ETV Bharat / business

ಕೊರೊನಾ 2.0ಗೆ ಮೊಳಗುತ್ತಿದೆ ಎಚ್ಚರಿಕೆ ಗಂಟೆ: 'ನಮೋ' ಆರ್ಥಿಕತೆಗೆ ಅಪಾಯ.. ಮೈಮರೆತರೆ ಏನಾಗುತ್ತೆ?

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು 2021ರಲ್ಲಿ ಭಾರತವು ಎರಡು - ಅಂಕಿಯ ಬೆಳವಣಿಗೆಯನ್ನು ದಾಖಲಿಸಲಿದೆ ಎಂದು ಅಂದಾಜಿಸಿದವು. ಎರಡನೇ ಅಲೆಯ ಸೋಂಕಿನ ದಂಗೆ ಸ್ಫೋಟಗೊಳ್ಳುತ್ತಿದ್ದಂತೆ ದೇಶದ ಆರ್ಥಿಕತೆ ಮತ್ತೊಮ್ಮೆ ಗೊಂದಲದಲ್ಲಿ ಸಿಲುಕಿದೆ. ಕೋವಿಡ್ ಕಾರಣದಿಂದಾಗಿ ಈ ವರ್ಷದ ಆರಂಭದಲ್ಲಿ ಜಿಡಿಪಿ ಬೆಳವಣಿಗೆ ಶೇ 13.5ರಿಂದ ಶೇ 12.6ಕ್ಕೆ ಕುಸಿಯುತ್ತದೆ ಎಂದು ಪ್ರಮುಖ ರೇಟಿಂಗ್ ಏಜೆನ್ಸಿ (ನೋಮುರಾ) ಮುನ್ಸೂಚನೆ ನೀಡಿದೆ.

Economy
Economy
author img

By

Published : Apr 27, 2021, 10:05 PM IST

Updated : Apr 27, 2021, 10:16 PM IST

ನವದೆಹಲಿ: ಕೋವಿಡ್ ಉಲ್ಬಣವು ವಿಶ್ವ ಆರ್ಥಿಕತೆಯನ್ನು ತೀವ್ರವಾಗಿ ಹಾನಿಗೊಳಿಸಿದೆ. ಲಾಕ್​ಡೌನ್ ಕಾರಣ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 2020ರ ಜೂನ್‌ನಲ್ಲಿ ಶೇ 24ರಷ್ಟು ಕುಸಿದಿದೆ. ಆದಾಯ ಮತ್ತು ಉಳಿತಾಯ ಕುಸಿಯಿತು. ನಿರುದ್ಯೋಗ ಹೆಚ್ಚಾಗಿದೆ. ಸರ್ಕಾರಗಳ ಆರ್ಥಿಕ ನೆರವು ಮತ್ತು ಲಾಕ್‌ಡೌನ್‌ನ ಸಡಿಲತೆಯೊಂದಿಗೆ ಪರಿಸ್ಥಿತಿ ಕ್ರಮೇಣ ಕುಸಿಯಲಾರಂಭಿಸಿತು. 2020ರ ಡಿಸೆಂಬರ್ ವೇಳೆಗೆ ಆರ್ಥಿಕತೆಯು ಚೇತರಿಸಿಕೊಳ್ಳುವ ಲಕ್ಷಣಗಳು ಕಾಣಿಸಿಕೊಂಡವು. ಈಗ ಮತ್ತೆ ಸಂದಿಗ್ಧತೆ ಕಾರ್ಮೋಡಗಳು ಮೂಡಿವೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು 2021ರಲ್ಲಿ ಭಾರತವು ಎರಡು - ಅಂಕಿಯ ಬೆಳವಣಿಗೆಯನ್ನು ದಾಖಲಿಸಲಿದೆ ಎಂದು ಅಂದಾಜಿಸಿದವು. ಎರಡನೇ ಅಲೆಯ ಸೋಂಕಿನ ದಂಗೆ ಸ್ಫೋಟಗೊಳ್ಳುತ್ತಿದ್ದಂತೆ ದೇಶದ ಆರ್ಥಿಕತೆ ಮತ್ತೊಮ್ಮೆ ಗೊಂದಲದಲ್ಲಿ ಸಿಲುಕಿದೆ. ಕೋವಿಡ್ ಕಾರಣದಿಂದಾಗಿ ಈ ವರ್ಷದ ಆರಂಭದಲ್ಲಿ ಜಿಡಿಪಿ ಬೆಳವಣಿಗೆ ಶೇ 13.5ರಿಂದ ಶೇ 12.6ಕ್ಕೆ ಕುಸಿಯುತ್ತದೆ ಎಂದು ಪ್ರಮುಖ ರೇಟಿಂಗ್ ಏಜೆನ್ಸಿ (ನೋಮುರಾ) ಮುನ್ಸೂಚನೆ ನೀಡಿದೆ. ಜೆಪಿ ಮೋರ್ಗಾನ್ ಮತ್ತು ಯುಬಿಎಸ್ ಸಹ ತಮ್ಮ ನಿರೀಕ್ಷೆಗಳನ್ನು ಕ್ರಮವಾಗಿ 13 ಪ್ರತಿಶತದಿಂದ 11 ಮತ್ತು 10ಕ್ಕೆ ಇಳಿಸಿವೆ. ಭಾರತದ ಆರ್ಥಿಕ ಚೇತರಿಕೆಗೆ ಎರಡನೇ ಅಲೆ ತಡೆಗೊಡೆಯಾಗಲಿದೆ ಎಂದು ಮೂಡಿ ಎಚ್ಚರಿಸಿದೆ.

ಬಡವರ ಶಾಪ

ಪ್ರತಿದಿನ ಲಕ್ಷಾಂತರ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದು, ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ಲಾಕ್‌ಡೌನ್‌, ರಾತ್ರಿ ಕರ್ಫ್ಯೂ ಮತ್ತು ಇತರ ನಿರ್ಬಂಧಗಳನ್ನು ಜಾರಿಗೊಳಿಸುತ್ತಿವೆ. ದೇಶದ ಜನಸಂಖ್ಯೆಗೆ ಅಗತ್ಯವಾದ ಆಸ್ಪತ್ರೆಗಳು ಮತ್ತು ವೈದ್ಯಕೀಯ ಉಪಕರಣಗಳು ಸಂಪೂರ್ಣವಾಗಿ ಲಭ್ಯವಿಲ್ಲದ ಕಾರಣ ತೀವ್ರ ಭೀತಿಯಿಂದ ಜನರು ತಮ್ಮ ನಿತ್ಯ ಚಟುವಟಿಕೆಗಳನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ.

ಕೋವಿಡ್ ಲಸಿಕೆ ನಮ್ಮ ಮುಂದೆ ಇದ್ದರೂ ಇದುವರೆಗೆ ದೇಶದ ಒಟ್ಟಾರೆ ಜನಸಂಖ್ಯೆಯ ಹತ್ತು ಪ್ರತಿಶತರಿಗೂ ಕಡಿಮೆ ಜನರಿಗೆ ನೀಡಲಾಗಿದೆ. ಗೂಗಲ್ ಮೊಬಿಲಿಟಿ ಮಾಹಿತಿಯ ಪ್ರಕಾರ, ಈ ವರ್ಷದ ಫೆಬ್ರವರಿ 24ಕ್ಕೆ ಹೋಲಿಸಿದರೆ ಏಪ್ರಿಲ್ 7ರಂದು ಭಾರತದಾದ್ಯಂತ ಚಿಲ್ಲರೆ ಮತ್ತು ಮನರಂಜನಾ ಚಟುವಟಿಕೆ ಶೇ 25ರಷ್ಟು ಕುಸಿದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ನಡೆಸಿದ 'ಗ್ರಾಹಕ ವಿಶ್ವಾಸ ಸಮೀಕ್ಷೆ' ಕೂಡ ಇದನ್ನು ಸಾಬೀತುಪಡಿಸಿದೆ. ಅನಗತ್ಯ ವಸ್ತುಗಳ ಮೇಲಿನ ವೆಚ್ಚ ಕಡಿಮೆಯಾಗುತ್ತದೆ ಎಂದು ಬಹಿರಂಗಪಡಿಸಲಾಗಿದೆ. ಕೊರೊನಾ ಉತ್ಕರ್ಷದ ನಂತರ ಹಣದುಬ್ಬರ ದರ ಗಮನಾರ್ಹವಾಗಿ ಹೆಚ್ಚಾಗಿದೆ.

ಒಂದು ಕಡೆ ಉದ್ಯೋಗ ನಷ್ಟ ಮತ್ತು ಆದಾಯ ಕುಸಿಯುವುದು ಮತ್ತೊಂದೆಡೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡ ಜನರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಕೃಷಿ ಕ್ಷೇತ್ರವು ಭಾರತೀಯ ಆರ್ಥಿಕತೆಯಲ್ಲಿ ಸಕಾರಾತ್ಮಕ ಬೆಳವಣಿಗೆಯ ದರವನ್ನು ದಾಖಲಿಸುತ್ತಿದೆ. 2020-21ರಲ್ಲಿ ಆಹಾರ ಧಾನ್ಯ ಉತ್ಪಾದನೆ 30.33 ಕೋಟಿ ಟನ್‌ಗಳನ್ನು ಮುಟ್ಟಿದೆ. ಸತತ ಐದನೇ ವರ್ಷವೂ ಉತ್ಪಾದನಾ ಮಟ್ಟವನ್ನು ದಾಖಲೆಯ ಮಟ್ಟದಲ್ಲಿ ಮೀರಿಸಲಾಗಿದೆ. ಆದದರೂ ರಾಜ್ಯದ ಎಲ್ಲಾ ಭಾಗಗಳಿಗೆ ಅಗತ್ಯ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ವಿತರಿಸುವ ಕೆಲಸ ಮಾಡಬೇಕಾಗಿದೆ.

ಆಹಾರ ಪೂರೈಕೆ ಮತ್ತು ಹಣ ಹಂಚಿಕೆ ಎಲ್ಲರಿಗೂ ‘ಒಂದು ದೇಶ ಒನ್ ರೇಷನ್ ಕಾರ್ಡ್’ ಮೂಲಕ ಪ್ರವೇಶಿಸುವಂತೆ ಮಾಡಬೇಕು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 2021ಕ್ಕೆ 384 ಕೋಟಿ ಕೆಲಸದ ದಿನಗಳನ್ನು ನೋಂದಣಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 45ರಷ್ಟು ಹೆಚ್ಚಾಗಿದೆ. ನುರಿತ, ಕೌಶಲ್ಯರಹಿತ ವಲಸಿಗರಿಗೆ ಕೆಲಸದ ಮಟ್ಟ ವಿಸ್ತರಿಸುವ ಅವಶ್ಯಕತೆಯಿದೆ. ಉದ್ಯೋಗ ಖಾತರಿ ಕಾರ್ಯಕ್ರಮದ ಮೂಲಕ ಕೃಷಿ ಮಾರುಕಟ್ಟೆಗಳನ್ನು ನಿರ್ಮಿಸುವುದು ಮತ್ತು ಗ್ರಾಮೀಣ ವಸತಿಗಳಂತಹ ಮೂಲಸೌಕರ್ಯಗಳನ್ನು ಮಾಡುವುದು ದೀರ್ಘಾವಧಿಯ ವಲಸೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸರ್ಕಾರಗಳು ಶೀಘ್ರವಾಗಿ ಸ್ಪಂದಿಸಿದರೆ ಮತ್ತು ಕೊರೊನಾ ಲಸಿಕೆ ಎಲ್ಲರಿಗೂ ಲಭ್ಯವಾಗುವಂತೆ ನೋಡಿಕೊಳ್ಳಲು ಕ್ರಮ ಕೈಗೊಂಡರೆ, ಜನರು ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ಮುಂದುವರಿಸಲು ಮತ್ತು ಆರ್ಥಿಕತೆಯನ್ನು ಸರಿದಾರಿಗೆ ತರುವ ಅವಕಾಶ ಕಂಡುಕೊಳ್ಳುತ್ತಾರೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ. ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರವು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದೆ. ನಷ್ಟವನ್ನು ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಕಡಿಮೆ ಮಾಡುತ್ತದೆ. ರಾಜ್ಯಗಳಿಗೆ ದೊಡ್ಡ ಪ್ರಮಾಣದ ನೆರವು ಮತ್ತು ಆರ್ಥಿಕ ವಿನಾಯಿತಿ ನೀಡಿದರೆ ಆರ್ಥಿಕ ನಷ್ಟವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಹುದು.

ಸ್ವಯಂ ನಿಯಂತ್ರಣವೇ ನಿರ್ಣಾಯಕ

ಪ್ರವಾಸೋದ್ಯಮ, ಆತಿಥ್ಯ, ವಾಯುಯಾನ, ಮನರಂಜನೆ, ಆಟೋಮೊಬೈಲ್, ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರಗಳಿಗೆ ತೀವ್ರ ಹಾನಿಯಾಗಿದೆ. ಈ ವಲಯಗಳು ಜಿಡಿಪಿಯ ಗಮನಾರ್ಹ ಪಾಲು ಹೊಂದಿವೆ. ಇವುಗಳು ತಮ್ಮ ಹಿಂದಿನ ವೈಭವ ಮರಳಿ ಪಡೆಯಲು ಬಹಳ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಅಸಂಘಟಿತ ವಲಯದಲ್ಲಿ ಉದ್ಯೋಗಿಗಳ ಆದಾಯವು ಗಮನಾರ್ಹವಾಗಿ ಕುಗ್ಗುತ್ತಿರುವುದರಿಂದ ಆರ್ಥಿಕತೆಗೆ ತೀವ್ರ ಹೊಡೆತ ಬೀಳುವ ಸಾಧ್ಯತೆಯಿದೆ. ಕೊರೊನಾದಿಂದ ತೀವ್ರ ನಷ್ಟ ಅನುಭವಿಸುತ್ತಿರುವ ಪ್ರವಾಸೋದ್ಯಮ, ಹೋಟೆಲ್‌ಗಳು, ಬೀದಿ ಬದಿ ಮಾರಾಟಗಾರರು, ವಲಸೆ ಕಾರ್ಮಿಕರು, ಆಟೋ ಮತ್ತು ಟ್ಯಾಕ್ಸಿ ಕಾರ್ಮಿಕರಿಗೆ ನೆರವು ನೀಡುವ ತುರ್ತು ಅವಶ್ಯಕತೆಯಿದೆ. ಏಕೆಂದರೆ ಈ ವಲಯಗಳು ಇಂದಿಗೂ ಪುನರುಜ್ಜೀವನವನ್ನೇ ಕಂಡಿಲ್ಲ. ಪ್ರಸ್ತುತ, ಬ್ಯಾಂಕ್ ಸಾಲಗಳ ಮೇಲಿನ ಕಡಿಮೆ ಬಡ್ಡಿದರಗಳು ಸಾಲಗಾರರಿಗೆ ಕೆಲವು ಸಮಸ್ಯೆಗಳನ್ನು ಉಂಟುಮಾಡುತ್ತಿವೆ. ಕ್ರೆಡಿಟ್ ದರಗಳು ಕುಸಿಯುವುದು ಸಾಲದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಆರ್ಥಿಕತೆಯಲ್ಲಿ ಬೇಡಿಕೆಯ ಕೊರತೆಯಿಲ್ಲ ಎಂದು ನೋಡಲು ಸಾಧ್ಯವಿದೆ. ಕೊರೊನಾದ ಹರಡುವಿಕೆಯನ್ನು ತಡೆಯಲು ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಅನುಮತಿಯನ್ನು ನಿಷೇಧಿಸಬೇಕಾಗಿದೆ. ಕೋವಿಡ್ ನಿಯಮಗಳನ್ನು ಜನರಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಬೇಕು. ಭೌತಿಕ ದೂರವನ್ನು ಅನುಸರಿಸಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಜನರು ಸ್ವಯಂ ನಿಯಂತ್ರಣ ನಿರ್ವಹಿಸಿದರೆ ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಬಹುದು. ಮತ್ತೆ ಲಾಕ್‌ಡೌನ್ ವಿಧಿಸಬೇಕಾದರೆ - ಹಾನಿ ಪ್ರಮಾಣ ದೊಡ್ಡದಾಗಿರುತ್ತದೆ. ತಮ್ಮ ದೈನಂದಿನ ಚಟುವಟಿಕೆಗಳನ್ನು ಸರಿಯಾದ ಕಾಳಜಿಯಿಂದ ಮುಂದುವರಿಸಿದರೆ ಲಾಕ್‌ಡೌನ್ ವಿಧಿಸುವ ಅಗತ್ಯವಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು.

Last Updated : Apr 27, 2021, 10:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.