ನವದೆಹಲಿ: ಮೋದಿ 2.0 ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಜಿಎಸ್ಟಿ ಕೌನ್ಸಿಲ್ ಸಭೆ ಸೇರುತ್ತಿದ್ದು, ತೆರಿಗೆ ಹೊರೆ ಇಳಿಸುವ ಬಗ್ಗೆ ಮಹತ್ವ ಚರ್ಚೆ ನಡೆಯಲಿದೆ ಎಂದು ಹೇಳಲಾಗ್ತಿದೆ.
ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಜಿಎಸ್ಟಿ ಕೌನ್ಸಿಲ್ ಸಭೆ ನಡೆಯಲಿದೆ. ಶೇ 28 ಸ್ಲಾಬ್ನಲ್ಲಿರುವ ಕೆಲ ವಸ್ತುಗಳನ್ನ ಶೇ 18, 12 ರ ಸ್ಲ್ಯಾಬ್ಗೆ ಸೇರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆಯಿದೆ.
ಆಟೋ ವಲಯದ ಮೇಲೆ ವಿಧಿಸಲಾಗಿರುವ ಶೇ 28ರಷ್ಟು ಜಿಎಸ್ಟಿಯನ್ನು ಶೇ. 18ಕ್ಕೆ ಇಳಿಸುವ ನಿರೀಕ್ಷೆಯಿದೆ. ಸಿಎಂಟ್ ಉದ್ಯಮ ಸಹ ತೆರಿಗೆ ಇಳಿಕೆ ಎದುರು ನೋಡುತ್ತಿದೆ. ಎಕ್ಸ್ಟ್ರಾ ನ್ಯೂಟ್ರಲ್ ಆಲ್ಕೋಹಾಲ್ ಮೇಲೆ ಶೇ 18ರಷ್ಟು ತೆರಿಗೆ ವಿಧಿಸುವ ಪ್ರಸ್ತಾವನೆಯ ಚರ್ಚೆ ಸಹ ನಡೆಯಲಿದೆ. 50 ಕೋಟಿಗಿಂತ ಹೆಚ್ಚು ವ್ಯವಹಾರ ಹೊಂದಿರುವ ಕಂಪನಿಗಳಿಗೆ ಇ - ಇನ್ವಾಯ್ಸ್ಗಳನ್ನು ಜನರೇಟ್ ಮಾಡುವ ಬಗ್ಗೆ ಸಹ ಪ್ರಸ್ತಾಪವಾಗಲಿದೆ.