್ ಟ್ರ್ಯಾಕ್ ಹೂಡಿಕೆ ಕ್ಲಿಯರೆನ್ಸ್.

ಹೂಡಿಕೆದಾರರೊಂದಿಗೆ ಸಂಘಟಿಸಲು ಪ್ರತಿ ಸಚಿವಾಲಯದಲ್ಲಿ ಯೋಜನಾ ಅಭಿವೃದ್ಧಿ ಕೋಶ ಸ್ಥಾಪನೆ. ಹೊಸ ಹೂಡಿಕೆಗಳಿಗೆ ಸ್ಪರ್ಧಿಸಲು ಹೂಡಿಕೆ ಆಕರ್ಷಣೆಯ ಕುರಿತು ರಾಜ್ಯಗಳ ಶ್ರೇಯಾಂಕ ನಿಗದಿ. ಸೌರ ವಿದ್ಯುತ್​​​​ ಉತ್ಪಾದನೆ, ಸುಧಾರಿತ ಸೆಲ್ ಬ್ಯಾಟರಿ ಸಂಗ್ರಹಣೆ ಮತ್ತು ಇತರ ಕ್ಷೇತ್ರಗಳ ಕ್ಷೇತ್ರಗಳ ಪ್ರಚಾರಕ್ಕಾಗಿ ಪ್ರೋತ್ಸಾಹಕ ಯೋಜನೆಯನ್ನು ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಕೈಗಾರಿಕಾ ಮೂಲಸೌಕರ್ಯಗಳ ನವೀಕರಣ. ಸಾಮಾನ್ಯ ಮೂಲ ಸೌಲಭ್ಯಗಳ ಕೈಗಾರಿಕಾ ಕ್ಲಸ್ಟರ್ ಉನ್ನತೀಕರಣಕ್ಕಾಗಿ ಚಾಲೆಂಜ್ ಮೋಡ್ ಮೂಲಕ ರಾಜ್ಯಗಳಲ್ಲಿ ಯೋಜನೆಗಳನ್ನು ಜಾರಿಗೆ ತರಲಾಗುವುದು. 5 ಲಕ್ಷ ಹೆಕ್ಟೇರ್‌ನಲ್ಲಿ 3,376 ಕೈಗಾರಿಕಾ ಪಾರ್ಕ್​ / ಎಸ್ಟೇಟ್ / ಎಸ್‌ಇ ಝಡ್​ಗಳನ್ನು ಸ್ಥಾಪಿಸಲಾಗುವುದು. ಕೈಗಾರಿಕಾ ಪಾರ್ಕ್​ಗಳನ್ನು 2020 - 21ರಲ್ಲಿ ಸ್ಥಾಪನೆ ಆಗಲಿವೆ ಎಂದು ಮಾಹಿತಿ ನೀಡಿದರು.

8 ಕ್ಷೇತ್ರಗಳಲ್ಲಿ ರಚನಾತ್ಮಕ ಸುಧಾರಣೆಗಳನ್ನು ಘೋಷಿಸಿ ಹೊಸ ಹೂಡಿಕೆಗಳನ್ನು ತರಲು ಸರ್ಕಾರವು ರಚನಾತ್ಮಕ ಸುಧಾರಣೆಗಳನ್ನು ಘೋಷಿಸುತ್ತಿದೆ. ಈ ಎಂಟು ಕ್ಷೇತ್ರಗಳಿಗೆ ವಿದೇಶಿ ಹೂಡಿಕೆ ಆಕರ್ಷಿಸುತ್ತೇವೆ ಎಂದರು.

* ಕಲ್ಲಿದ್ದಲು

* ಖನಿಜ

* ರಕ್ಷಣಾ ಉತ್ಪಾದನೆ

* ವಾಯುಪ್ರದೇಶದ ನಿರ್ವಹಣೆ

* ವಿಮಾನ ನಿಲ್ದಾಣಗಳು

* ಎಂಆರ್‌ಒ

* ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯುತ್ ವಿತರಣಾ ಕಂಪನಿಗಳು

* ಬಾಹ್ಯಾಕಾಶ

* ಪರಮಾಣು ಶಕ್ತಿ

ಕಲ್ಲಿದ್ದಲು ಆಮದು ಕಡಿಮೆ ಮಾಡಿ ದೇಶದಲ್ಲೇ ಉತ್ಪಾದನೆಗೆ ಒಲವು. ಕಲ್ಲಿದ್ದಲು ವಲಯದಲ್ಲಿ ವಾಣಿಜ್ಯ ಗಣಿಗಾರಿಕೆಯನ್ನು ಜಾರಿಗೊಳಿಸಲಾಗುತ್ತಿದೆ. ಖಾಸಿಗೆ ವಲಯದಲ್ಲಿ ಸ್ಪರ್ಧಾತ್ಮಕತೆ ಹಾಗೂ ಪಾರ್ದರ್ಶಕತೆ ತರಲಾಗುವುದು. 50,000 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ. ಕಲ್ಲಿದ್ದಲು ಗಣಿಗೆ ಯಾರೂ ಬೇಕಾದರು ಬಿಡ್ ಪಡೆಯಬಹುದು. ಕಲ್ಲಿದ್ದಲ್ಲು ವಲಯವನ್ನು ಖಾಸಗೀಕರಣಕ್ಕೆ ಒಳಪಡಿಸಲಾಗಿದೆ ಎಂದು ವಿವರಿಸಿದರು.

ನಿರ್ವಹಣೆಯ ಹಣ ಉಳಿಸಲು ರಕ್ಷಣಾ ಮತ್ತು ಸಿವಿಲ್ ಎಂಆರ್‌ಒಗಳ ಒಂದೇ ಸೂರಿನಡಿ ತರಲಾಗುವುದು. ಇನ್ನೂ 6 ವಿಮಾನ ನಿಲ್ದಾಣಗಳು ಹರಾಜಿನಲ್ಲಿವೆ. ಪ್ರೈವೇಟ್ ಉದ್ಯಮಿಗಳಿಗೆ ಹೂಡಿಕೆ ಅವಕಾಶ ನೀಡಲಾಗಿದ್ದು, ನಿರೀಕ್ಷಿತ ನಿಧಿ 13,000 ಕೋಟಿ ರೂ.ಯಷ್ಟಿದೆ. ಇನ್ನೂ 6 ವಿಮಾನ ನಿಲ್ದಾಣಗಳನ್ನು ಬಿಡ್​ ಪ್ರಕ್ರಿಯೆಗೆ ಗುರುತಿಸಬೇಕಾಗಿದೆ. ಹಾರಾಟದ ಸಮಯ ಕಡಿಮೆ ಮಾಡಲು, ಇಂಧನವನ್ನು ಉಳಿಸಲು ವಾಯು ಪ್ರದೇಶವನ್ನು ತರ್ಕಬದ್ಧಗೊಳಿಸಿದೆ ಮತ್ತು ಏರ್ ಸ್ಪೇಸ್ ನಿರ್ಬಂಧಗಳನ್ನು ತೆಗೆದುಹಾಕಬೇಕಿ ಎಂದು ಹೇಳಿದರು.

ಭಾರತೀಯ ವಾಯುಪ್ರದೇಶದ ಕೇವಲ ಶೇ 60ರಷ್ಟು ಮಾತ್ರ ಉಚಿತವಾಗಿ ಲಭ್ಯವಿದೆ. ಭಾರತೀಯ ವಾಯು ಜಾಗವನ್ನು ಬಳಸುವುದರ ಮೇಲಿನ ನಿರ್ಬಂಧವನ್ನು ಸರಾಗಗೊಳಿಸುವ ಮೂಲಕ ಹಾರಾಟವು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಇದು ವಾಯುಯಾನ ಕ್ಷೇತ್ರಕ್ಕೆ ವರ್ಷಕ್ಕೆ ಸುಮಾರು 1,000 ಕೋಟಿ ರೂ. ಆದಾಯ ತಂದುಕೊಡಲಿದೆ. ಇನ್ನೂ ಆರು ವಿಮಾನ ನಿಲ್ದಾಣಗಳು ಪಿಪಿಪಿ ಆಧಾರದ ಮೇಲೆ ಹರಾಜಿಗೆ ಸಿದ್ಧವಾಗಿವೆ. ಬಿಡ್ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

6 ವಿಮಾನ ನಿಲ್ದಾಣಗಳಲ್ಲಿ ಖಾಸಗಿ ಹೂಡಿಕೆದಾರರಿಗೆ ಎದುರು ನೋಡುತ್ತಿವೆ. ಎಎಐಗೆ 2,300 ಕೋಟಿ ರೂ. ಪಾವತಿಸಲಾಗುತ್ತಿದೆ. ಭಾರತವನ್ನು ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷಾ (ಎಂಆರ್‌ಒ) ಕೇಂದ್ರವನ್ನಾಗಿ ಮಾಡುವ ಯೋಜನೆ ನಮ್ಮ ಮುಂದಿದೆ. ವಿಮಾನ ಘಟಕ ರಿಪೇರಿ ಮತ್ತು ಏರ್​ಫ್ರೇಮ್​ ನಿರ್ವಹಣೆಯು 800 ಕೋಟಿಯಿಂದ 2,000 ಕೋಟಿ ರೂ.ಗೆ ಹೆಚ್ಚಾಗುತ್ತದೆ. ವಿಶ್ವದ ಪ್ರಮುಖ ಎಂಜಿನ್ ತಯಾರಕರು ಎಂಜಿನ್ ರಿಪೇರಿ ಸೌಲಭ್ಯಗಳನ್ನು ಇಲ್ಲಿಯೇ ಸ್ಥಾಪಿಸಲಿದ್ದಾರೆ. ರಕ್ಷಣಾ ವಲಯ ಮತ್ತು ನಾಗರಿಕ ವಿಮಾನಯಾನ ನಡುವೆ ಒಮ್ಮುಖ ತರಲಾಗುವುದು. ಇದು ನಿರ್ವಹಣೆ ವೆಚ್ಚಗಳನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.

ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯುತ್ ವಿತರಣಾ ಕಂಪನಿಗಳ (ಡಿಸ್ಕೋಮ್​) ಖಾಸಗೀಕರಣಕ್ಕೆ ಅನುವು ಮಾಡಿಕೊಡುತ್ತಿದ್ದೇವೆ. ವಿದ್ಯುತ್, ವಿತರಣೆ ಮತ್ತು ಪೂರೈಕೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ತರಲಾಗುವುದು. ಇದು ಗ್ರಾಹಕರಿಗೆ ಉತ್ತಮ ಸೇವೆಗೆ ಕಾರಣವಾಗುತ್ತದೆ. ಸೇವೆಯ ಗುಣಮಟ್ಟ ಕಾಪಾಡಿಕೊಳ್ಳದ ಡಿಸ್ಕೋಮ್‌ಗಳಿಗೆ ದಂಡ ವಿಧಿಸಲಾಗುತ್ತದೆ. ಡಿಸ್ಕೋಮ್​ ಅಸಮರ್ಥತೆಗೆ ಗ್ರಾಹಕರು ತೊಂದರೆ ಅನುಭವಿಸಬೇಕಾಗಿಲ್ಲ. ಲೋಡ್ ಶೆಡ್ಡಿಂಗ್​ಗೆ ದಂಡದ ಕ್ರಮವನ್ನು ಎದುರಿಸಬೇಕಾಗುತ್ತದೆ. ಹೊಣೆಗಾರಿಕೆಯನ್ನು ಸುಧಾರಿಸಲು ಡಿಸ್ಕೋಮ್​ ಕಾರ್ಯಗಳನ್ನು ಸುವ್ಯವಸ್ಥಿತಗೊಳಿಸಬೇಕು ಎಂದು ನಿರ್ಮಲಾ ಸೀತಾರಾಮನ್​ ಹೇಳಿದರು.

Last Updated : May 16, 2020, 6:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.