ETV Bharat / business

ವೈಯಕ್ತಿಕ ತೆರಿಗೆ ಹೊರೆ ತಗ್ಗಿಸಲು ಸಿಪಿಐ ಬೇಡಿಕೆ... ಬೇಡಿಕೆಗೆ ಮನ್ನಣೆ ನೀಡುತ್ತಾ ಕೇಂದ್ರ

ಆದಾಯ ಇಲಾಖೆ ಕಾರ್ಯದರ್ಶಿ ಅಜಯ್​ ಭೂಷಣ್​ ಪಾಂಡೆ ನೇತೃತ್ವದಲ್ಲಿ ನಡೆದ 2020-21ರ ಬಜೆಟ್​​ ಪೂರ್ವ ಸಭೆಯಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟ ಪ್ರತಿನಿಧಿಗಳು ಭಾಗವಹಿಸಿ, 'ಎಲ್ಲ ಕಾರ್ಪೊರೇಟ್​ ಕಂಪನಿಗಳ ತೆರಿಗೆಯನ್ನು 2023ರವರೆಗೆ ಶೇ 15ರಷ್ಟರ ಮಟ್ಟದಲ್ಲಿ ಇರಬೇಕು ಹಾಗೂ ಈಗಿನ ವೈಯಕ್ತಿಕ ತೆರಿಗೆ ಪ್ರಮಾಣ ಇನ್ನಷ್ಟು ಇಳಿಸುವಂತೆ ಕೋರಿಕೊಂಡರು.

Tax
ತೆರಿಗೆ
author img

By

Published : Dec 7, 2019, 1:51 PM IST

ನವದೆಹಲಿ: ವಹಿವಾಟಿನ ಮೊತ್ತವನ್ನು ಪರಿಗಣಿಸದೇ ಕಾರ್ಪೊರೇಟ್​ ತೆರಿಗೆಯನ್ನು ಶೇ 15ಕ್ಕೆ ಇಳಿಸಿ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಆದಾಯ ಇಲಾಖೆ ಕಾರ್ಯದರ್ಶಿ ಅಜಯ್​ ಭೂಷಣ್​ ಪಾಂಡೆ ನೇತೃತ್ವದಲ್ಲಿ ನಡೆದ 2020-21ರ ಬಜೆಟ್​​ ಪೂರ್ವ ಸಭೆಯಲ್ಲಿ ಸಿಐಐ ಪ್ರತಿನಿಧಿಗಳು ಭಾಗವಹಿಸಿ, 'ಎಲ್ಲ ಕಾರ್ಪೊರೇಟ್​ ಕಂಪನಿಗಳ ಬೇಡಿಕೆಯನ್ನು ಉತ್ತೇಜಿಸಲು ಹಾಗೂ ಬೆಳವಣಿಗೆ ನೆರವಾಗಲು ಶೇ 15ರಷ್ಟು ತೆರಿಗೆ ಕಡಿತ ಮಾಡಬೇಕು. ಮುಂದಿನ ಮೂರು ವರ್ಷಗಳ ವರೆಗೆ ಮಾತ್ರ ಈ ತೆರಿಗೆ ವಿನಾಯಿತಿ ನೀಡುವಂತೆ ಪ್ರಸ್ತಾಪಿಸಿದರು'.

ಜೂನ್​​ ತಿಂಗಳ ಮಧ್ಯಾಂತರ ಬಜೆಟ್​​ಗೂ ಮುನ್ನ ನಡೆದ ಸಭೆಯಲ್ಲಿ ಸಿಐಐ ಸಾಂಸ್ಥಿಕ ತೆರಿಗೆಯನ್ನು ಶೇ 25ಕ್ಕೆ ಇಳಿಸುವಂತೆ ಕೋರಿತ್ತು. ಕೇಂದ್ರ ಸರ್ಕಾರ ಸೆಪ್ಟೆಂಬರ್​ ತಿಂಗಳಲ್ಲಿ ಶೇ 30ರಷ್ಟಿದ್ದ ಕಾರ್ಪೊರೇಟ್​​ ತೆರಿಗೆಯನ್ನು ಶೇ 22ಕ್ಕೆ ಇಳಿಕೆ ಮಾಡಿತ್ತು. ಈಗ ಮತ್ತೆ ಶೇ 15ಕ್ಕೆ ತಗ್ಗಿಸುವಂತೆ ಬೇಡಿಕೆ ಇಟ್ಟಿದೆ.

ಬಳಕೆ, ಹೂಡಿಕೆ, ಸರ್ಕಾರಿ ವೆಚ್ಚ ಮತ್ತು ರಫ್ತು ವಹಿವಾಟಿಗೆ ಉತ್ತೇಜನ ನೀಡಲು ತೆರಿಗೆ ಹೊರೆ ತಗ್ಗಿಸುವ ಅಗತ್ಯವಿದೆ. ಕಾರ್ಪೊರೇಟ್​ ಮತ್ತು ವೈಯಕ್ತಿಕ ಆದಾಯ ತೆರಿಗೆ ಇಳಿಸುವುದರಿಂದ ಹೂಡಿಕೆ ಚಟುವಟಿಕೆ ಮತ್ತು ಗ್ರಾಹಕ ಬಳಕೆ ಪ್ರಮಾಣದಲ್ಲಿ ಏರಿಕೆ ಕಂಡುಬರಲಿದೆ. ಆರ್ಥಿಕ ಪ್ರಗತಿಗೆ ವೇಗ ಸಿಗಲಿದೆ ಎಂದು ಸಿಐಐ ಸ್ಪಷ್ಟನೆ ನೀಡಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.