ಲಂಡನ್/ ನವದೆಹಲಿ: ಇಂದು ಜಗತ್ತು ಎದುರಿಸುತ್ತಿರುವ ಐದು ಅತಿದೊಡ್ಡ ದೀರ್ಘಕಾಲದ ಅಪಾಯಗಳಲ್ಲಿ ವಾತಾವರಣದಲ್ಲಿನ ಪರಿಸರವೇ ಪ್ರಮುಖವಾಗಿದ್ದು, 2020ರಲ್ಲಿ ಅಪಾಯದ ಮಟ್ಟ ಹೆಚ್ಚಾಗುವ ನಿರೀಕ್ಷೆ ಇದೆ. ಇದರ ಜೊತೆಗೆ ಆರ್ಥಿಕ ಮತ್ತು ರಾಜಕೀಯ ಧ್ರುವೀಕರಣವೂ ಸೇರಲಿದೆ ಎಂದು ನೂತನ ಸಮೀಕ್ಷೆ ತಿಳಿಸಿದೆ.
ಹೆಚ್ಚಿದ ದೇಶಿಯ ಹಾಗೂ ಅಂತರಾಷ್ಟ್ರೀಯ ಮತ್ತು ಆರ್ಥಿಕ ಮಂದಗತಿಯ ಮುನ್ಸೂಚನೆಗಳ ನಡುವೆ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ವಾರ್ಷಿಕ ಜಾಗತಿಕ ಅಪಾಯಗಳ ವರದಿ ಬಿಡುಗಡೆ ಮಾಡಿದೆ. ಭೌಗೋಳಿಕ, ರಾಜಕೀಯ ಪ್ರಕ್ಷುಬ್ಧತೆಯು ವಾಣಿಜ್ಯ ಚಟುವಟಿಕೆಯಲ್ಲಿ ಒಂದು 'ಬಗೆಹರಿಯದ' ಏಕಪಕ್ಷೀಯ ಮಹಾನ್ ಶಕ್ತಿಯಾಗಿದೆ. ಇದರ ಅಪಾಯಗಳ ಕಂದಬಾಹುಗಳು ಚಾಚಿಕೊಳ್ಳುವ ಮುನ್ನ ಎಲ್ಲ ರಾಷ್ಟ್ರಗಳ ನಾಯಕರು ತುರ್ತಾಗಿ ಗಮನಹರಿಸಬೇಕು ಎಂದು ಎಚ್ಚರಿಸಿದೆ.
ಕಳೆದ 10 ವರ್ಷಗಳಲ್ಲಿ ಮೊದಲ ಬಾರಿಗೆ ಪರಿಸರದಲ್ಲಿ ವಿಪರೀತ ಹವಾಮಾನದ ವೈಪರೀತ್ಯ, ಮಾನವ ನಿರ್ಮಿತ ಪರಿಸರದ ವಿಪತ್ತುಗಳು, ಪ್ರಮುಖ ಜೀವವೈವಿಧ್ಯತೆಯ ನಶಿಸುವಿಕೆ, ನೈಸರ್ಗಿಕ ವಿಪತ್ತುಗಳು ಮತ್ತು ಹವಾಮಾನ ಬದಲಾವಣೆ ತಗ್ಗಿಸುವಲ್ಲಿ ವಿಫಲ ಹಾಗೂ ಪರಿಸರದಲ್ಲಿನ ರೂಪಾಂತರಗಳು ಜಾಗತಿಕ ಆಪತ್ತುಗಳು ಎಂದು ಎಚ್ಚರಿಸಿದೆ.
ದಶಕದ ಹಿಂದಷ್ಟೇ ಜಾಗತಿಕ ಅಪಾಯಗಳು, ಜಾಗತಿಕ ಆರ್ಥಿಕತೆ ಮತ್ತು ಹಣಕಾಸು ವ್ಯವಸ್ಥೆಗಳನ್ನು ಪ್ರಭಾವಿಸಿದ್ದವು. ಅಲ್ಪಾವಧಿಯ 2020ರಲ್ಲಿ ಆರ್ಥಿಕ ಪ್ರತಿಸ್ಪರ್ಧೆ, ದೇಶಿಯ ರಾಜಕೀಯ ಧ್ರುವೀಕರಣ, ವಾತಾವರಣದಲ್ಲಿ ತಾಪಮಾನ ಏರಿಕೆ, ನೈಸರ್ಗಿಕ ಸಂಪನ್ಮೂಲಗಳ ನಾಶ ಮತ್ತು ಸೈಬರ್ ದಾಳಿಗಳು ಸೇರಿಕೊಂಡಿವೆ.
ಲಂಡನ್‌ನಲ್ಲಿ ಸಮೀಕ್ಷೆ ಬಿಡುಗಡೆ ಮಾಡಿದ ಜಿನಿವಾ ಮೂಲದ ಡಬ್ಲ್ಯುಇಎಫ್, ವಿಶ್ವದ ಯೋಗಕ್ಷೇಮಕ್ಕೆ ತೀವ್ರವಾದ ಅಪಾಯಗಳನ್ನು ತಡೆಯಲು ಜಾಗತಿಕ ನಾಯಕರ, ಉದ್ಯಮಿಗಳ, ಚಿಂತಕರ ಚಾವಡಿಗರ ಹಾಗೂ ನೀತಿ ನಿರೂಪಕರ ಸಹಯೋಗ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಿದೆ ಎಂದು ಹೇಳಿದೆ.
ವಾರ್ಷಿಕ ಜಾಗತಿಕ ಅಪಾಯಗಳ ವರದಿಯು ಡಬ್ಲ್ಯುಇಎಫ್‌ನ ವಾರ್ಷಿಕ ಸಭೆಯ ದಾವೊಸ್ನಲ್ಲಿ ಈ ಬಗ್ಗೆ ಚರ್ಚೆಗೆ ಬರಲಿವೆ. ದಾವೊಸ್‌ನ 50ನೇ ವಾರ್ಷಿಕ ಸಭೆಯು ಜನವರಿ 20ರಿಂದ 24ರ ನಡುವೆ ನಡೆಯಲಿದೆ. ರಾಜ್ಯ ಮತ್ತು ಕೇಂದ್ರೀಯ ಸರ್ಕಾರಗಳ ಮುಖ್ಯಸ್ಥರು, ಸಿಇಒಗಳು, ನಾಗರಿಕ ಸಮಾಜದ ಸದಸ್ಯರು, ಕಲಾವಿದರು ಮತ್ತು ಶಿಕ್ಷಣ ತಜ್ಞರು ಸೇರಿದಂತೆ 3,000ಕ್ಕೂ ಹೆಚ್ಚು ವಿಶ್ವ ನಾಯಕರು ಭಾಗವಹಿಸಲಿದ್ದಾರೆ.
ಹವಾಮಾನ, ಪರಿಸರ, ಸಾರ್ವಜನಿಕ ಆರೋಗ್ಯ ಮತ್ತು ತಂತ್ರಜ್ಞಾನ ವ್ಯವಸ್ಥೆಗಳಿಗೆ ತೀವ್ರ ಬೆದರಿಕೆಗಳನ್ನು ತಡೆಯಲು ವಿಶ್ವ ನಾಯಕರು, ವ್ಯವಹಾರಗಳು ಮತ್ತು ನೀತಿ ನಿರೂಪಕರ ನಡುವೆ ಸಹಯೋಗವು ಹಿಂದೆಂದಿಗಿಂತಲೂ ಪ್ರಸ್ತುತ ಹೆಚ್ಚು ಅಗತ್ಯವಿದೆ ಎಂದು ಹೇಳಿದೆ.