ETV Bharat / business

ಮಹಾರಾಷ್ಟ್ರದಲ್ಲಿ 498 ಕೋಟಿ ರೂ. ಮೌಲ್ಯದ ತೆರಿಗೆ ವಂಚನೆ ಪತ್ತೆಹಚ್ಚಿದ ಜಿಎಸ್​ಟಿ ಗುಪ್ತದಳ

author img

By

Published : Jan 8, 2021, 6:50 PM IST

ನಕಲಿ ಇನ್‌ವಾಯ್ಸ್‌ಗಳ ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿ, ಕಳೆದ ಹದಿನೈದು ದಿನಗಳಲ್ಲಿ ಮಹಾರಾಷ್ಟ್ರದಾದ್ಯಂತ ವಿವಿಧ ಕೈಗಾರಿಕಾ ಕ್ಷೇತ್ರ ಒಳಗೊಂಡ ಹಲವು ಸ್ಥಳಗಳಲ್ಲಿ ಡಿಜಿಪಿಐ, ನಾಗ್ಪುರ ವಲಯ ಘಟಕದ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ..

Fraud
ವಂಚನೆ

ನಾಗ್ಪುರ : ಜಿಎಸ್‌ಟಿ ಗುಪ್ತದಳ ಮಹಾ ನಿರ್ದೇಶಕರ (ಡಿಜಿಜಿಐ) ತಂಡ ಮಹಾರಾಷ್ಟ್ರದಲ್ಲಿ 26 ಘಟಕಗಳಿಂದ 498.50 ರೂ. ಮೋಸದ ವಹಿವಾಟು ಪತ್ತೆ ಹಚ್ಚಿದ್ದಾರೆ. 26 ಘಟಕಗಳ ಪೈಕಿ 12.78 ಕೋಟಿ ರೂ. ಮೌಲ್ಯದ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಸೇರಿದ್ದು, ಸ್ಥಳದಲ್ಲೇ ನಗದು ವಸೂಲಿ ಮಾಡಲಾಗಿದೆ. ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಡಿಜಿಜಿಐ ಪ್ರಕಟಣೆಯಲ್ಲಿ ತಿಳಿಸಿದೆ.

ನಕಲಿ ಇನ್‌ವಾಯ್ಸ್‌ಗಳ ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿ, ಕಳೆದ 15 ದಿನಗಳಲ್ಲಿ ಮಹಾರಾಷ್ಟ್ರದಾದ್ಯಂತ ವಿವಿಧ ಕೈಗಾರಿಕಾ ಕ್ಷೇತ್ರ ಒಳಗೊಂಡ ಹಲವು ಸ್ಥಳಗಳಲ್ಲಿ ಡಿಜಿಪಿಐ, ನಾಗ್ಪುರ ವಲಯ ಘಟಕದ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.

ತನಿಖೆಯ ಸಮಯದಲ್ಲಿ ಘಟಕಗಳು ಸುಪಾರಿ ಮತ್ತು ಕಲ್ಲಿದ್ದಲಿನಿಂದ ಹಿಡಿದು ಜವಳಿ ಮತ್ತು ಕಬ್ಬಿಣ ಉತ್ಪನ್ನಗಳವರೆಗೆ ವಿವಿಧ ರೀತಿಯ ಸರಕುಗಳ ವ್ಯಾಪಾರ ತೆರಿಗೆ ವಂಚನೆ ಮಾಡುತ್ತಿರುವುದು ಕಂಡು ಬಂದಿದೆ.

ಬಹುತೇಕ ಘಟಕಗಳು ಅಸ್ತಿತ್ವದಲ್ಲಿಲ್ಲ. ಈ ಸಂಸ್ಥೆಗಳ ವ್ಯಾಪಾರ ಪುರಾವೆಯಾಗಿ ವಿದ್ಯುತ್ ಬಿಲ್‌, ಬಾಡಿಗೆ ಒಪ್ಪಂದಗಳಂತಹ ನಕಲಿ ದಾಖಲೆಗಳನ್ನು ಜಿಎಸ್‌ಟಿ ಪೋರ್ಟಲ್‌ನಲ್ಲಿ ಸಲ್ಲಿಸಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಮುಂಬೈನಲ್ಲಿ ಗೂಳಿ ಗುಟುರು : 689 ಅಂಕ ಜಿಗಿದ ಸೆನ್ಸೆಕ್ಸ್.. 50 ಸಾವಿರಕ್ಕೆ ಒಂದೆಜ್ಜೆ!

ಕಾರ್ಯನಿರ್ವಹಿಸುತ್ತಿರುವ ಘಟಕಗಳಿಗೆ ಸಂಬಂಧ ಅಧಿಕೃತ ವ್ಯಕ್ತಿಗಳಿಂದ ಯಾವುದೇ ಸರಕುಗಳನ್ನು ಸ್ವೀಕರಿಸದೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯುವಲ್ಲಿ ಇವುಗಳು ಅಳವಡಿಸಿಕೊಂಡ ಮೋಸದ ಜಾಲ ದೃಢಪಟ್ಟಿವೆ ಎಂದು ಡಿಜಿಜಿಐ ತಿಳಿಸಿದೆ.

498.50 ಕೋಟಿ ರೂ. ಕಾಲ್ಪನಿಕ ಕಾಗದದ ವಹಿವಾಟಿನಿಂದ ಪಡೆದ ಒಟ್ಟು 89.73 ಕೋಟಿ ರೂ. ಒಟ್ಟು ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್​​ನಲ್ಲಿ ಈಗಾಗಲೇ 12.78 ಕೋಟಿ ರೂ. ಪಡೆಯಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.