ETV Bharat / business

ಸಾಂಕ್ರಾಮಿಕ ರೋಗ​, ಭ್ರಷ್ಟಾಚಾರ, ದುಂದುವೆಚ್ಚ ಕಡಿವಾಣಕ್ಕೆ ಡಿಜಿಟಲ್ ಇಂಡಿಯಾ ಬ್ರಹ್ಮಾಸ್ತ್ರ!

'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ' ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಈಡೇರಿಸಲು ಕೇಂದ್ರವು ಈಶಾನ್ಯ ರಾಜ್ಯಗಳಲ್ಲಿ ಇ-ಆಫೀಸ್ ಸ್ಥಾಪಿಸಲು ಸಜ್ಜಾಗಿದೆ. ಇ-ಆಫೀಸ್ ವ್ಯವಸ್ಥೆಯು ಕೆಲಸದ ಗುಣಮಟ್ಟ ಉತ್ತೇಜಿಸುತ್ತದೆ ಮತ್ತು ವಹಿವಾಟು ಸಮಯ ತಗ್ಗಿಸುತ್ತದೆ. ನಾಗರಿಕರು ತಮ್ಮ ಕೆಲಸ-ಕಾರ್ಯಗಳಿಗೆ ಸರ್ಕಾರಿ ಕಚೇರಿಗಳಲ್ಲಿ ಸರತಿ ನಿಲ್ಲುವುದು ಮತ್ತು ಲಂಚವನ್ನು ದೂರವಿಡುವಂತೆ ಮಾಡಬಹುದು. ಇದನ್ನು ಸಾಕಾರಗೊಳಿಸಲು ಪ್ರತಿಯೊಬ್ಬ ನಾಗರಿಕ ಇಂಟರ್​ನೆಟ್​ಗೆ ಪ್ರವೇಶ ಪಡೆಯಬೇಕು.

author img

By

Published : Jul 13, 2020, 5:03 PM IST

DIGITAL INDIA
ಡಿಜಿಟಲ್ ಇಂಡಿಯಾ

ನವದೆಹಲಿ: ಸಾಂಕ್ರಾಮಿಕ ರೋಗವು ಹಲವು ದೇಶಗಳ ಆರ್ಥಿಕತೆಯನ್ನು ಹಾನಿಗೊಳಿಸಿದೆ. ಕೊರೊನಾ ವಿರುದ್ಧದ ಯುದ್ಧದಲ್ಲಿ ಸಾಮಾಜಿಕ ಅಂತರ ಮತ್ತು ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಈಗಿನ ಬಿಕ್ಕಟ್ಟು ನವ ಶಿಕ್ಷಣ ಮತ್ತು ಆಡಳಿತದ ಹೊಸ ಮಾದರಿಗಳಿಗೆ ದಾರಿ ಮಾಡಿಕೊಟ್ಟಿದೆ.

ಈ ಹಿಂದೆ ತೆಲಂಗಾಣ ಸರ್ಕಾರವು ರಾಜ್ಯದಾದ್ಯಂತದ ಎಲ್ಲಾ ಜಿಲ್ಲಾ ಮತ್ತು ಸಾರ್ವಜನಿಕ ಕಚೇರಿಗಳ ಮೇಲ್ವಿಚಾರಣೆಯ ಆಜ್ಞೆ ಮತ್ತು ನಿಯಂತ್ರಣ ವ್ಯವಸ್ಥೆಗೆ ಅನುಮತಿ ನೀಡಿತ್ತು. ಪ್ರಸ್ತುತ ಕೋವಿಡ್​-19 ಸೋಂಕು ಸರ್ಕಾರಗಳನ್ನು ಇ-ಆಡಳಿತ ಅಳವಡಿಸಿಕೊಳ್ಳುವ ಅನಿವಾರ್ಯತೆಗೆ ತಂದು ನಿಲ್ಲಿಸಿದೆ. ಅಲ್ಲದೆ ಡಿಜಿಟಲ್ ಶೈಲಿಯ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯನ್ನು ಸುಗಮಗೊಳಿಸುತ್ತದೆ.

ಬಹುತೇಕ ರಾಜ್ಯಗಳು ವಲಯ ಆಡಳಿತ ಮತ್ತು ಕಾರ್ಯದರ್ಶಿಗಳ ಮಟ್ಟದಲ್ಲಿ ಆನ್‌ಲೈನ್ ಆಡಳಿತವನ್ನು ಜಾರಿಗೆ ತರಲು ಸಜ್ಜಾಗುತ್ತಿವೆ. ಎಲ್ಲಾ ಸಾರ್ವಜನಿಕ ಮತ್ತು ಅನುದಾನಿತ ಶಾಲೆಗಳಲ್ಲಿ ಇ-ಕಲಿಕೆ ಪರಿಚಯಿಸಿದ ಮೊದಲ ರಾಜ್ಯ ಕೇರಳ. 40 ಲಕ್ಷ ವಿದ್ಯಾರ್ಥಿಗಳಿಗೆ ಡಿಜಿಟಲ್ ಬೋಧನೆ ತಲುಪಿಸಿದೆ. 2014ರಲ್ಲಿ ಕೇರಳವು ಇ-ಆಫೀಸ್ ಎಂಬ ವೆಬ್ ಅಪ್ಲಿಕೇಷನ್ ಪ್ರಾರಂಭಿಸಿತು. ಇದು ಸಂಪೂರ್ಣ ಕೆಲಸದ ಜಾಲವನ್ನು ಸ್ವಯಂಚಾಲಿತಗೊಳಿಸಲು ಅನುವು ಮಾಡಿಕೊಟ್ಟಿತು. ಹರಿಯಾಣ ಸರ್ಕಾರವು ಇ-ಆಫೀಸ್ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೊಳಿಸುತ್ತಿದೆ.

'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ' ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಈಡೇರಿಸಲು ಕೇಂದ್ರವು ಈಶಾನ್ಯ ರಾಜ್ಯಗಳಲ್ಲಿ ಇ-ಆಫೀಸ್ ಸ್ಥಾಪಿಸಲು ಸಜ್ಜಾಗಿದೆ. ಇ-ಆಫೀಸ್ ವ್ಯವಸ್ಥೆಯು ಕೆಲಸದ ಗುಣಮಟ್ಟ ಉತ್ತೇಜಿಸುತ್ತದೆ ಮತ್ತು ವಹಿವಾಟು ಸಮಯ ತಗ್ಗಿಸುತ್ತದೆ. ನಾಗರಿಕರು ತಮ್ಮ ಕೆಲಸ-ಕಾರ್ಯಗಳಿಗೆ ಸರ್ಕಾರಿ ಕಚೇರಿಗಳಲ್ಲಿ ಸರತಿ ನಿಲ್ಲುವುದು ಮತ್ತು ಲಂಚವನ್ನು ದೂರವಿಡುವಂತೆ ಮಾಡಬಹುದು. ಇದನ್ನು ಸಾಕಾರಗೊಳಿಸಲು ಪ್ರತಿಯೊಬ್ಬ ನಾಗರಿಕ ಇಂಟರ್​ನೆಟ್​ಗೆ ಪ್ರವೇಶ ಪಡೆಯಬೇಕು.

ಭಾರತವನ್ನು ಡಿಜಿಟಲ್ ಸಬಲೀಕೃತ ಸಮಾಜ ಮತ್ತು ಜ್ಞಾನದ ಆರ್ಥಿಕತೆಯನ್ನಾಗಿ ಪರಿವರ್ತಿಸುವ ದೃಷ್ಟಿಯಿಂದ ಕೇಂದ್ರ, 2015ರಲ್ಲಿ ಡಿಜಿಟಲ್ ಇಂಡಿಯಾ ಅಭಿಯಾನ ಪ್ರಾರಂಭಿಸಿತ್ತು. 2022ರ ವೇಳೆಗೆ ಪ್ರತಿ ನಾಗರಿಕರಿಗೆ 50 ಎಮ್‌ಬಿಪಿಎಸ್‌ನಲ್ಲಿ ಸಾರ್ವತ್ರಿಕ ಬ್ರಾಡ್‌ಬ್ಯಾಂಡ್ ಒದಗಿಸುವ ಉದ್ದೇಶದಿಂದ ಕರಡು ಹೊಸ ಟೆಲಿಕಾಂ ನೀತಿ ಜಾರಿಗೆ ತಂದಿತ್ತು. ಈ ವರ್ಷದ ಆರಂಭದಲ್ಲಿ ಭಾರತ್‌ ನೆಟ್ ಯೋಜನೆಯ ಮೂಲಕ 1,30,000 ಗ್ರಾಮಗಳು ಮತ್ತು 48,000 ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್‌ ಸಂಪರ್ಕ ಕಲ್ಪಿಸಲಾಗಿದೆ ಎಂದು ಕೇಂದ್ರ ಘೋಷಿಸಿತು. ಆದರೆ, ವಾಸ್ತವದ ಚಿತ್ರಣವು ವಿಭಿನ್ನವಾಗಿದೆ ಎನ್ನಲಾಗುತ್ತಿದೆ. ಗ್ರಾಮ ಪಂಚಾಯಿತಿಗಳಲ್ಲಿ ಕೇವಲ 8 ಪ್ರತಿಶತ ಮಾತ್ರ ಡಿಜಿಟಲ್ ಯೋಜನೆ ಸಾಕಾರಗೊಂಡಿದೆ ಎಂದು ಸಮೀಕ್ಷೆಗಳು ಹೇಳುತ್ತವೆ.

ಪ್ರಸ್ತುತ, ಭಾರತದಲ್ಲಿ 50 ಕೋಟಿಗೂ ಹೆಚ್ಚು ಸ್ಮಾರ್ಟ್‌ಫೋನ್ ಬಳಕೆದಾರರಿದ್ದಾರೆ. ರಾಷ್ಟ್ರೀಯ ಮಾದರಿ ಸಮೀಕ್ಷೆಯ ಪ್ರಕಾರ, ದೇಶದ 11 ಪ್ರತಿಶತದಷ್ಟು ಕುಟುಂಬಗಳು ಕಂಪ್ಯೂಟರ್ ಮತ್ತು ಇಂಟರ್​ನೆಟ್​ ಸೌಲಭ್ಯ ಹೊಂದಿವೆ. 56 ಕೋಟಿಯ ಮೂಲಕ ಅತಿ ಹೆಚ್ಚು ಇಂಟರ್​​​ನೆಟ್​ ಬಳಕೆದಾರರನ್ನು ಭಾರತ ಹೊಂದಿದೆ. ಆದರೆ, ಜಾಗತಿಕವಾಗಿ ಓಕ್ಲಾದ ಮೊಬೈಲ್ ಬ್ರಾಡ್‌ಬ್ಯಾಂಡ್ ವೇಗ ಸೂಚ್ಯಂಕದಲ್ಲಿ ಭಾರತ 132ನೇ ಸ್ಥಾನದಲ್ಲಿದೆ. ಶ್ರೀಲಂಕಾ, ಪಾಕಿಸ್ತಾನ ಮತ್ತು ನೇಪಾಳ ಶ್ರೇಯಾಂಕದಲ್ಲಿ ಉತ್ತಮ ಸ್ಥಾನ ಪಡೆದಿವೆ. ಕಾಶ್ಮೀರ ಕಣಿವೆಯಲ್ಲಿನ ನಿರ್ಬಂಧಗಳ ವಿರುದ್ಧದ ಹಲವು ಮನವಿಗಳಿಗೆ ಪ್ರತಿಕ್ರಿಯೆಯಾಗಿ ಸುಪ್ರೀಂ ಕೋರ್ಟ್, 'ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ 19ನೇ ವಿಧಿ ಅನ್ವಯ ಇಂಟರ್​ನೆಟ್ ಪ್ರವೇಶ ಮೂಲಭೂತ ಹಕ್ಕು' ಎಂದು ಹೇಳಿದೆ.

ಡಿಜಿಟಲ್ ಇಂಡಿಯಾದ ಕನಸನ್ನು ನನಸು ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಬೇಕು. ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ತಡೆರಹಿತ ಇ-ಆಡಳಿತ ಮತ್ತು ಇ-ಕಲಿಕೆ ಬಹಳ ದೂರ ಸಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.