ETV Bharat / business

ದೇಶಿ ವಿಮಾನಗಳ ಶುಲ್ಕದ ಬ್ಯಾಂಡ್ ಅವಧಿ ವಿಸ್ತರಣೆ: ಆಸನಗಳ ಸಾಮರ್ಥ್ಯ ಹೆಚ್ಚಳ ಸಾಧ್ಯತೆ! - ದೇಶಿ ವಿಮಾನಗಳ ಆಸನ ಸಾಮರ್ಥ್ಯ ಏರಿಕೆ

2020ರ ಮೇ ತಿಂಗಳಲ್ಲಿ ಕೊರೊನಾ ಪ್ರೇರೇಪಿತ ಲಾಕ್​ಡೌನ್​ ಬಳಿಕ ದೇಶೀಯ ವಿಮಾನಯಾನ ಪುನರಾರಂಭವಾಯಿತು. ಆ ಸಮಯದಲ್ಲಿ ದೈನಿಕ ಸರಾಸರಿ ಸಂಚಾರ ಸುಮಾರು 30,000ವಾಗಿತ್ತು. ಈ ಮಿತಿಯನ್ನು ಹಂತ-ಹಂತವಾಗಿ ಶೇ 60ರಷ್ಟಕ್ಕೆ ಏರಿಸಲಾಯಿತು. ಹಬ್ಬದ ಋತುವಿನಲ್ಲಿ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದ್ದು, ಗರಿಷ್ಠ ಮಿತಿಯನ್ನು ಮುಂದಿನ ದಿನಗಳಲ್ಲಿ ಶೇ.70-75ಕ್ಕೆ ಪರಿಷ್ಕರಿಸಬಹುದು.

flights
ವಿಮಾನ
author img

By

Published : Nov 5, 2020, 10:46 PM IST

ನವದೆಹಲಿ: ವಿಮಾನಯಾನ ಸಂಸ್ಥೆಗಳು ಕಾರ್ಯನಿರ್ವಹಿಸುವ ಶುಲ್ಕದ ಬ್ಯಾಂಡ್​​ಗಳ ಅವಧಿಯನ್ನು 2021ರ ಫೆಬ್ರವರಿ 24ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಶುಲ್ಕ ಬ್ಯಾಂಡ್​​ಗಳನ್ನು 2020ರ ಮೇ 21ರಿಂದ ಜಾರಿಗೆ ತರಲಾಗಿತ್ತು. ನಿತ್ಯ ಪ್ರಯಾಣಿಕರ ಸಂಚಾರ ನವೆಂಬರ್ 1ರ ತನಕ 2.05 ಲಕ್ಷ ತಲುಪಿದೆ. 2020ರ ಮೇ ತಿಂಗಳಲ್ಲಿ ಕೊರೊನಾ ಪ್ರೇರೇಪಿತ ಲಾಕ್​ಡೌನ್​ ಬಳಿಕ ದೇಶೀಯ ವಿಮಾನಯಾನ ಪುನರಾರಂಭವಾಯಿತು. ಈ ಬಳಿಕ ವಿಮಾನಯಾನ ಸಂಸ್ಥೆಗಳು ತಮ್ಮ ಸಾಮಾನ್ಯ ಸಾಮರ್ಥ್ಯದ ಶೇ 33ರಷ್ಟರವರೆಗೆ ಹಾರಾಟ ನಡೆಸಲು ಅನುವು ಮಾಡಿಕೊಡಲಾಯಿತು.

ಆ ಸಮಯದಲ್ಲಿ ದೈನಿಕ ಸರಾಸರಿ ಸಂಚಾರ ಸುಮಾರು 30,000ವಾಗಿತ್ತು. ಈ ಮಿತಿಯನ್ನು 2020ರ ಜೂನ್ 26ರಿಂದ ಅನ್ವಯವಾಗುವಂತೆ ಶೇ 45ಕ್ಕೆ ಹೆಚ್ಚಿಸಲಾಯಿತು. ಸೆಪ್ಟೆಂಬರ್ 2ರಿಂದ ಶೇ 60ಕ್ಕೆ ಪರಿಷ್ಕರಿಸಲಾಯಿತು. ಪ್ರಸ್ತುತ ವಿಮಾನಯಾನ ಸಂಸ್ಥೆಗಳು ತಮ್ಮ ಸಾಮರ್ಥ್ಯದ ಶೇ 60ರಷ್ಟು ಕಾರ್ಯಾಚರಣೆ ಮಾಡಬಹುದಾಗಿದೆ.

ನಾಗರಿಕ ವಿಮಾನಯಾನ ಸಚಿವಾಲಯ ಪ್ರತಿದಿನ ಸಂಚಾರ ಗಮನಿಸುತ್ತಿದೆ. ಈ ಸಂಚಾರದ ಒತ್ತಡ ಪ್ರಯಾಣಿಕರ ಹೆಚ್ಚಳದ ಹಿನ್ನೆಲೆಯಲ್ಲಿ ಹಬ್ಬದ ಋತುವಿನಲ್ಲಿ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದ್ದು, ಗರಿಷ್ಠ ಮಿತಿಯನ್ನು ಮುಂದಿನ ದಿನಗಳಲ್ಲಿ ಶೇ.70-75ಕ್ಕೆ ಪರಿಷ್ಕರಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.