ETV Bharat / business

ಮೂಲ ಸೌಕರ್ಯ ವೆಚ್ಚ ಹೆಚ್ಚಿಸಿ ಖಾಸಗೀಕರಣ ವಿಸ್ತರಿಸುವಂತೆ ಪ್ರಧಾನಿ ಮೋದಿಗೆ ವಿತ್ತ ತಜ್ಞರು ಸಲಹೆ - ಸಾಮಾಜಿಕ ಆರ್ಥಿಕ ಪರಿವರ್ತನೆ

2021-22 ರ ಬಜೆಟ್​ ತಯಾರಿ ಮತ್ತು ಕೋವಿಡ್ ಬಳಿಕದ ಆರ್ಥಿಕ ಪುನಶ್ಚೇತನಕ್ಕೆ ತೆಗೆದುಕೊಳ್ಳಬೇಕಾದ ನಡೆಗಳ ಕುರಿತು ಪ್ರಧಾನಿ ಆರ್ಥಿಕ ಚಿಂತಕರು ಹಾಗೂ ಉದ್ಯಮಿಗಳ ಜತೆ ಸಭೆ ನಡೆಸಿದರು. ಖಾಸಗೀಕರಣ ಮುಂದೂಡಿಕೆ, ಅಂತಾರಾಷ್ಟ್ರೀಯ ಮಧ್ಯಸ್ಥಿಕಯೆ ಸವಾಲುಗಳ ನಿವಾರಣೆ ಮತ್ತು ಮೂಲಸೌಕರ್ಯ ವೆಚ್ಚ ಹೆಚ್ಚಳ ಬಗ್ಗೆಯೂ ಹಣಕಾಸು ಚಿಂತಕರೊಂದಿಗೆ ಚರ್ಚಿಸಿದರು.

PM Modi
ಮೋದಿ
author img

By

Published : Jan 9, 2021, 6:28 PM IST

ನವದೆಹಲಿ: ಕೋವಿಡ್​ ಸಾಂಕ್ರಾಮಿಕದ ಬಳಿಕ ತಮ್ಮ ಸರ್ಕಾರ ಕೈಗೊಂಡ ಹಣಕಾಸಿನ ಮತ್ತು ಸುಧಾರಣಾ ಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ವಿತ್ತ ತಜ್ಞರ ಮುಂದಿಟ್ಟರು.

2021-22 ರ ಬಜೆಟ್​ ತಯಾರಿ ಮತ್ತು ಕೋವಿಡ್ ಬಳಿಕದ ಆರ್ಥಿಕ ಪುನಶ್ಚೇತನಕ್ಕೆ ತೆಗೆದುಕೊಳ್ಳಬೇಕಾದ ನಡೆಗಳ ಕುರಿತು ಪ್ರಧಾನಿ ಆರ್ಥಿಕ ಚಿಂತಕರು ಹಾಗೂ ಉದ್ಯಮಿಗಳ ಜತೆ ಸಭೆ ನಡೆಸಿದರು. ಖಾಸಗೀಕರಣ ಮುಂದೂಡಿಕೆ, ಅಂತಾರಾಷ್ಟ್ರೀಯ ಮಧ್ಯಸ್ಥಿಕಯೆ ಸವಾಲುಗಳ ನಿವಾರಣೆ ಮತ್ತು ಮೂಲಸೌಕರ್ಯ ವೆಚ್ಚ ಹೆಚ್ಚಳ ಬಗ್ಗೆಯೂ ಹಣಕಾಸು ಚಿಂತಕರೊಂದಿಗೆ ಚರ್ಚಿಸಿದರು.

ಸಾಂಕ್ರಾಮಿಕ ಪೀಡಿತ ಆರ್ಥಿಕತೆ ಪುನರುಜ್ಜೀವನಗೊಳಿಸುವ ತುರ್ತು ಕಾರಣದಿಂದಾಗಿ 2021-22ರ ಮುಂಬರುವ ಬಜೆಟ್​​ನಲ್ಲಿ ಹಣಕಾಸಿನ ಕೊರತೆಯ ಬಗ್ಗೆ ಸರ್ಕಾರವು ಮೃದುವಾದ ದೃಷ್ಟಿಕೋನ ತಳಿಯಬಹುದು ಎಂದು ಪ್ರಧಾನಿ ಜತೆ ವರ್ಚ್ಯುಯಲ್ ಸಭೆಯಲ್ಲಿ ಭಾಗವಹಿಸಿದ ಕೆಲವು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಭಾರತದಲ್ಲಿ ಇಂಧನದ ಬೇಡಿಕೆ 11 ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ಜಿಗಿತ

ಸಭೆಯ ನಂತರ ನೀತಿ ಆಯೋಗ ಹೊರಡಿಸಿದ ಟಿಪ್ಪಣಿಯ ಪ್ರಕಾರ, ಹೆಚ್ಚಿನ ಆವರ್ತನೆಯ ಸೂಚಕಗಳು ಬಲವಾದ ಆರ್ಥಿಕ ಚೇತರಿಕೆಯ ಲಕ್ಷಣಗಳು ತೋರಿಸುತ್ತಿವೆ ಎಂಬುದನ್ನು ಎಲ್ಲಾ ಪರಿಚಾರಕರು ಒಪ್ಪಿಕೊಂಡರು. ಅದು ನಿರೀಕ್ಷೆಗಿಂತ ಮುಂಚೆಯೇ ಸಂಭವಿಸಿದೆ.

ಮುಂದಿನ ವರ್ಷ ದೃಢವಾದ ಬೆಳವಣಿಗೆ ಕಾಣಲಿದೆ ಎಂದು ಪರಿಚಾರಕರು ಒಮ್ಮತದಿಂದ ಒಪ್ಪಿಕೊಂಡರು. ಭಾರತದ ಸಾಮಾಜಿಕ ಆರ್ಥಿಕ ಪರಿವರ್ತನೆಗೆ ಚಾಲನೆ ನೀಡಲು ಈ ಬೆಳವಣಿಗೆ ದರವನ್ನು ಕಾಯ್ದುಕೊಳ್ಳಲು ಕೆಲವು ಕ್ರಮಗಳನ್ನು ಸೂಚಿಸಿದರು. ಖಾಸಗೀಕರಣ ವಿಸ್ತರಣೆ ಮತ್ತು ಮೂಲಸೌಕರ್ಯ ವೆಚ್ಚ ಹೆಚ್ಚಿಸಲು ಪ್ರಧಾನಿ ಮೋದಿ ಅವರಿಗೆ ಅರ್ಥಶಾಸ್ತ್ರಜ್ಞರು ಒತ್ತಾಯಿಸಿದರು ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.