ETV Bharat / business

ಆರ್ಥಿಕ ಸಮೀಕ್ಷೆ: ಆರ್ಥಿಕ ವೃದ್ಧಿ ಶೇ 6-6.5 ನಿರೀಕ್ಷೆ, 'ಸಂಪತ್ತು ಸೃಷ್ಟಿಕರ್ತರನ್ನು ಗೌರವದಿಂದ ಕಾಣಿ' - ಕೇಂದ್ರ ಬಜೆಟ್​

2020-21ರ ಬೆಳವಣಿಗೆಯು 2019-20ರಲ್ಲಿ 5 ಪ್ರತಿಶತದಷ್ಟು ಇರಿಸಿಕೊಳ್ಳಲಾಗಿತ್ತು. ಜಿಡಿಪಿ ಬೆಳವಣಿಗೆಯಲ್ಲಿನ ಕುಸಿತವು ನಿಧಾನಗತಿಯ ಆರ್ಥಿಕತೆಗೆ ಕಾರಣವೆಂದು ಅರ್ಥೈಸಿಕೊಳ್ಳಬಹುದು. ಆರ್ಥಿಕ ವಲಯದ ಮೇಲೆ ಕುಸಿತ ಪರಿಣಾಮ ಬೀರಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

Economic Survey
ಆರ್ಥಿಕ ಸಮೀಕ್ಷೆ
author img

By

Published : Jan 31, 2020, 2:13 PM IST

ನವದೆಹಲಿ: ಏಪ್ರಿಲ್ 1ರಿಂದ ಆರಂಭವಾಗಲಿರುವ ಮುಂದಿನ ಆರ್ಥಿಕ ವರ್ಷದಲ್ಲಿ ಶೇ 6 ರಿಂದ 6.5ರಷ್ಟು ಬೆಳವಣಿಗೆ ದರ ನಿರೀಕ್ಷಿಸಲಾಗುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದೆ.

2020-21ರ ಬೆಳವಣಿಗೆಯು 2019-20ರಲ್ಲಿ 5 ಪ್ರತಿಶತದಷ್ಟು ಇರಿಸಿಕೊಳ್ಳಲಾಗಿತ್ತು. ಜಿಡಿಪಿ ಬೆಳವಣಿಗೆಯಲ್ಲಿನ ಕುಸಿತವು ನಿಧಾನಗತಿಯ ಆರ್ಥಿಕತೆಗೆ ಕಾರಣವೆಂದು ಅರ್ಥೈಸಿಕೊಳ್ಳಬಹುದು. ಆರ್ಥಿಕ ವಲಯದ ಮೇಲೆ ಕುಸಿತದ ಪರಿಣಾಮ ಬೀರಿದೆ ಎಂದು ಹೇಳಿದೆ.

2020-21ರಲ್ಲಿ ಆರ್ಥಿಕತೆಯು ಶಕ್ತಿಯುತವಾಗಿ ಹಿಂದಿನ ಲಯಕ್ಕೆ ಮರಳಬೇಕಾದರೆ ಕೇಂದ್ರ ಸರ್ಕಾರವು ತ್ವರಿತವಾದ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಬೇಕು ಎಂದು ಸಲಹೆ ನೀಡಿದೆ.

ಸಂಪತ್ತನ್ನು ಹಂಚುವ ಮೊದಲು ಅದನ್ನು ಸೃಷ್ಟಿಸಬೇಕು. ಸಂಪತ್ತಿನ ಸೃಷ್ಟಿಕರ್ತರನ್ನು ಗೌರವದಿಂದ ನೋಡಬೇಕು ಎಂದು ಬಜೆಟ್ ಪೂರ್ವ ಸಮೀಕ್ಷೆಯಲ್ಲಿ ಹೇಳಿದೆ.

ಈರುಳ್ಳಿಯಂತಹ ಸರಕುಗಳ ಬೆಲೆಯನ್ನು ಸ್ಥಿರಗೊಳಿಸಲು ಸರ್ಕಾರದ ಮಧ್ಯಸ್ಥಿಕೆಗಳು ಪರಿಣಾಮಕಾರಿಯಾಗಿಲ್ಲ ಎಂದು ಸಮೀಕ್ಷೆಯಲ್ಲಿ ಉಲ್ಲೇಖವಿದೆ.

ಬೆಳವಣಿಗೆಯನ್ನು ಹೆಚ್ಚಿಸಲು ಉದ್ಯೋಗಗಳನ್ನು ಸೃಷ್ಟಿಸಲು ‘ಭಾರತದಲ್ಲಿ ತಯಾರಾಗಿ ಜಗತ್ತಿ'ನಾದ್ಯಂತ ವಿತರಣೆಯಾಗುವ ಉತ್ಪಾದನೆಯ ಹೊಸ ಆಲೋಚನೆಗಳತ್ತ ಗಮನಹರಿಸಿ ಎಂದು ಕೇಂದ್ರಕ್ಕೆ ಸಲಹೆ ನೀಡಿದೆ.

ವ್ಯಾಪಾರವನ್ನು ಸುಲಭಗೊಳಿಸಲು ಹಾಗೂ ರಫ್ತು ಪ್ರಮಾಣ ಉತ್ತೇಜಿಸಲು ಬಂದರುಗಳಲ್ಲಿನ ರೆಡ್​ ಟೇಪ್ ಅನ್ನು ತೆಗೆದುಹಾಕಬೇಕು. ವ್ಯವಹಾರದ ಆರಂಭವನ್ನು ಸರಾಗಗೊಳಿಸುವ ಕ್ರಮಗಳು, ಆಸ್ತಿ ನೋಂದಣಿ, ತೆರಿಗೆ ಪಾವತಿಯಂತಹ ಒಪ್ಪಂದಗಳನ್ನು ಜಾರಿಗೆ ತರಬೇಕು ಎಂದು ಸಲಹೆ ನೀಡಿದೆ.

ಸಾರ್ವಜನಿಕ ವಲಯದ ಬ್ಯಾಂಕ್​ಗಳಲ್ಲಿನ ಆಡಳಿತ ಸುಧಾರಿಸಬೇಕು ಮತ್ತು ವಿಶ್ವಾಸವನ್ನು ಬೆಳೆಸಲು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸುವ ಅವಶ್ಯಕತೆಯಿದೆ ಎಂದು ಹತ್ತು ಅಂಶಗಳ ಸಲಹೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.