ನವದೆಹಲಿ: ನಮ್ಯತೆ ಹಣದುಬ್ಬರ ಗುರಿ (ಎಫ್‌ಐಟಿ) ಚೌಕಟ್ಟಿನ ಪರಿಶೀಲನೆ ಶೀಘ್ರದಲ್ಲೇ ಬರಲಿದ್ದು, ಪ್ರಸ್ತುತ ಹಣದುಬ್ಬರ ಗುರಿ ಶೇ 4ರಷ್ಟಿನ ಜತೆಗೆ +/ -2ರ ಪ್ರತಿಶತದ ಸೈರಣೆ ಬ್ಯಾಂಡ್ ಗುರಿಯು ಮುಂದಿನ ಐದು ವರ್ಷ ಸೂಕ್ತವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ದೇಶವು 2016ರಲ್ಲಿ ಎಫ್‌ಐಟಿ ಚೌಕಟ್ಟು ಅಳವಡಿಸಿಕೊಂಡಿದ್ದು, ಹಣದುಬ್ಬರ ಗುರಿಯ ಮುಂದಿನ ಪರಿಶೀಲನೆಯು 2021ರ ಮಾರ್ಚ್ 31ಕ್ಕೂ ಮುನ್ನ ಬರಲಿದೆ.
ಬೆಲೆ ಸ್ಥಿರತೆಯನ್ನು ವ್ಯಾಖ್ಯಾನಿಸಲು ಪ್ರಸ್ತುತ ಸಂಖ್ಯಾತ್ಮಕ ಚೌಕಟ್ಟು, ಅಂದರೆ +/-2 ಸೈರಣೆ ಬ್ಯಾಂಡ್ ಶೇ 4ರ ಹಣದುಬ್ಬರ ಗುರಿ ಮುಂದಿನ ಐದು ವರ್ಷಗಳವರೆಗೆ ಸೂಕ್ತವಾಗಿದೆ ಎಂದು 'ಕರೆನ್ಸಿ ಮತ್ತು ಹಣಕಾಸು (ಆರ್ಸಿಎಫ್ ) 2020-21ರ ವರ್ಷ' ವರದಿಯಲ್ಲಿ ಆರ್‌ಬಿಐ ಹೇಳಿದೆ.
ಇದನ್ನೂ ಓದಿ: 3ನೇ ತ್ರೈಮಾಸಿಕದಲ್ಲಿ ಶೇ 0.4ರಷ್ಟು ಜಿಡಿಪಿ ಬೆಳವಣಿಗೆ: ತಾಂತ್ರಿಕ ಹಿಂಜರಿತದಿಂದ ಹೊರಬಂದ ಭಾರತ
ವರದಿಯಲ್ಲಿನ ಅಧ್ಯಯನದ ಅವಧಿಯು 2016ರ ಅಕ್ಟೋಬರ್ನಿಂದ 2020ರ ಮಾರ್ಚ್ ತನಕ ದೇಶದಲ್ಲಿ ಎಫ್‌ಐಟಿ ಚೌಕಟ್ಟಿನ ಔಪಚಾರಿಕ ಕಾರ್ಯಾಚರಣೆಯೊಂದಿಗೆ ಪ್ರಾರಂಭವಾಗುತ್ತಿದೆ. ಆದರೆ, ದತ್ತಾಂಶ ವಿರೂಪಗಳ ದೃಷ್ಟಿಯಿಂದ ಕೋವಿಡ್ -19 ಸಾಂಕ್ರಾಮಿಕ ಅವಧಿ ಹೊರತುಪಡಿಸಲಾಗುತ್ತಿದೆ ಎಂದಿದೆ.
ಎಫ್‌ಐಟಿ ಅವಧಿಯಲ್ಲಿ ಟ್ರೆಂಡ್ ಹಣದುಬ್ಬರವು ಒಂಬತ್ತು ಪ್ರತಿಶತಕ್ಕಿಂತಲೂ ಶೇ 3.8-4.3ರಷ್ಟಕ್ಕೆ ಇಳಿದಿದೆ. ಇದು ದೇಶದ ಹಣದುಬ್ಬರ ಗುರಿಯ ಶೇ 4ರಷ್ಟು ಸೂಕ್ತ ಮಟ್ಟವಾಗಿದೆ. ಶೇ 6ರ ಹಣದುಬ್ಬರ ದರವು ಹಣದುಬ್ಬರ ಗುರಿಯ ಸೂಕ್ತ ಸೈರಣೆ ಮಿತಿಯಾಗಿದೆ ಎಂದು ವರದಿ ಹೇಳಿದೆ.