ETV Bharat / business

ತೈಲ ಬೆಲೆ ಏರಿಕೆ ಬಗ್ಗೆ ಸರ್ಕಾರವೇ ನಿರ್ಧಾರ ಕೈಗೊಳ್ಳುತ್ತೆ : ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ - rbi mpc

ಈಗ ಸರ್ಕಾರವು ಎಲ್ಲಾ ಅಂಶಗಳನ್ನು ಪರಿಗಣಿಸಿ ಹೆಚ್ಚಿನ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಪೂರೈಕೆ ಕುರಿತ ನಿರ್ಬಂಧಗಳನ್ನು ಕಡಿಮೆ ಮಾಡಲು ಸರ್ಕಾರ ತೆಗೆದುಕೊಂಡ ಇತರ ಕ್ರಮಗಳನ್ನು ಸ್ವಾಗತಿಸಿರುವ ಗವರ್ನರ್‌, ಈಗ ಸರ್ಕಾರವು ಕೆಲವು ನೆರೆ ರಾಷ್ಟ್ರಗಳೊಂದಿಗೆ ದ್ವಿದಳ ಧಾನ್ಯಗಳ ಆಮದು ಮಾಡಿಕೊಳ್ಳುವ ಒಪ್ಪಂದಗಳಿಗೆ ಮುಂದಾಗಿದೆ..

Flagged our concerns on high petrol taxes; up to govt to take decision: RBI Gov
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಬಗ್ಗೆ ಸರ್ಕಾರವೇ ನಿರ್ಧಾರ ಕೈಗೊಳ್ಳುತ್ತೆ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌
author img

By

Published : Oct 8, 2021, 7:14 PM IST

Updated : Oct 8, 2021, 7:35 PM IST

ಮುಂಬೈ : ಪರೋಕ್ಷ ತೆರಿಗೆಗಳ ಅಧಿಕ ಹಣದುಬ್ಬರದ ಪ್ರಭಾವದಿಂದಾಗಿ ಎರಡನೇ ಬಾರಿಯೂ ತೈಲಗಳ ಮೇಲೆ ಪರಿಣಾಮ ಬೀರಿರುವುದು ಸಾಮಾನ್ಯ ನಾಗರಿಕರನ್ನು ತಲ್ಲಣಗೊಳಿಸುತ್ತಿದೆ. ಈ ವಿಚಾರದ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ತಿಳಿಸಿದ್ದಾರೆ.

ಇಂದು ಹಣಕಾಸು ನೀತಿ ಪ್ರಕಟಿಸಿ ಮಾತನಾಡಿದ ಅವರು, ದ್ವಿದಳ ಧಾನ್ಯಗಳು ಮತ್ತು ಖಾದ್ಯ ತೈಲಗಳು ಹಾಗೂ ಇತರ ಪೂರೈಕೆಗಳ ಸಮಸ್ಯೆಗಳ ಮೇಲೆ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದರು. ಕಳೆದ ವರ್ಷ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆ ತೀವ್ರ ಇಳಿಕೆಯಾದರೂ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಇಂಧನಗಳ ಮೇಲಿನ ಸುಂಕ ಮತ್ತು ಸೆಸ್‌ಗಳನ್ನು ದಾಖಲೆಯ ಮಟ್ಟಕ್ಕೆ ಏರಿಸಿತ್ತು.

ಬೆಲೆಗಳು ಕಡಿಮೆಯಾಗಿದ್ದರೂ ಸರ್ಕಾರ ಮಾತ್ರ ತೆರಿಗೆಗಳನ್ನು ಕಡಿತಗೊಳಿಸಲು ಮುಂದಾಗಿಲ್ಲ. ಇದರಿಂದಾಗಿ ಭಾರತೀಯರು ಒಂದು ಲೀಟರ್ ಪೆಟ್ರೋಲ್‌ಗೆ 100 ರೂ.ಗಿಂತ ಹೆಚ್ಚು ಪಾವತಿಸುತ್ತಿದ್ದಾರೆ. ಡೀಸೆಲ್ ಕೂಡ ಮೂರಂಕಿಯ ಸಮೀಪಕ್ಕೆ ಬಂದು ನಿಂತಿದೆ.

ಈ ವಿಷಯಗಳ ಮೇಲೆ (ಇಂಧನಗಳ ಮೇಲಿನ ಪರೋಕ್ಷ ತೆರಿಗೆಗಳು) ಹಾಗೂ ಸರ್ಕಾರದ ವ್ಯಾಪ್ತಿಯಲ್ಲಿನ ಕ್ರಮಗಳು ಹಾಗೂ ಇತರ ಹಲವಾರು ವಿಷಯಗಳ ಬಗ್ಗೆ ಆರ್‌ಬಿಐ ಮತ್ತು ಸರ್ಕಾರದ ನಡುವೆ ನಿರಂತರ ಚರ್ಚೆ ನಡೆಯುತ್ತವೆ. ನಾವು ಕಾಲಕಾಲಕ್ಕೆ ನಮ್ಮ ಎಲ್ಲಾ ಸಲಹೆಗಳನ್ನು ಮತ್ತು ಕಳವಳಗಳನ್ನು ವ್ಯಕ್ತಪಡಿಸುತ್ತೇವೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್ ತಿಳಿಸಿದ್ದಾರೆ.

ಈಗ ಸರ್ಕಾರವು ಎಲ್ಲಾ ಅಂಶಗಳನ್ನು ಪರಿಗಣಿಸಿ ಹೆಚ್ಚಿನ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಪೂರೈಕೆ ಕುರಿತ ನಿರ್ಬಂಧಗಳನ್ನು ಕಡಿಮೆ ಮಾಡಲು ಸರ್ಕಾರ ತೆಗೆದುಕೊಂಡ ಇತರ ಕ್ರಮಗಳನ್ನು ಸ್ವಾಗತಿಸಿರುವ ಗವರ್ನರ್‌, ಈಗ ಸರ್ಕಾರವು ಕೆಲವು ನೆರೆ ರಾಷ್ಟ್ರಗಳೊಂದಿಗೆ ದ್ವಿದಳ ಧಾನ್ಯಗಳ ಆಮದು ಮಾಡಿಕೊಳ್ಳುವ ಒಪ್ಪಂದಗಳಿಗೆ ಮುಂದಾಗಿದೆ ಎಂದು ಹೇಳಿದರು.

ಇಂಧನ ತೆರಿಗೆಯನ್ನು ಕಡಿತಗೊಳಿಸಲು ಕೇಂದ್ರ ಮತ್ತು ರಾಜ್ಯಗಳೆರಡರಿಂದಲೂ ಸಾಮೂಹಿಕ ಕ್ರಮದ ಅಗತ್ಯವಿದೆ ಎಂದು ಕೇಂದ್ರ ಸರ್ಕಾರವು ಈ ಹಿಂದೆಯೇ ಹೇಳಿತ್ತು.

ಇದನ್ನೂ ಓದಿ: IMPS ಹಣ ವರ್ಗಾವಣೆ ಮಿತಿಯನ್ನು ₹2 ಲಕ್ಷದಿಂದ ₹5 ಲಕ್ಷಕ್ಕೇರಿಸಿದ ಆರ್‌ಬಿಐ

Last Updated : Oct 8, 2021, 7:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.