ETV Bharat / business

ದೇಶದ 8 ಪ್ರಮುಖ ಕ್ಷೇತ್ರಗಳ ಬೆಳವಣಿಗೆ ಸತತ 4ನೇ ತಿಂಗಳಲ್ಲಿಯೂ ಕುಸಿತ - ಸಿಮೆಂಟ್

ಜೂನ್‌ನಲ್ಲಿ ಮೂಲಸೌಕರ್ಯಗಳ ಉತ್ಪಾದನೆಯು ಶೇ 15ರಷ್ಟು ಕುಗ್ಗಿದೆ. 2019ರ ಜೂನ್​ನಲ್ಲಿ ಎಂಟು ಪ್ರಮುಖ ವಲಯಗಳು ಶೇ 1.2ರಷ್ಟು ವಿಸ್ತರಣೆ ಕಂಡಿದ್ದವು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿ ತಿಳಿಸಿದೆ.

industries
ಕೈಗಾರಿಕೆ
author img

By

Published : Jul 31, 2020, 8:20 PM IST

ನವದೆಹಲಿ: ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆಯ ಪ್ರಮಾಣದಲ್ಲಿ ಸತತ ನಾಲ್ಕು ತಿಂಗಳಿಂದ ಕುಸಿತ ದಾಖಲಾಗುತ್ತಿದೆ.

ಜೂನ್‌ನಲ್ಲಿ ಮೂಲಸೌಕರ್ಯಗಳ ಉತ್ಪಾದನೆಯು ಶೇ 15ರಷ್ಟು ಕುಗ್ಗಿದೆ. 2019ರ ಜೂನ್​ನಲ್ಲಿ ಎಂಟು ಪ್ರಮುಖ ವಲಯಗಳು ಶೇ 1.2ರಷ್ಟು ವಿಸ್ತರಣೆ ಕಂಡಿದ್ದವು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿ ತಿಳಿಸಿದೆ.

ರಸಗೊಬ್ಬರ ಹೊರತುಪಡಿಸಿ ಎಲ್ಲಾ ಏಳು ವಲಯಗಳು ಕುಸಿದಿವೆ. ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಕ್ಷೇತ್ರಗಳು ಮೇ ತಿಂಗಳಲ್ಲಿ ಸಹ ನಕಾರಾತ್ಮಕ ಬೆಳವಣಿಗೆ ದಾಖಲಿಸಿದ್ದವು.

ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾಗಾರ ಉತ್ಪನ್ನಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುಚ್ಛಕ್ತಿ ಉತ್ಪಾದನೆಯು ಕ್ರಮವಾಗಿ ಶೇ 15.5, 6, 12, 8.9, 33.8, 6.9, ಮತ್ತು 11ರಷ್ಟು ಕುಸಿದಿದೆ.

2020-21ರ ಏಪ್ರಿಲ್-ಜೂನ್ ಅವಧಿಯಲ್ಲಿ ಉತ್ಪಾದನೆಯು ಶೇ 24.6ರಷ್ಟು ಕುಸಿದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ಶೇ 3.4ರಷ್ಟು ಸಕಾರಾತ್ಮಕ ಬೆಳವಣಿಗೆ ಕಂಡಿತ್ತು. ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ (ಐಐಪಿ) ಈ ಎಂಟು ಕೈಗಾರಿಕೆಗಳ ಪಾಲು ಶೇ 40.27ರಷ್ಟಿದೆ. ಮೇ ತಿಂಗಳಲ್ಲಿ ಕ್ಷೇತ್ರಗಳ ಉತ್ಪಾದನೆಯು ಶೇ 22ರಷ್ಟು ಕುಗ್ಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.