ನವದೆಹಲಿ: ಕೊರೊನಾ ಪ್ರೇರೇಪಿತ ಲಾಕ್ಡೌನ್ ಹಾಗೂ ಕೊರೊನಾ ಪೂರ್ವದ ಜನರ ಉಪಭೋಗದ ಕುಸಿತದ ಪ್ರಭಾವದಿಂದ ದೇಶದ ಆರ್ಥಿಕತೆ ದಾಖಲೆಯ ಪ್ರಮಾಣದಲ್ಲಿ ಕ್ಷೀಣಿಸಿದೆ. ಪ್ರತಿಪಕ್ಷಗಳು ಆಗಾಗ ಕೇಂದ್ರದ ವಿತ್ತೀಯ ನೀತಿಗಳನ್ನು ಟೀಕಿಸಿಕೊಂಡು ಬರುತ್ತಿವೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ತೀಕ್ಷ್ಣವಾಗಿ ಆರೋಪ ಮಾಡಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಜಿಡಿಪಿಗೆ ಸಂಬಂಧಿಸಿದ ದತ್ತಾಂಶವು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಆರ್ಥಿಕತೆಯು 2020-21ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ 23.9ರಷ್ಟು ಕುಗ್ಗಿದೆ. ಇದು ಸುಮಾರು 40 ವರ್ಷಗಳಲ್ಲೇ ಮೊದಲ ಬಾರಿಗೆ ಸಂಕುಚಿತಗೊಂಡಿದೆ.
-
मोदी जी का ‘कैश-मुक्त’ भारत दरअसल ‘मज़दूर-किसान-छोटा व्यापारी’ मुक्त भारत है।
— Rahul Gandhi (@RahulGandhi) September 3, 2020 " class="align-text-top noRightClick twitterSection" data="
जो पाँसा 8 नवंबर 2016 को फेंका गया था, उसका एक भयानक नतीजा 31 अगस्त 2020 को सामने आया।
GDP में गिरावट के अलावा नोटबंदी ने देश की असंगठित अर्थव्यवस्था को कैसे तोड़ा ये जानने के लिए मेरा वीडियो देखिए। pic.twitter.com/GzovcTXPDv
">मोदी जी का ‘कैश-मुक्त’ भारत दरअसल ‘मज़दूर-किसान-छोटा व्यापारी’ मुक्त भारत है।
— Rahul Gandhi (@RahulGandhi) September 3, 2020
जो पाँसा 8 नवंबर 2016 को फेंका गया था, उसका एक भयानक नतीजा 31 अगस्त 2020 को सामने आया।
GDP में गिरावट के अलावा नोटबंदी ने देश की असंगठित अर्थव्यवस्था को कैसे तोड़ा ये जानने के लिए मेरा वीडियो देखिए। pic.twitter.com/GzovcTXPDvमोदी जी का ‘कैश-मुक्त’ भारत दरअसल ‘मज़दूर-किसान-छोटा व्यापारी’ मुक्त भारत है।
— Rahul Gandhi (@RahulGandhi) September 3, 2020
जो पाँसा 8 नवंबर 2016 को फेंका गया था, उसका एक भयानक नतीजा 31 अगस्त 2020 को सामने आया।
GDP में गिरावट के अलावा नोटबंदी ने देश की असंगठित अर्थव्यवस्था को कैसे तोड़ा ये जानने के लिए मेरा वीडियो देखिए। pic.twitter.com/GzovcTXPDv
ಈ ಬಳಿಕ ಪ್ರತಿಪಕ್ಷಗಳು ಕೇಂದ್ರದ ನಡೆಯನ್ನು ಕಟುವಾಗಿ ಟೀಕಿಸಲು ಆರಂಭಿಸಿವೆ. ಖಾಲಿ ಘೋಷಣೆ ಬದಲು ಯುವಕರಿಗೆ ಉದ್ಯೋಗ ನೀಡಿ ಎಂದಿದ್ದ ರಾಹುಲ್ ಗಾಂಧಿ, ಇಂದು ಕೇಂದ್ರದ ಆರ್ಥಿಕ ನಡೆ ಖಂಡಿಸಿ ವಿಡಿಯೋ ಒಂದನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಮೋದಿಜೀ ಅವರ 'ನಗದು ರಹಿತ ಭಾರತ' ನಿಜವಾಗಿಯೂ ಕಾರ್ಮಿಕ, ರೈತ, ಸಣ್ಣ ವ್ಯಾಪಾರಿಗಳ ಮುಕ್ತ ಭಾರತವಾಗಿದೆ. 2016ರ ನವೆಂಬರ್ 8ರಂದು ತೆಗೆದುಕೊಂಡ ಭೀಕರ ನೋಟುರದ್ದತಿ ಪರಿಣಾಮ 2020ರ ಆಗಸ್ಟ್ 31ರಂದು ಅನಾವರಣಗೊಂಡಿತು ಎಂದು ಟ್ವೀಟ್ ಮಾಡಿದ್ದಾರೆ.
ಜಿಡಿಪಿ ಕುಸಿತದ ಜೊತೆಗೆ ನೋಟು ರದ್ದತಿಯು ದೇಶದ ಅಸಂಘಟಿತ ಆರ್ಥಿಕತೆಯನ್ನು ಹೇಗೆ ಛಿದ್ರಗೊಳಿಸಿದೆ ಎಂಬುದನ್ನು ತಿಳಿಯಲು ನನ್ನ ವಿಡಿಯೋ ನೋಡಿ ಎಂದು ಬರೆದುಕೊಂಡಿದ್ದಾರೆ ರಾಹುಲ್.
2016ರ ನೋಟು ರದ್ದತಿಯ ಲಾಭ ಯಾರಿಗೆ ಸಿಕ್ಕಿತು? ಇದರ ಲಾಭವನ್ನು ಭಾರತದ ಅತಿದೊಡ್ಡ ಶತಕೋಟ್ಯಾಧಿಪತಿಗಳಿಗೆ ನೀಡಲಾಯಿತು. ನಿಮ್ಮ ಜೇಬಿನಲ್ಲಿ ನೀವು ಹೊಂದಿದ್ದ ಹಣ, ನಿಮ್ಮ ಮನೆಗಳಲ್ಲಿ ನೀವು ಇಟ್ಟಿದ್ದ ಹಣವನ್ನು ಬ್ಯಾಂಕ್ಗಳಲ್ಲಿ ಇಟ್ಟಿದ್ದೀರಾ. ಆದ್ರೆ ಆ ಹಣ ಉದ್ಯಮಿಗಳ ಸಾಲಗಳನ್ನು ಮನ್ನಾ ಮಾಡಲು ಸರ್ಕಾರವು ತೆಗೆದುಕೊಂಡು ಹೋಗಿದೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.
ನೋಟ್ಬ್ಯಾನ್ನ ಎರಡನೆಯ ಗುರಿಯು ಅನೌಪಚಾರಿಕ ಅಥವಾ ಅಸಂಘಟಿತ ವಲಯವನ್ನು ಒಳಗೊಂಡು ಇಡೀ ವ್ಯವಸ್ಥೆಯಿಂದ ಹಣವನ್ನು ಅಳಿಸಿಹಾಕುವ ಗುರಿ ಹೊಂದಿದೆ. ಪ್ರಧಾನಮಂತ್ರಿಯವರು ತಮಗೆ ಕ್ಯಾಶ್ಲೆಸ್ ಭಾರತ ಬೇಕು ಎನ್ನುತ್ತಿದ್ದಾರೆ. ಆದರೆ ಕ್ಯಾಶ್ಲೆಸ್ ಭಾರತವಿದ್ದರೆ, ಅನೌಪಚಾರಿಕ ವಲಯವು ನಾಶವಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಜನರು ತಾವು ಉಳಿಸಿದ ಹಣವನ್ನು ಬ್ಯಾಂಕ್ಗಳಲ್ಲಿ ಕೂಡಿಟ್ಟಿದ್ದ ಹಣ ಉದ್ಯಮಿಗಳ ಕೈಸೇರಿದೆ. ಈ ಹಣದಲ್ಲೇ ಸುಮಾರು 50 ಉದ್ಯಮಿಗಳ 68,607 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ ರಾಹುಲ್ ಗಾಂಧಿ ದೂರಿದ್ದಾರೆ.