ETV Bharat / business

ಸಾಲಗಾರರಿಗೆ ದೀಪಾವಳಿ ಗಿಫ್ಟ್​: 2 ಕೋಟಿ ರೂ.ವರೆಗಿನ ಸಾಲಕ್ಕೆ ಚಕ್ರಬಡ್ಡಿ ಮನ್ನಾ - ಚಕ್ರಬಡ್ಡಿ ಮನ್ನಾ

ಗೃಹ ಸಾಲ, ಶೈಕ್ಷಣಿಕ ಸಾಲ, ಕ್ರೆಡಿಟ್ ಕಾರ್ಡ್ ಬಾಕಿ ಹಣ, ವಾಹನ ಸಾಲ, ಎಂಎಸ್‌ಎಂಇ ಸಾಲ, ಗ್ರಾಹಕರ ದಿನಬಳಕೆಯ ವಸ್ತುಗಳಿಗಾಗಿ ಸಾಲ ಪಡೆದವರು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ..

Diwali gift to borrowers
ಸಾಲಗಾರರಿಗೆ ದೀಪಾವಳಿ ಗಿಫ್ಟ್
author img

By

Published : Oct 24, 2020, 4:57 PM IST

ನವದೆಹಲಿ: ಹಬ್ಬದ ಸೀಸನ್​ ಆರಂಭಗೊಂಡಿದ್ದು, ದೀಪಾವಳಿ ಪ್ರಯುಕ್ತ ಸಾಲಗಾರರಿಗೆ ಕೇಂದ್ರ ಸರ್ಕಾರ ಭರ್ಜರಿ ಉಡುಗೊರೆ ನೀಡಿದೆ. ಸಾಲಗಾರರಿಗೆ ಪರಿಹಾರವಾಗಿ 2 ಕೋಟಿ ರೂ.ಗಳವರೆಗಿನ ಸಾಲದ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡುವುದಾಗಿ ರಾತ್ರೋರಾತ್ರಿ ಘೋಷಿಸಿದೆ.

ಸುಪ್ರೀಂಕೋರ್ಟ್‌ನ ನಿರ್ದೇಶನದ ಹಿನ್ನೆಲೆ ಬಡ್ಡಿ ಮನ್ನಾ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಹಣಕಾಸು ಇಲಾಖೆಯು ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಯೋಜನೆಗೆ 6,500 ಕೋಟಿ ರೂ. ಮೀಸಲಿಡಲಾಗಿದೆ. ಸಾಲ ನೀಡಿದ ಸಂಸ್ಥೆಗಳಿಗೆ ಮನ್ನಾ ಆದ ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.

ಈ ಬಾರಿ ಜನಸಾಮಾನ್ಯರ ದೀಪಾವಳಿ ಸರ್ಕಾರದ ಕೈಯಲ್ಲಿದೆ. ಕೋವಿಡ್​ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ (ಇಂಡಿಯನ್​ ರಿಸರ್ವ್​ ಬ್ಯಾಂಕ್​)ನ ಮೊರಟೋರಿಯಂ ಅಥವಾ ಸಾಲಮರುಪಾವತಿ ಮುಂದೂಡಿಕೆ ನೀತಿಗನುಗುಣವಾಗಿ 2 ಕೋಟಿ ರೂ.ಗಳವರೆಗಿನ ಸಾಲದ ಮೇಲಿನ ಚಕ್ರಬಡ್ಡಿಯನ್ನು ಆದಷ್ಟು ಬೇಗ ಮನ್ನಾ ಮಾಡಲು ಯೋಜನೆ ರೂಪಿಸಲು ಅಕ್ಟೋಬರ್ 14 ರಂದು ಸುಪ್ರೀಂಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು.

ಮಾರ್ಗಸೂಚಿಗಳ ಪ್ರಕಾರ, 2020ರ ಮಾರ್ಚ್ 1 ರಿಂದ ಆಗಸ್ಟ್ 31ರ ಅವಧಿಯಲ್ಲಿ ನಿರ್ದಿಷ್ಟ ಸಾಲದ ಖಾತೆಗಳಲ್ಲಿ ಸಾಲಗಾರರು ಈ ಯೋಜನೆಯ ಸದುಪಯೋಗ ಪಡೆಯಬಹುದು. ಅಂದರೆ 2020ರ ಫೆಬ್ರವರಿ 29ರವರೆಗೆ 2 ಕೋಟಿ ರೂ.ವರೆಗೆ ಸಾಲ ಪಡೆದವರ ಆರು ತಿಂಗಳ ಚಕ್ರಬಡ್ಡಿ ಮನ್ನಾ ಆಗಲಿದೆ.

ಗೃಹ ಸಾಲ, ಶೈಕ್ಷಣಿಕ ಸಾಲ, ಕ್ರೆಡಿಟ್ ಕಾರ್ಡ್ ಬಾಕಿ ಹಣ, ವಾಹನ ಸಾಲ, ಎಂಎಸ್‌ಎಂಇ ಸಾಲ, ಗ್ರಾಹಕರ ದಿನಬಳಕೆಯ ವಸ್ತುಗಳಿಗಾಗಿ ಸಾಲ ಪಡೆದವರು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಚಕ್ರಬಡ್ಡಿ ಅಂದರೆ ಬಡ್ಡಿಯ ಮೇಲಿನ ಬಡ್ಡಿ ಮಾತ್ರ ಮನ್ನಾ ಆಗಲಿದ್ದು, ಸಾಲಗಾರರು ಸರಳ ಬಡ್ಡಿಯನ್ನು ಕಟ್ಟಲೇಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.