ETV Bharat / business

ಕರ್ನಾಟಕ ರಾಜಕೀಯ ಬಿಕ್ಕಟ್ಟಿನಿಂದ ದೇಶದ ಆರ್ಥಿಕತೆಗೆ ಹೊಡೆತ: ಚಿದು ಆತಂಕ -

ಕರ್ನಾಟಕ ಮತ್ತು ಗೋವಾದಲ್ಲಿ ನಡೆಯುತ್ತಿರುವ ರಾಜಕೀಯ ಗೊಂದಲ ಹೇಗಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಇದು ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ನೀಡಲಿದೆ. ಹೂಡಿಕೆದಾರರು, ರೇಟಿಂಗ್​ ಏಜೆನ್ಸಿ, ಅಂತಾರಾಷ್ಟ್ರೀಯ ಸಂಸ್ಥೆಗಳು ಭಾರತೀಯ ಪತ್ರಿಕೆಗಳನ್ನು ಓದುವುದಿಲ್ಲ. ಇಲ್ಲಿನ ಟಿವಿ ಚಾನೆಲ್​ಗಳನ್ನು ವೀಕ್ಷಿಸುವುದಿಲ್ಲ. ಇಲ್ಲಿನ ರಾಜಕೀಯ ಸ್ಥಿರತೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಾರೆ ಎಂದು ಕಾಂಗ್ರೆಸ್​ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ.

ರಾಜ್ಯ ಸಭೆಯಲ್ಲಿ ಕರ್ನಾಟಕ, ಗೋವಾ ರಾಜಕೀಯ ವಿದ್ಯಾಮಾನ ಬಗ್ಗೆ ಪಿ. ಚಿದಂಬರಂ ಮಾತನಾಡಿದರು
author img

By

Published : Jul 11, 2019, 8:43 PM IST

ನವದೆಹಲಿ: ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಅಸ್ಥಿರತೆಯ ಗೊಂದಲ ಇಡೀ ದೇಶದ ಗಮನ ಸೆಳೆದಿದ್ದು, 'ರಾಜ್ಯಗಳ ರಾಜಕೀಯ ಪ್ರಕ್ಷುಬ್ಧತೆ ದೇಶದ ಆರ್ಥಿಕತೆಗೆ ಹೊಡೆತ ನೀಡುತ್ತದೆ' ಎಂದು ಮಾಜಿ ಹಣಕಾಸು ಸಚಿವ, ಕಾಂಗ್ರೆಸ್​ ಮುಖಂಡ ಪಿ. ಚಿದಂಬರಂ ವಿಶ್ಲೇಷಿಸಿದ್ದಾರೆ.

'ನಿನ್ನೆ ಭಾರತ ಕ್ರಿಕೆಟ್ ಪಂದ್ಯದಲ್ಲಿ ಸೋತ ಕಾರಣ ನಾನು ಅತೃಪ್ತಿ ಹೊಂದಿಲ್ಲ. ಆದರೆ, ದೇಶದ ಪ್ರಜಾಪ್ರಭುತ್ವವು ಪ್ರತಿದಿನ ಹೊಡೆತ ಅನುಭವಿಸುತ್ತಿದೆ ಎಂಬುದಕ್ಕೆ ನನಗೆ ತುಂಬಾ ಬೇಸರವಾಗುತ್ತಿದೆ' ಎಂದು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ರಾಜ್ಯ ಸಭೆಯಲ್ಲಿ ಕರ್ನಾಟಕ, ಗೋವಾ ರಾಜಕೀಯ ವಿದ್ಯಾಮಾನ ಬಗ್ಗೆ ಪಿ. ಚಿದಂಬರಂ ಮಾತನಾಡಿದರು

ಕರ್ನಾಟಕ ಮತ್ತು ಗೋವಾದಲ್ಲಿ ನಡೆಯುತ್ತಿರುವ ರಾಜಕೀಯ ಗೊಂದಲ ಹೇಗಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಇದು ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ನೀಡಲಿದೆ. ಹೂಡಿಕೆದಾರರು, ರೇಟಿಂಗ್​ ಏಜೆನ್ಸಿ, ಅಂತರಾಷ್ಟ್ರೀಯ ಸಂಸ್ಥೆಗಳು ಭಾರತೀಯ ಪತ್ರಿಕೆಗಳನ್ನು ಓದುವುದಿಲ್ಲ. ಇಲ್ಲಿನ ಟಿವಿ ಚಾನೆಲ್​ಗಳನ್ನು ವೀಕ್ಷಿಸುವುದಿಲ್ಲ. ಇಲ್ಲಿನ ರಾಜಕೀಯ ಸ್ಥಿರತೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಾರೆ. ರಾಜಕೀಯ ಸುಭದ್ರತೆ, ರಾಜಕೀಯ ಏರಿಳಿತದತ್ತ ಸೂಕ್ಷ್ಮದೃಷ್ಟಿ ನೆಟ್ಟಿರುತ್ತಾರೆ. ಇಂತಹ ರಾಜಕೀಯ ಪ್ರಕ್ಷುಬ್ಧತೆ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ವಿವರಿಸಿದ್ದಾರೆ.

ಆಡಳಿತರೂಢ ಪಕ್ಷ ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡು, ತನ್ನ ಆರ್ಥಿಕ ಗುರಿಗಳನ್ನು ತಲುಪಬೇಕಾದರೆ ರಾಜ್ಯಗಳ ರಾಜಕೀಯ ಸ್ಥಿರತೆ ಕೂಡ ಮುಖ್ಯವಾಗುತ್ತದೆ ಎಂಬುದನ್ನು ಅರಿತಿರಬೇಕು ಎಂದು ಎಚ್ಚರಿಸಿದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.