ETV Bharat / business

ವಾರ್ಷಿಕ ಜಿಎಸ್​ಟಿ ರಿಟರ್ನ್​ ಸಲ್ಲಿಕೆ ಗಡುವು ವಿಸ್ತರಣೆ : ಕೊನೆ ದಿನಾಂಕ ಯಾವುದು?

ಈ ಸಮಯದ ಮಿತಿ ಪೂರೈಸುವಲ್ಲಿ ತೆರಿಗೆದಾರರು ವ್ಯಕ್ತಪಡಿಸಿದ ತೊಂದರೆಗಳನ್ನು ಗಮನದಲ್ಲಿರಿಸಿಕೊಂಡು, 2019-20ರ ಹಣಕಾಸು ವರ್ಷಕ್ಕೆ ಜಿಎಸ್​ಟಿಆರ್ -9 ಮತ್ತು ಜಿಎಸ್​ಟಿಆರ್ -9 ಸಿ ನಿಗದಿತ ದಿನಾಂಕವನ್ನು ಮುಂದೂಡಲು ಸರ್ಕಾರ ನಿರ್ಧರಿಸಿದೆ..

GST returns
GST returns
author img

By

Published : Mar 1, 2021, 12:09 PM IST

ನವದೆಹಲಿ : 2019-20ರ ಆರ್ಥಿಕ ವರ್ಷದ ವಾರ್ಷಿಕ ಜಿಎಸ್‌ಟಿ ರಿಟರ್ನ್​​​ ಸಲ್ಲಿಸುವ ಗಡುವನ್ನು ಕೇಂದ್ರವು ಮಾರ್ಚ್‌ 31ರವರೆಗೆ ವಿಸ್ತರಿಸಿದೆ.

ಈ ಮೊದಲು ರಿಟರ್ನ್ಸ್ ಸಲ್ಲಿಸುವ ಗಡುವನ್ನು ಫೆಬ್ರವರಿ 28ಕ್ಕೆ ವಿಸ್ತರಿಸಲಾಗಿತ್ತು. ಗಡುವು ಪೂರೈಸುವಲ್ಲಿ ತೆರಿಗೆದಾರರು ವ್ಯಕ್ತಪಡಿಸುವ ತೊಂದರೆಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಂದಾಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಬೂದಿಯಿಂದ ಮೇಲೆದ್ದು ಬಂದ ಗೂಳಿ: ಬೆಳಂಬೆಳಗ್ಗೆ 800 ಅಂಕ ಜಿಗಿದ ಸೆನ್ಸೆಕ್ಸ್​!

ಈ ಸಮಯದ ಮಿತಿ ಪೂರೈಸುವಲ್ಲಿ ತೆರಿಗೆದಾರರು ವ್ಯಕ್ತಪಡಿಸಿದ ತೊಂದರೆಗಳನ್ನು ಗಮನದಲ್ಲಿರಿಸಿಕೊಂಡು, 2019-20ರ ಹಣಕಾಸು ವರ್ಷಕ್ಕೆ ಜಿಎಸ್​ಟಿಆರ್ -9 ಮತ್ತು ಜಿಎಸ್​ಟಿಆರ್ -9 ಸಿ ನಿಗದಿತ ದಿನಾಂಕವನ್ನು ಮುಂದೂಡಲು ಸರ್ಕಾರ ನಿರ್ಧರಿಸಿದೆ. ಭಾರತದ ಚುನಾವಣಾ ಆಯೋಗದ ಅನುಮೋದನೆ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.