ETV Bharat / business

ಚುನಾವಣೆ ಸೋಲಿನ ಬಿಸಿ:ರಾಹುಲ್ ಭಾವ ವಾದ್ರಾಗೆ ಕಾದಿದೆ ಕಂಟಕ! - undefined

ವಾದ್ರಾ ತನಿಖೆಗೆ ಸಹಕರಿಸುತ್ತಿಲ್ಲ.ಆದ್ದರಿಂದ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅವರ ನಿರೀಕ್ಷಣ ಜಾಮೀನು ಅರ್ಜಿ ರದ್ದುಗೊಳಿಸಬೇಕು ಎಂದು ಜಾರಿ ನಿರ್ದೇಶನಾಲಯ ಕೋರಿದೆ.

ರಾಬರ್ಟ್ ವಾದ್ರಾ
author img

By

Published : May 24, 2019, 8:43 PM IST

ನವದೆಹಲಿ: ಲಂಡನ್ ಮೂಲದ ಆಸ್ತಿ ಖರೀದಿ ಅಕ್ರಮಕ್ಕೆ ಸಂಬಂಧಿಸಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ರದ್ದುಗೊಳಿಸುವಂತೆ ಜಾರಿ ನಿರ್ದೇಶನಾಲಯ (ಇಡಿ) ಮನವಿ ಮಾಡಿದೆ.

ವಾದ್ರಾ ವಿರುದ್ಧದ ಅಕ್ರಮ ಹಣಕಾಸು ತಡೆ ಕಾಯ್ದೆಯಡಿ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಇಡಿ, ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದೆ.

ವಾದ್ರಾ ತನಿಖೆಗೆ ಸಹಕರಿಸುತ್ತಿಲ್ಲ.ಆದ್ದರಿಂದ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ.ಈ ಹಿನ್ನೆಲೆಯಲ್ಲಿ ಅವರ ನಿರೀಕ್ಷಣಾ ಜಾಮೀನು ಅರ್ಜಿ ರದ್ದುಗೊಳಿಸಬೇಕು ಎಂದು ಜಾರಿ ನಿರ್ದೇಶನಾಲಯ ಕೋರಿದೆ.

ವಾದ್ರಾ ಅವರು ಲಂಡನ್​ನ ಬೈರನ್​ ಸ್ಟನ್ ಸ್ಕ್ವೇರ್​ನಲ್ಲಿ 1.9 ದಶಲಕ್ಷ ಪೌಂಡ್​ ಮೊತ್ತದ ಆಸ್ತಿ ಖರೀದಿಯಲ್ಲಿ ಹಣಕಾಸಿನ ಅಕ್ರಮ ಎಸಗಿದ್ದಾರೆ ಎಂದು ಇಡಿ ಈ ಹಿಂದೆ ಪ್ರಕರಣ ದಾಖಲಿಸಿತ್ತು.

ವಾದ್ರಾ ಅವರ ಸ್ಕೈಲೈಟ್​ ಹಾಸ್ಪಿಟಾಲಿಟಿ ಸಂಸ್ಥೆಯ ಉದ್ಯೋಗಿ ಮನೋಜ್​ ಅರೋರ ಈ ಪ್ರಕರಣದ ರೂವಾರಿ ಆಗಿದ್ದಾರೆ. ಅರೋರಗೂ ಅಘೋಷಿತ ಸಾಗರೋತ್ತರ ಆಸ್ತಿ ಖರೀದಿ ಕುರಿತು ಮಾಹಿತಿ ಇದೆ. ಹಣ ಸಂಗ್ರಹದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದಕ್ಕಾಗಿ ಯುಎಇದಿಂದ ಹಣ ಕ್ರೋಢಿಕರಿಸಲಾಗಿದೆ. ಜೊತೆಗೆ ವಾದ್ರಾ ವಿರುದ್ಧದ ಹರಿಯಾಣದ ಗುರುಗ್ರಾಮದ ಭೂ ಅಕ್ರಮದಲ್ಲಿ ಇವರ ಪಾತ್ರವಿರುವುದಾಗಿಯೂ ಇಡಿ ಆರೋಪಿಸಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.