ನವದೆಹಲಿ: ಏಪ್ರಿಲ್ 1ರಿಂದ ಆರಂಭವಾಗಲಿರುವ ಮುಂದಿನ ಆರ್ಥಿಕ ವರ್ಷದಲ್ಲಿ ಮೈನಸ್ ಶೇ 7.7ರಷ್ಟು ಬೆಳವಣಿಗೆ ದರ ನಿರೀಕ್ಷಿಸಲಾಗುತ್ತಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.
ಆರ್ಥಿಕ ಸಮೀಕ್ಷೆ 2020-21 ಅನ್ನು ಹಣಕಾಸು ಸಚಿವಾಲಯದ ಮುಖ್ಯ ಹಣಕಾಸು ಸಲಹೆಗಾರ ಕೃಷ್ಣಮೂರ್ತಿ ವೆಂಕಟ ಸುಬ್ರಮಣಿಯನ್ ನೇತೃತ್ವದಲ್ಲಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಅರ್ಥವ್ಯವಸ್ಥೆಯ ವಿವಿಧ ವಲಯಗಳ ಬೆಳವಣಿಗೆಗಳು ಹಾಗು ಅಭಿವೃದ್ಧಿಗೆ ವೇಗ ನೀಡಲು ಬೇಕಿರುವ ಅಗತ್ಯ ಸುಧಾರಣಾ ಕ್ರಮಗಳನ್ನು ತಿಳಿಸಲಾಗಿದೆ.
ಕಳೆದ ವರ್ಷದ ಕೊರೊನಾ ಸುನಾಮಿಗೆ ವಿಶ್ವ ಆರ್ಥಿಕತೆಯ ಜೊತೆ ಭಾರತದ ಅರ್ಥವ್ಯವಸ್ಥೆಯೂ ಕುಸಿದಿದೆ. ಆದರೆ 2020-21ರ ಅವಧಿಯಲ್ಲಿ ಆರ್ಥಿಕತೆ ಪುಟಿದೇಳುವ ವಿಶ್ವಾಸವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
ದೇಶದ ಜಿಡಿಪಿ (ಆರ್ಥಿಕ ವೃದ್ಧಿ ದರ) ಏಪ್ರಿಲ್-ಜೂನ್ ಅವಧಿಯಲ್ಲಿ ಶೇ 23.9 ರಷ್ಟು ಕುಸಿದಿದ್ದು, ಎರಡನೇ ತ್ರೈಮಾಸಿಕದಲ್ಲಿ ಶೇ 7.5ರಷ್ಟು ಕುಸಿತ ದಾಖಲಿಸಿತ್ತು.
ಈ ನಡುವೆ ಪ್ರಸಕ್ತ ಸಾಲಿನ ಆರ್ಥಿಕಾಭಿವೃದ್ಧಿ ಶೇ 7.7ರಷ್ಟು ಇಳಿಕೆ ಕಾಣುವ ಬಗ್ಗೆ ಆರ್ಥಿಕ ಸಮೀಕ್ಷೆ ಭವಿಷ್ಯ ನುಡಿದಿದೆ. ಬಳಿಕ ಚೇತರಿಸಿಕೊಂಡು ವಿ ಶೇಪ್‌ಗೆ ಮರಳಲಿದೆ ಎಂದು ಹೇಳಲಾಗುತ್ತಿದೆ.
2020-22 ರ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇ 11ರಷ್ಟು ಇರುವ ಬಗ್ಗೆ ಅಂದಾಜಿಸಲಾಗಿದೆ.
ಇದನ್ನೂ ಓದಿ: ಆರ್ಥಿಕ ಸಮೀಕ್ಷೆ ಎಂದರೇನು? ಬಜೆಟ್ಗೂ ಮುನ್ನ ಮಂಡನೆ ಏಕೆ?
2021ರ ಹಣಕಾಸು ವರ್ಷದಲ್ಲಿ ನೈಜ ಬೆಳವಣಿಗೆಯ ದರವನ್ನು ಮೈನಸ್ 7.7ರಷ್ಟು (ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ) ಎಂದು ತೆಗೆದುಕೊಳ್ಳಲಾಗಿದೆ. 2022ರ ವಿತ್ತೀಯ ವರ್ಷದ ನೈಜ ಬೆಳವಣಿಗೆಯ ದರ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಎಂಎಂಎಫ್) ಅಂದಾಜಿನ ಆಧಾರದ ಮೇಲೆ ಶೇ 11.5ರಷ್ಟು ಎಂದು ಊಹಿಸಲಾಗಿದೆ.
ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ವಿ.ಸುಬ್ರಮಣಿಯನ್ ಅವರು ಸಿದ್ಧಪಡಿಸಿದ್ದು, 2020ರಲ್ಲಿ ಸರ್ಕಾರವು ಜಿಡಿಪಿಯ ಶೇ 73.8ರಷ್ಟು ಸಾಲ ಹೊಂದಿದೆ.
2021ರ ಆರ್ಥಿಕ ವರ್ಷಲ್ಲಿ ಪ್ರೈಮರಿ (ಪ್ರಾಥಮಿಕ) ಕೊರತೆಯು ಜಿಡಿಪಿಯ ಶೇ 6.8ರಷ್ಟು ಇರಲಿದೆ ಎಂದು ಊಹಿಸಲಾಗಿದೆ. 2022ರ ಹಣಕಾಸು ವರ್ಷದಲ್ಲಿ ಇದು ಜಿಡಿಪಿಯ ಶೇ 2.5ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.
ಪ್ರಾಥಮಿಕ ಕೊರತೆಯ ಇಳಿಕೆಯಿಂದಾಗಿ 2024ರ ಹಣಕಾಸು ವರ್ಷದ ವೇಳೆಗೆ ಜಿಡಿಪಿಯ ಶೇ 1.5ಕ್ಕೆ ತಲುಪುತ್ತದೆ. ನಂತರ ಅದು ಶೇ 1.5ರಷ್ಟು ಇರಲಿದೆ ಎಂಬ ನಿರೀಕ್ಷೆಯಿದೆ. ನಾಮಮಾತ್ರದ ಬಡ್ಡಿದರ ಶೇ 6ರಷ್ಟು ಎಂದು ಅಂದಾಜಿಸಲಾಗಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.
ಹಣದುಬ್ಬರ ದರದ ಪ್ರಮಾಣ ಶೇ 5ರಂತೆ ತೆಗೆದುಕೊಳ್ಳಲಾಗಿದ್ದು, ಶೇ 4ರಿಂದ 6 ರವರೆಗಿನ ಮಧ್ಯದ ಬಿಂದುವಿನಲ್ಲಿ ಇರಲಿದೆ.