ETV Bharat / business

₹ 70 ಸಾವಿರ ಕೋಟಿ ತೆರಿಗೆ ಖೋತಾ... ಅಧಿಕಾರಿಗಳ ಮೇಲೆ ಸಂಗ್ರಹ ಒತ್ತಡ - ಹಣಕಾಸು ಸಚಿವಾಲಯ

ಆದಾಯ ತೆರಿಗೆ ಇಲಾಖೆ 2018-19ನೇ ಸಾಲಿನ ಆರ್ಥಿಕ ವರ್ಷದಲ್ಲಿ ₹ 12 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹಿಸುವ ಗುರಿ ಇರಿಸಿಕೊಂಡಿತು. ಸದ್ಯ ₹ 10.39 ಲಕ್ಷ ಕೋಟಿಯಷ್ಟು ಮಾತ್ರವೇ ಖಜಾನೆ ಸೇರಿದ್ದು, ಅಂದಾಜು ₹ 70, ಸಾವಿರ ಕೋಟಿಯಷ್ಟು ಕಡಿತವಾಗುವ ನಿರೀಕ್ಷೆ ಇದೆ. ಹೀಗಾಗಿ, ಅಧಿಕಾರಿಗಳ ಮೇಲೆ ಒತ್ತಡ ತಂದು ಆ ಮೊತ್ತವನ್ನು ಇಳಿಸುವತ್ತ ಹಣಕಾಸು ಸಚಿವಾಲಯ ನಿರ್ಧರಿಸಿದೆ.

ತೆರಿಗೆ
author img

By

Published : Mar 29, 2019, 5:39 PM IST

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಉದ್ದೇಶಿತ ನೇರ ತೆರಿಗೆ ಸಂಗ್ರಹ ಮೊತ್ತ ಕ್ಷೀಣಿಸುತ್ತಿದ್ದು, ಅಧಿಕಾರಿಗಳ ಮೇಲೆ ಒತ್ತಡ ಹೇರಿ ಇಳಿಕೆಯ ಪ್ರಮಾಣ ತಗ್ಗಿಸಲು ಕೊನೆಯ ಸುತ್ತಿನ ಹೋರಾಟಕ್ಕೆ ಹಣಕಾಸು ಸಚಿವಾಲಯ ಇಳಿದಿದೆ.

ಐಟಿಯ ಹಿರಿಯ ಅಧಿಕಾರಿಗಳು, ಮಾರ್ಚ್​ ಅಂತ್ಯದ ಒಳಗೆ ಎಲ್ಲ ಬ್ಯಾಂಕ್​ಗಳು ತಮ್ಮ ಪಾಲಿನ ತೆರಿಗೆ ಪಾವತಿಸುವಂತೆ ಆದೇಶಿಸಿದೆ. ಕಳೆದ ವರ್ಷದಲ್ಲಿ ಉದ್ದೇಶಿತ ₹ 12 ಲಕ್ಷ ಕೋಟಿ ತೆರಿಗೆಯಲ್ಲಿ ₹ 11.5 ಲಕ್ಷ ಕೋಟಿ ಖಜಾನೆಗೆ ಬಂದು ಸೇರಿತ್ತು. ಈ ವರ್ಷ ಕೊರತೆಯ ಮೊತ್ತ ತುಸು ಹೆಚ್ಚಾಗುತ್ತಿದೆ.

ಸಾಮಾನ್ಯ ಸಂದರ್ಭದಲ್ಲಿ ಬ್ಯಾಂಕ್​ಗಳಿಂದ ಟ್ಯಾಕ್ಸ್ ಡಿಡೆಕ್ಟೆಡ್ ಅಟ್ ಸೋರ್ಸ್(ಟಿಡಿಎಸ್) ಅಥವಾ ಮೂಲದಲ್ಲಿಯೇ ತೆರಿಗೆ ಕಡಿತ ಮುಂದಿನ ವರ್ಷದ ಮೊದಲ ತಿಂಗಳಲ್ಲಿ ಪಾವತಿ ಮಾಡಲಾಗುತ್ತದೆ. 2018-19ರ ಸಾಲಿಗೆ ಸೇರಿಸಿದರೆ ಸರ್ಕಾರದ ಸಾಮಾನ್ಯ ಗುರಿ ಈಡೇರಿಕೆಗೆ ಸೇರ್ಪಡೆ ಆಗುವುದಿಲ್ಲ ಎಂದು ಬ್ಯಾಂಕ್​ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಬ್ಯಾಂಕ್​ಗಳ ಪೂರ್ವ ತೆರಿಗೆ, ಪಿಎಸ್​ಯು, ಸಾಂಸ್ಥಿಕ ತೆರಿಗೆ, ಐಷರಾಮಿ ವ್ಯಕ್ತಿಗಳು ಪಾವತಿಸುವ ತೆರಿಗೆ ಸೇರಿದಂತೆ ಇತರ ನೇರ ಮೂಲದಡಿ ಟ್ಯಾಕ್ಸ್​ ಸಂಗ್ರಹಿಸಿದರೂ ₹ 10.39 ಲಕ್ಷ ಕೋಟಿಯಷ್ಟು ಪಡೆಯಲು ಸಾಧ್ಯವಾಗಿದೆ. ಮಾಸಿಕ ಒಂದು ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಸಹ ಈಡೇರುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Intro:Body:

₹ 70 ಸಾವಿರ ಕೋಟಿ ತೆರಿಗೆ ಖೋತಾ... ಅಧಿಕಾರಿಗಳ ಮೇಲೆ ಸಂಗ್ರಹದ ಒತ್ತಡ

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಉದ್ದೇಶಿತ ನೇರ ತೆರಿಗೆ ಸಂಗ್ರಹ ಮೊತ್ತ ಕ್ಷೀಣಿಸುತ್ತಿದ್ದು, ಅಧಿಕಾರಿಗಳ ಮೇಲೆ ಒತ್ತಡ ಹೇರಿ ಇಳಿಕೆಯ ಪ್ರಮಾಣ ತಗ್ಗಿಸಲು ಕೊನೆಯ ಸುತ್ತಿನ ಹೋರಾಟಕ್ಕೆ ಹಣಕಾಸು ಸಚಿವಾಲಯ ಇಳಿದಿದೆ.

ಆದಾಯ ತೆರಿಗೆ ಇಲಾಖೆಯು 2018-19ನೇ ಸಾಲಿನ ಆರ್ಥಿಕ ವರ್ಷದಲ್ಲಿ ₹ 12 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹಿಸುವ ಗುರಿ ಇರಿಸಿಕೊಂಡಿತು. ಸದ್ಯ ₹ 10.39 ಲಕ್ಷ ಕೋಟಿಯಷ್ಟು ಮಾತ್ರವೇ ಖಜಾನೆ ಸೇರಿದ್ದು, ಅಂದಾಜು ₹ 70, ಸಾವಿರ ಕೋಟಿಯಷ್ಟು ಕಡಿತವಾಗುವ ನಿರೀಕ್ಷೆ ಇದೆ. ಹೀಗಾಗಿ, ಅಧಿಕಾರಿಗಳ ಮೇಲೆ ಒತ್ತಡ ತಂದು ಆ ಮೊತ್ತವನ್ನು ಇಳಿಸುವತ್ತ ಹಣಕಾಸು ಸಚಿವಾಲಯ ನಿರ್ಧರಿಸಿದೆ.

ಐಟಿಯ ಹಿರಿಯ ಅಧಿಕಾರಿಗಳು, ಮಾರ್ಚ್​ ಅಂತ್ಯದ ಒಳಗೆ ಎಲ್ಲ ಬ್ಯಾಂಕ್​ಗಳು ತಮ್ಮ ಪಾಲಿನ ತೆರಿಗೆ ಪಾವತಿಸುವಂತೆ ಆದೇಶಿಸಿದೆ. ಕಳೆದ ವರ್ಷದಲ್ಲಿ ಉದ್ದೇಶಿತ ₹ 12 ಲಕ್ಷ ಕೋಟಿ ತೆರಿಗೆಯಲ್ಲಿ ₹ 11.5 ಲಕ್ಷ ಕೋಟಿ ಖಜಾನೆಗೆ ಬಂದು ಸೇರಿತ್ತು. ಈ ವರ್ಷ ಕೊರತೆಯ ಮೊತ್ತ ತುಸು ಹೆಚ್ಚಾಗುತ್ತಿದೆ.

ಸಾಮಾನ್ಯ ಸಂದರ್ಭದಲ್ಲಿ ಬ್ಯಾಂಕ್​ಗಳಿಂದ ಟ್ಯಾಕ್ಸ್ ಡಿಡಕ್ಟೆಡ್ ಅಟ್ ಸೋರ್ಸ್(ಟಿಡಿಎಸ್) ಅಥವಾ ಮೂಲದಲ್ಲಿಯೇ ತೆರಿಗೆ ಕಡಿತವು ಮುಂದಿನ ವರ್ಷದ ಮೊದಲ ತಿಂಗಳಲ್ಲಿ ಪಾವತಿ ಮಾಡಲಾಗುತ್ತದೆ. 2018-19ರ ಸಾಲಿಗೆ ಸೇರಿಸಿದರೆ ಸರ್ಕಾರದ ಸಾಮಾನ್ಯ ಗುರಿ ಈಡೇರಿಕೆಗೆ ಸೇರ್ಪಡೆ ಆಗುವುದಿಲ್ಲ ಎಂದು ಬ್ಯಾಂಕ್​ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಬ್ಯಾಂಕ್​ಗಳ ಪೂರ್ವ ತೆರಿಗೆ, ಪಿಎಸ್​ಯು, ಸಾಂಸ್ಥಿಕ ತೆರಿಗೆ, ಐಷರಾಮಿ ವ್ಯಕ್ತಿಗಳಿಂದ ತೆರಿಗೆ ಸಂಗ್ರಹಿಸಿದರೂ ₹ 10.39 ಲಕ್ಷ ಕೋಟಿಯಷ್ಟು ಪಡೆಯಲು ಸಾಧ್ಯವಾಗಿದೆ. ಮಾಸಿಕ ಒಂದು ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಸಹ ಈಡೇರುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.