ನವದೆಹಲಿ: ಸಾಲದ ಹಣಗಳಿಕೆ ಸರ್ಕಾರದ ಕಾರ್ಯಸೂಚಿಯಲ್ಲಿಲ್ಲ. ಆದರೆ, ಆದಾಯ ಸಂಗ್ರಹಣಾ ಕ್ಷೇತ್ರದಲ್ಲಿ ಕೆಲವು ಸಕಾರಾತ್ಮಕ ಚಿಹ್ನೆಗಳು ಕಾಣಿಸುತ್ತಿವೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದರು.
ಫಿಕ್ಕಿ ಆಯೋಜಿಸಿರುವ ವರ್ಚ್ಯುವಲ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ಈ ಸಮಯದಲ್ಲಿ ನಾನು ಕೆಲವು ಲೆಕ್ಕಾಚಾರಗಳನ್ನು ಹಾಕಿಕೊಂಡಿದ್ದೇನೆ. ನನ್ನ ಮನಸ್ಸಿನಲ್ಲಿ ಕೆಲವು ಯೋಜನೆಗಳಿವೆ. ಆರ್‌ಬಿಐ ಈ ಸಮಯದಲ್ಲಿ ನಮಗೆ ಸಾಕಷ್ಟು ಸಹಾಯ ಮಾಡಿದೆ. ಈ ಸಮಯದಲ್ಲಿ ಹಣಗಳಿಸುವಿಕೆಯು ನಮ್ಮ ಮುಂದೆ ಇಲ್ಲ. ಈ ಬಗ್ಗೆಯೂ ಕೇಂದ್ರೀಯ ಬ್ಯಾಂಕಿನೊಂದಿಗೆ ಚರ್ಚಿಸಿಲ್ಲ ಎಂದರು.
ಆದಾಯ ಹೆಚ್ಚುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಿಂದ ಸರ್ಕಾರವು ಕೆಲವು ಹೆಚ್ಚುವರಿ ಆದಾಯ ಪಡೆಯುತ್ತಿದೆ. ಇದು ನಮಗೆ ಸಹಾಯ ಮಾಡಲಿದೆ. ನೋಡೋಣ, ನನ್ನ ಕೈಗೆ ದತ್ತಾಂಶ ಬಂದರೇ 3-4 ತಿಂಗಳ ನಂತರ ಇದಕ್ಕೆ ಇನ್ನಷ್ಟು ಸ್ಪಷ್ಟವಾಗಿ ಉತ್ತರಿಸಬಲ್ಲೆ ಎಂದರು.
ಸಾಲದ ಹಣಗಳಿಕೆ ಎಂದರೆ ಸರ್ಕಾರವು ಯಾವುದೇ ತುರ್ತು ಖರ್ಚು ನಿಭಾಯಿಸಲು ಮತ್ತು ಹಣಕಾಸಿನ ಕೊರತೆ ನೀಗಿಸಲು ಕೇಂದ್ರ ಬ್ಯಾಂಕ್ ಮುದ್ರಣ ಕರೆನ್ಸಿ ಮೊರೆ ಹೋಗುತ್ತದೆ ಎಂಬುದನ್ನು ಅರ್ಥೈಸುತ್ತದೆ. ಸರ್ಕಾರವು ಈಗಾಗಲೇ ತನ್ನ ಸಾಲದ ಪ್ರಮಾಣವನ್ನು 7.8 ಲಕ್ಷ ಕೋಟಿ ರೂ.ಗಳಿಂದ 50 ಪ್ರತಿಶತದಷ್ಟು ಹೆಚ್ಚಿಸಿ 12 ಲಕ್ಷ ಕೋಟಿ ರೂ.ಗೆ ನಿಗದಿಪಡಿಸಿದೆ ಎಂದು ಬಜಾಜ್ ಹೇಳಿದರು.