ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಜೂನ್‌ನಲ್ಲಿ ದೇಶದ ಎಂಟು ಪ್ರಮುಖ ಕೈಗಾರಿಕೆಗಳ ಬೆಳವಣಿಗೆ ದರ ಶೇ. 0.2ಕ್ಕೆ ಕುಸಿದಿದೆ ಎಂದು ಸರ್ಕಾರದ ಅಧಿಕೃತ ಅಂಕಿ-ಅಂಶಗಳು ತಿಳಿಸಿವೆ.
ಇವುಗಳಲ್ಲಿ ಮುಖ್ಯವಾಗಿ ತೈಲ ಸಂಬಂಧಿತ ಕೈಗಾರಿಕೆಗಳು ಇರುವುದು ಆರ್ಥಿಕ ಸಂಕುಚಿತೆ ಪ್ರತಿಬಿಂಬಿಸುತ್ತದೆ. ಈ ಎಂಟು ಕ್ಷೇತ್ರಗಳ ಬೆಳವಣಿಗೆಯ ದರವು ಮೇ ತಿಂಗಳಲ್ಲಿ ಶೇ. 4.3ರಷ್ಟಿದ್ದು, ಕಳೆದ ವರ್ಷ ಶೇ. 5.1ರಷ್ಟಿರಲಿದೆ ಎಂದು ಪರಿಷ್ಕರಿಸಲಾಗಿತ್ತು.
ಎಂಟು ಪ್ರಮುಖ ವಲಯದ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಕೈಗಾರಿಕೆಗಳ ಬೆಳವಣಿಗೆ ದರ ಕಳೆದ ವರ್ಷದ ಜೂನ್ ತಿಂಗಳಲ್ಲಿ ಶೇ. 7.8 ರಷ್ಟು ಇತ್ತು.
ಕಚ್ಚಾ ತೈಲ ಉತ್ಪಾದನಾ ವಲಯವು ಕಳೆದ ಒಂದು ವರ್ಷದಲ್ಲಿ ಋಣಾತ್ಮಕ ಬೆಳವಣಿಗೆ ದಾಖಲಿಸಿದೆ. ಜೂನ್‌ನಲ್ಲಿ ಕಚ್ಚಾ ತೈಲ ಉತ್ಪಾದನೆ ಶೇ. 6.8ಕ್ಕೆ ತಲುಪಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ತಿಳಿಸಲಾಗಿದೆ.
ರಿಫೈನರಿ ಉತ್ಪನ್ನಗಳ ಉತ್ಪಾದನೆಯು ಸತತ ಎರಡನೇ ತಿಂಗಳಲ್ಲಿಯೂ ಇಳಿಕೆಯ ಬೆಳವಣಿಗೆ ದಾಖಲಿಸಿದೆ. 2019ರ ಜೂನ್‌ನಲ್ಲಿ ಶೇ. 9.3ರಷ್ಟಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ. 12.1ರಷ್ಟಿತ್ತು.