ETV Bharat / business

ಹಲ್ವಾ ಹಂಚಿ ಬಜೆಟ್​ ಪ್ರತಿ ಮುದ್ರಣಕ್ಕೆ ಚಾಲನೆ ನೀಡಿದ ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್ ಅವರು ತಮ್ಮ ಮೂರನೇ ಬಜೆಟ್​ ಅನ್ನು ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಬಜೆಟ್‌ ದಾಖಲಾತಿಗಳ ಮುದ್ರಣದ ಆರಂಭವನ್ನು ಸಾಂಕೇತಿಕವಾಗಿ ಬಿಂಬಿಸುವ 'ಹಲ್ವಾ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೆರೆದಿದ್ದ ಹಣಕಾಸು ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಲ್ವಾ ಹಂಚಲಾಯಿತು.

Finance Ministry
Finance Ministry
author img

By

Published : Jan 23, 2021, 4:26 PM IST

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2021-22ನೇ ಸಾಲಿನ ಕೇಂದ್ರ ಬಜೆಟ್‌ನ ದಾಖಲೆಗಳನ್ನು ಮುದ್ರಿಸುವ ಪ್ರಕ್ರಿಯೆಯ 'ಹಲ್ವಾ ಕಾರ್ಯಕ್ರಮ'ಕ್ಕೆ ಚಾಲನೆ ನೀಡಿದರು.

ನಿರ್ಮಲಾ ಸೀತಾರಾಮನ್ ಅವರು ತಮ್ಮ ಮೂರನೇ ಬಜೆಟ್​ ಅನ್ನು ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಬಜೆಟ್‌ ದಾಖಲಾತಿಗಳ ಮುದ್ರಣದ ಆರಂಭವನ್ನು ಸಾಂಕೇತಿಕವಾಗಿ ಬಿಂಬಿಸುವ 'ಹಲ್ವಾ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೆರೆದಿದ್ದ ಹಣಕಾಸು ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಲ್ವಾ ಹಂಚಿದರು.

ಈ ವೇಳೆ, ಹಣಕಾಸು ಖಾತೆಯ ಸಹಾಯಕ ಸಚಿವ ಅನುರಾಗ್‌ ಠಾಕೂರ್‌, ಸಿಬಿಡಿಟಿ, ಸಿಬಿಐಸಿ ಸೇರಿದಂತೆ ಇಲಾಖೆಗಳ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು. ಪ್ರತಿ ವರ್ಷ ಸಾಂಪ್ರದಾಯಿಕವಾಗಿ ದೊಡ್ಡ ಕಡಾಯಿಯೊಂದರಲ್ಲಿ ಸಿಹಿ ಹಲ್ವಾ ತಯಾರಿಸಿ ಹಣಕಾಸು ಸಚಿವಾಲಯದ ಸಿಬ್ಬಂದಿಗೆ ವಿತರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ಡೇಟಾ ವರ್ಗಾವಣೆಗಾಗಿ ಫೇಸ್​ಬುಕ್ ಸಹವರ್ತಿಗಳಿಗೆ​ ತೆರಿಗೆ ವಿಧಿಸಿ : RSS ಮುಖಂಡ

ಸಿಹಿ ವಿತರಣೆಯ ಬಳಿಕ ಬಜೆಟ್‌ ಪ್ರಕ್ರಿಯೆಯಲ್ಲಿ ನೇರವಾಗಿ ತೊಡಗಿಸಿಕೊಳ್ಳುವ ಹಾಗೂ ಸಹಕರಿಸುವ ಸಿಬ್ಬಂದಿ ಲೋಕಸಭೆಯಲ್ಲಿ ಬಜೆಟ್‌ ಮಂಡನೆಯಾಗುವ ತನಕ ಹಣಕಾಸು ಸಚಿವಾಲಯದಲ್ಲಿಯೇ ಉಳಿದುಕೊಳ್ಳಬೇಕಾಗುತ್ತದೆ. ಕುಟುಂಬದ ಜತೆಗಿನ ಸಂಪರ್ಕವನ್ನು ಕಡಿದುಕೊಳ್ಳಬೇಕಾಗುತ್ತದೆ. ಬಜೆಟ್‌ನ ಗೌಪ್ಯತೆಯನ್ನು ರಕ್ಷಿಸಲು ಈ ನಿಯಮಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.